Kannanda news
ಕೇಂದ್ರದಿಂದ ಕುಟುಂಬದ ಸ್ಥಿತಿಗತಿ, ಜಾತಿ ವಿವರ ಒಳಗೊಂಡ ಗಣತಿ ವೇಳಾಪಟ್ಟಿ ಪ್ರಕಟ
ಕೇಂದ್ರದಿಂದ ನಡೆಯಲಿರುವ ಜನಗಣತಿಗೆ ಗೃಹ ಸಚಿವಾಲಯ ವೇಳಾ ಪಟ್ಟಿ ಪ್ರಕಟಿಸಿದೆ. ಮನೆಪಟ್ಟಿ ಹಾಗೂ ಮನೆಗಣತಿ ಮತ್ತು ಜನಗಣತಿ ಹಂತಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. 2021ರ ಜನಗಣತಿಗೆ ಸಿದ್ಧಪಡಿಸಿದ್ದ ಎಲ್ಲ 33 ಪ್ರಶ್ನೆಗಳನ್ನೇ ಈ ಬಾರಿಯೂ ಬಳಸಿಕೊಳ್ಳಲಿದೆ. ಕೋವಿಡ್-19 ಕಾರಣದಿಂದ 2021ರ ಜನಗಣತಿ ಮುಂದೂಡಿಕೆಯಾಗಿತ್ತು. ಮನೆ ಭೇಟಿ ಹಂತದಲ್ಲಿ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ಮಾಹಿತಿ ಸಂಗ್ರಹ ನಡೆಯಲಿದೆ. ಕಟ್ಟಡ ಸಂಖ್ಯೆ, ಗಣತಿ ಮಾಡಲಾಗುವ ಮನೆಯ ಮಹಡಿ, ಗೋಡೆ ಮತ್ತು ಛಾವಣಿಗೆ
ಕೋಗಿಲು ಪ್ರಕರಣಕ್ಕೆ ಪ್ರತಿಕ್ರಿಯಿಸಲು ರಾಜ್ಯದ ಗಡಿ ಅಡ್ಡ ಬರುವುದಿಲ್ಲವೆಂದು ಪಿಣರಾಯಿ ಸಮರ್ಥನೆ
ಕೋಗಿಲು ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯನ್ನು ‘ಬುಲ್ಡೋಜರ್ ನ್ಯಾಯ’ ಎಂದು ಟೀಕಿಸಿ, ಕರ್ನಾಟಕ ಸರ್ಕಾರದ ಆಕ್ರೋಶಕ್ಕೆ ಗುರಿಯಾಗಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಇಂತಹ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ರಾಜ್ಯದ ಗಡಿ ಅಡ್ಡ ಬರುವುದಿಲ್ಲ ಎನ್ನುವ ಮೂಲಕ



