Menu

ಐವಿಎಫ್, ಸರೊಗಸಿ ಚಿಕಿತ್ಸಾ ಕೇಂದ್ರಗಳಿಗೆ ಹೊಸ ನಿಯಮ

ಸಂತಾನೋತ್ಪತ್ತಿ ತಂತ್ರಜ್ಞಾನ ಹಾಗೂ ಐವಿಎಫ್ ಕೇಂದ್ರ, ವೀರ್ಯ ಬ್ಯಾಂಕುಗಳು ಪ್ರತಿ ಐದು ವರ್ಷಗಳಿಗೊಮ್ಮೆ ಹಾಗೂ ಸರೊಗಸಿ ಚಿಕಿತ್ಸಾ ಕೇಂದ್ರಗಳು ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಪರವಾನಗಿ ಅಥವಾ ನೋಂದಣಿ ಪ್ರಮಾಣಪತ್ರವನ್ನು ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ.

ಪರವಾನಗಿ ಅವಧಿ ಮುಗಿಯುವ ಕನಿಷ್ಠ 60 ದಿನಗಳ ಮುಂಚಿತವಾಗಿ ರಾಷ್ಟ್ರೀಯ ಸಂತಾನೋತ್ಪತ್ತಿ ತಂತ್ರಜ್ಞಾನ ಮತ್ತು ಸರೊಗಸಿ ನೋಂದಣಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಐವಿಎಫ್‌ ಮತ್ತು ವೀರ್ಯ ಬ್ಯಾಂಕ್‌ಗಳು ನವೀಕರಣ ಶುಲ್ಕ 25,000 ರೂ. ಪಾವತಿಸಬೇಕು, ವಿಳಂಬ ಮಾಡಿದರೆ ದಂಡ ಸೇರಿ 50,000 ರೂ. ಪಾವತಿಸಬೇಕು. ಐವಿಎಫ್‌ ಕೇಂದ್ರಗಳು ನವೀಕರಣ ಶುಲ್ಕ 1 ಲಕ್ಷ ರೂ. ಪಾವತಿಸಬೇಕಿದ್ದು, ವಿಳಂಬವಾಗಿ ಅರ್ಜಿ ಸಲ್ಲಿಸಿದರೆ 2 ಲಕ್ಷ ರೂ. ದಂಡ ತೆರಬೇಕಾಗುತ್ತದೆ. ಈ ಎಲ್ಲಾ ನಿಯಮ ಹಾಗೂ ಶುಲ್ಕಗಳಿಂದ ಸರ್ಕಾರಿ ಸ್ವಾಮ್ಯದ ಆಸ್ಪತ್ರೆ ಮತ್ತು ಸಂಸ್ಥೆಗಳಿಗೆ ಸಂಪೂರ್ಣ ವಿನಾಯಿತಿ ಇದೆ.

ನವದೆಹಲಿಯ ನರ್ಚರ್ ಕ್ಲಿನಿಕ್‌ನ ಐವಿಎಫ್ ತಜ್ಞೆ ಡಾ. ಅರ್ಚನಾ ಧವನ್ ಬಜಾಜ್ ಹೇಳುವಂತೆ, ದೇಶದ ಶೇ. 20ರಿಂದ 25ರಷ್ಟು ಚಿಕಿತ್ಸಾಲಯಗಳಲ್ಲಿ ಅಧಿಕೃತ ತಪಾಸಣೆ ನಡೆದಿದೆ. ಈ ಹೊಸ ನಿಯಮದಿಂದಾಗಿ ಕ್ಲಿನಿಕ್‌ಗಳು ಸೇವೆಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಲೇಬೇಕಾಗುತ್ತದೆ ಮತ್ತು ರೋಗಿಗಳ ದಾಖಲೆಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಅರ್ಜಿ ಸಲ್ಲಿಸಿದ 60 ದಿನಗಳ ಒಳಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಎಲ್ಲಾ ಕ್ಲಿನಿಕಲ್ ಮತ್ತು ನೈತಿಕ ಮಾನದಂಡಗಳನ್ನು ಪಾಲಿಸಿದ್ದರೆ ಪರವಾನಗಿ ನವೀಕರಣಗೊಳ್ಳುತ್ತದೆ. ಪ್ರಮಾಣಪತ್ರವನ್ನು ಚಿಕಿತ್ಸಾಲಯದ ಮುಂಭಾಗದಲ್ಲೇ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕಾಗುತ್ತದೆ.

Related Posts

Leave a Reply

Your email address will not be published. Required fields are marked *