kannada news
ಅಗತ್ಯ ಔಷಧಗಳ ದರ ಏಪ್ರಿಲ್ 1ರಿಂದ ಶೇ 0.6ರಷ್ಟು ಏರಿಕೆ
ಕೇಂದ್ರ ಸರ್ಕಾರವು ಅಗತ್ಯ ಔಷಧಗಳ ಬೆಲೆ ಪರಿಷ್ಕರಣೆ ಪ್ರಕಟಿಸಿ ಈ ವರ್ಷ ಶೇಕಡ 0.6ರಷ್ಟು ದರ ಹೆಚ್ಚಳಕ್ಕೆ ಅವಕಾಶ ನೀಡಿದೆ. ಅಗತ್ಯ ಔಷಧಗಳ ಪಟ್ಟಿಯಲ್ಲಿರುವ 1000ಕ್ಕೂ ಹೆಚ್ಚು ಔಷಧಗಳಿಗೆ ಪರಿಷ್ಕೃತ ದರ ಅನ್ವಯವಾಗಲಿದೆ. ನೋವು ನಿವಾರಕಗಳು, ಆಂಟಿಬಯಾಟಿಕ್ಸ್, ಸೋಂಕು ನಿವಾರಕಗಳು, ಮಧುಮೇಹ ನಿರೋಧಕ ಔಷಧಗಳು ಮತ್ತು ಕ್ಯಾನ್ಸರ್ ಔಷಧಗಳ ಬೆಲೆ ಶೇಕಡ 0.6 ರಷ್ಟು ಹೆಚ್ಚಾಗಲಿದೆ. ಹೊಸ ದರಗಳು ಏಪ್ರಿಲ್ 1, 2026ರಿಂದ ಜಾರಿಗೆ ಬರಲಿವೆ. ಅಗತ್ಯ ಔಷಧಗಳ ಪಟ್ಟಿಯಲ್ಲಿ
ರಜೆ ನೀಡಲು ಕಿರಿಕ್, ಸಂಬಳ ಕಟ್ ಮಾಡಿದ ಮ್ಯಾನೇಜರ್‌ಗೆ ಗುಂಡಿಕ್ಕಿ ಫಿನಿಶ್ ಮಾಡಿದ ಸೆಕ್ಯುರಿಟಿ
ರಜೆಯನ್ನೂ ನೀಡದೆ, ಸಂಬಳದಲ್ಲೂ ಕಟ್ ಮಾಡಿದ್ದಕ್ಕೆ ರೊಚ್ಚಿಗೆದ್ದ ಸೆಕ್ಯುರಿಟಿ ಸಿಬ್ಬಂದಿ ಬ್ಯಾಂಕ್ ಮ್ಯಾನೇಜರ್‌ಗೆ ಶೂಟ್ ಮಾಡಿ ಕೊಂದು ಹಾಕಿರುವ ಘಟನೆ ಗಾಜಿಯಾಬಾದ್ನ ಲೋನಿ ಗಡಿಯಲ್ಲಿರುವ ಬಲರಾಮ್ ನಗರ ಬ್ಯಾಂಕ್ ಕಚೇರಿಯಲ್ಲಿ ನಡೆದಿದೆ. ಬ್ಯಾಂಕಿನೊಳಗೆ ನಡೆದ ಮಾತಿನ ಚಕಮಕಿಯ ನಂತರ ಪಂಜಾಬ್ ಮತ್ತು
ಇರಾನ್ ಅನಿಲ ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ನಾವಲ್ಲ ಎಂದ ಟ್ರಂಪ್
ಇರಾನ್‌ನ ಅನಿಲ ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ ನಡೆಸುವ ಬಗ್ಗೆ ನಮಗೇನೂ ತಿಳಿದಿರಲಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ದಾಳಿಗಳ ಬಗ್ಗೆ ಕೋಪಗೊಂಡು ದಕ್ಷಿಣ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಅದಕ್ಕೂ
ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ: ಸಂತೋಷ್ ಲಾಡ್
ಸರ್ಕಾರದ ವತಿಯಿಂದ ಆಯೋಜಿಸುವ ಉತ್ಸವಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವುದು ಹಾಗೂ ಅಬ್ಬರದ ಡಿ. ಜೆ ಸಿಸ್ಟಂ ಬಳಕೆಗೆ ಕಡಿವಾಣ ಹಾಕುವ ಕುರಿತು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ವಿಧಾನಸಭೆಯ ಕಲಾಪದಲ್ಲಿ ಸಲಹೆಗಳನ್ನು ನೀಡಿದರು. ಸರ್ಕಾರ ಆಯೋಜಿಸುವ ಉತ್ಸವಗಳಲ್ಲಿ
“ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ” ಬ್ಯಾನ್: ಜೋಗಿ ಪ್ರೇಮ್‌ಗೆ ಚುರುಕು ಮುಟ್ಟಿಸಿದ ಕೇಂದ್ರ
ಜೋಗಿ ಪ್ರೇಮ್ ನಿರ್ದೇಶನ ಹಾಗೂ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾದ ‘ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ’ ಹಾಡಿಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿದ್ದು, ಹಾಡನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಈ ಹಾಡಿನ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.
ನಾಮಪತ್ರ ಸಲ್ಲಿಕೆಗೆ ಆರು ದಿನ ಮಾತ್ರ ಬಾಕಿ: ಬಾಗಲಕೋಟೆಯಲ್ಲಿ ಘೋಷಣೆಯಾಗದ ಕೈ-ಕಮಲ ಟಿಕೆಟ್
-ಬಾಲಚಂದ್ರ ರೂಗಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷಗಳು ಇನ್ನೂವರೆಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಶುರುವಾಗಿದೆ. ಮಾರ್ಚ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಇನ್ನು ಆರು ದಿನ ಮಾತ್ರ ಬಾಕಿ ಉಳಿದಿದ್ದು, ಅಭ್ಯರ್ಥಿಗಳ
ಯಡ್ರಾಮಿಯಲ್ಲಿ ಸತತ 3ನೇ ವರ್ಷ ರಂಜಾನ್ ಉಪವಾಸ ಆಚರಿಸಿದ ಹಿಂದೂ ಯುವಕ
ಎಲ್ಲ ಧರ್ಮಗಳನ್ನು ಒಳಗೊಳ್ಳುವ ಮನುಷ್ಯ ಧರ್ಮವೇ ಶ್ರೇಷ್ಟ ಎಂಬುದನ್ನು ಸಾರುವಂತೆ ಯಡ್ರಾಮಿ ಪಟ್ಟಣದಲ್ಲಿ ಹಿಂದೂ ಯುವಕ ಸತತ ಮೂರನೇ ವರ್ಷ ರಂಜಾನ್ ಉಪವಾಸ ಆಚರಿಸಿ , ನಮಾಜ್ ಮಾಡಿ ಸುದ್ದಿಯಾಗಿದ್ದಾರೆ. ಪವಿತ್ರ ರಂಜಾನ್ ಮಾಸದಲ್ಲಿ ಸತತ ಮೂರು ವರ್ಷಗಳಿಂದ ಉಪವಾಸ (ರೋಜಾ)
ರೀಲ್ಸ್ ವ್ಯಸನ: ವೃದ್ಧರನ್ನು ಕೊರಿಯರ್ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಕುಟುಂಬ
ರೀಲ್ಸ್ ಮಾಡುವ ವ್ಯಸನಕ್ಕೆ ವೃದ್ಧ ವ್ಯಕ್ತಿಯನ್ನು ಚೀಲದಲ್ಲಿ ಹಾಕಿ ಕೂರಿಯರ್ ಮಾಡಲು ಕುಟುಂಬವೊಂದು ಯತ್ನಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆ, ಆಕೆಯ ಪತಿ, ಅತ್ತೆ ಹಾಗೂ ಮಾವ ಸೇರಿ ಐವರು ಮಂಗಳವಾರ ವೈಯ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೂರಿಯರ್ ಕಚೇರಿಗೆ ದೊಡ್ಡ
ವೀಸಾ ಮುಗಿದಿದ್ದರೂ ಬೆಂಗಳೂರಿನಲ್ಲಿ 542 ವಿದೇಶಿಗರು ಅಕ್ರಮ ವಾಸ
ವೀಸಾ ಅವಧಿ ಮೀರಿ ವಾಸಿಸುತ್ತಿರುವ 588 ವಿದೇಶಿಗರಲ್ಲಿ, ಹೆಚ್ಚಿನವರು ಬೆಂಗಳೂರು ನಗರದಲ್ಲೇ 542 ಮಂದಿ ಪತ್ತೆಯಾಗಿದ್ದಾರೆ. ಇನ್ನುಳಿದಂತೆ ಮೈಸೂರಿನಲ್ಲಿ 26, ಮಂಗಳೂರಿನಲ್ಲಿ 1, ಹುಬ್ಬಳ್ಳಿ-ಧಾರವಾಡದಲ್ಲಿ 2, ಬೆಂಗಳೂರು ಗ್ರಾಮಾಂತರದಲ್ಲಿ 11, ರಾಮನಗರದಲ್ಲಿ 4, ಉತ್ತರ ಕನ್ನಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಲಾ
ವಸತಿ ಕಟ್ಟಡದಲ್ಲಿ ಬೆಂಕಿ ದುರಂತ: ಎಂಟು ಮಂದಿ ಸಾವು
ವಸತಿ ಕಟ್ಟಡವೊಂದರಲ್ಲಿ ಬುಧವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಎಂಟು ಮಂದಿ ಮೃತಪಟ್ಟಿರುವ ಘಟನೆ ನೈಋತ್ಯ ದೆಹಲಿಯ ಪಾಲಂ ಪ್ರದೇಶದಲ್ಲಿ ನಡೆದಿದೆ. ಮುಂಜಾನೆ ಏಳು ಗಂಟೆಯಷ್ಟೊತ್ತಿಗೆ ಅಗ್ನಿ ದುರಂತದ ಬಗ್ಗೆ ಕರೆ ಬಂದಿದೆ. ಘಟನಾ ಸ್ಥಳಕ್ಕೆ 30 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ರಕ್ಷಣಾ




