kannada news
ಭಾರತಕ್ಕೆ ಬಂದಿಳಿದ ಅಮೆರಿಕದ 3ನೇ ವಿಮಾನ: 112 ವಲಸಿಗರು ವಾಪಸ್
ಭಾರತದ 112 ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ಮೂರನೇ ವಿಮಾನ ಭಾನುವಾರ ರಾತ್ರಿ ಪಂಜಾಬ್ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಶನಿವಾರ ಎರಡನೇ ವಿಮಾನದಲ್ಲಿ 119 ಅಕ್ರಮ ವಲಸಿಗರನ್ನು ಕರೆತಂದಿದ ಅಮೆರಿಕದ ವಿಮಾನ ಭಾನುವಾರ ರಾತ್ರಿ 10.10ರ ಸುಮಾರಿಗೆ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಈ ಮೂಲಕ ಭಾರತಕ್ಕೆ ಗಡಿಪಾರು ಮಾಡಲಾದ ಭಾರತೀಯರ ಸಂಖ್ಯೆ 335ಕ್ಕೆ ಏರಿಕೆಯಾದಂತಾಗಿದೆ. ಈ ಬಾರಿ ಬಂದಿಳಿದ ಸಿಎಸ್-7 ವಿಮಾನದಲ್ಲಿ ಪಂಜಾಬ್ ನ 31, ಹರಿಯಾಣದ
ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ: ಡಿಕೆ ಶಿವಕುಮಾರ್
ಬೆಂಗಳೂರು: ಈ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಕರ್ನಾಟಕ ರಾಜ್ಯದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಬಂಡವಾಳ ಹೂಡಿಕೆ ವಿಚಾರದಲ್ಲಿ ಕರ್ನಾಟಕ ದೇಶದ ಇತರ ನಗರಗಳ ಜತೆ ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ದೆಹಲಿ: ಬಿಜೆಪಿ ಗೆಲುವಿನ ಹಿಂದೆ ಆರ್ ಆರ್ ಎಸ್ ಶ್ರಮ!
ನವದೆಹಲಿ: ದಶಕದ ನಿರಾಡಳಿತದ ವಿರುದ್ಧ ದಿಲ್ಲಿಯ ಮತದಾರ ನಿರ್ಣಾಯಕ ಮತ ಹಾಕಿಕ ಕಾರಣ ಬಿಜೆಪಿ ಅಧಿಕಾರಕ್ಕೆ ಬಂದಿದ್ದೆ. ಆದರೆ ಚುನಾವಣಾ ಅಖಾಡಾದಲ್ಲಿ ಅಂತಹ ವಾತಾವರಣ ಮೂಡಿಸುವಲ್ಲಿ ಆರ್‌ಎಸ್‌ಎಸ್ ನಡೆಸಿದ ಪಾತ್ರದ ಬಗ್ಗೆ ಹೊಸ ವಿಚಾರಗಳು ಬಯಲಾಗುತ್ತಿದೆ. ಜವಾಬ್ದಾರಿಯುತ ಸರ್ಕಾರವನ್ನು ಆಯ್ಕೆ ಮಾಡುವಂತೆ
ಪೊಲೀಸ್ ಗುಂಡಿಗೆ 31 ನಕ್ಸಲರು ಹತ: 10 ದಿನದಲ್ಲಿ 50 ನಕ್ಸಲರು ಬಲಿ
ಛತ್ತೀಸ್‌ಗಢ: ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್‌ನಲ್ಲಿ ಬಸ್ತಾರ್ ವಿಭಾಗದ ಬಿಜಾಪುರದಲ್ಲಿ 31 ನಕ್ಸಲರು ಹತರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಕೂಡಾ ಹುತಾತ್ಮರಾಗಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಅರಣ್ಯದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ ಎಂದು ಹಿರಿಯ ಪೊಲೀಸ್
ಬ್ಯಾಂಕ್ ಗೆ 7.17 ಕೋಟಿ ವಂಚಿಸಿದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ದೋಷಿ: ಕೋರ್ಟ್ ಮಹತ್ವದ ತೀರ್ಪು
ಬಿಜೆಪಿಯ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸೇರಿದಂತೆ ನಾಲ್ವರು ಬ್ಯಾಂಕ್ ವಂಚನೆ ಪ್ರಕರಣದಲ್ಲಿ ದೋಷಿಗಳು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ನ್ಯಾಯಮೂರ್ತಿ ನ್ಯಾ.ಸಂತೋಷ್ ಗಜಾನನ ಭಟ್ ಅವರನ್ನೊಳಗೊಂಡ ಪೀಠ ಗುರುವಾರ ಕೃಷ್ಣಯ್ಯ ಶೆಟ್ಟಿ, ಎಂಟಿವಿ ರೆಡ್ಡಿ, ಮುನಿರಾಜು, ಶ್ರೀನಿವಾಸ
ಫೆ.13 ಜಾಗತಿಕ ಹೂಡಿಕೆದಾರರ ಸಮಾವೇಶ: `ಕ್ವಿನ್ ಸಿಟಿ ಕುರಿತು ರೌಂಡ್ ಟೇಬಲ್’ ಚರ್ಚೆ
ಬೆಂಗಳೂರು: ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ದೇಶ- ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಹೆಸರಾಂತ ಉದ್ಯಮಗಳ ಪ್ರತಿಷ್ಠಾನಗಳೊಂದಿಗೆ ಉದ್ದೇಶಿತ `ಕ್ವಿನ್ ಸಿಟಿ’ಯಲ್ಲಿ ಅತ್ಯುತ್ಕೃಷ್ಟ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳ ಕ್ಷೇತ್ರದಲ್ಲಿ ಸಹಭಾಗಿತ್ವದ ಮೂಲಕ ದಕ್ಷ ಕಾರ್ಯ ಪರಿಸರ ಸೃಷ್ಟಿಸುವ ಕುರಿತು
ಎಥೆನಾಲ್ ಪ್ರಭಾವ: ಸಕ್ಕರೆ ಉತ್ಪಾದನೆ ಶೇ. 12ರಷ್ಟು ಕುಸಿತ
ನವದೆಹಲಿ: 2025ನೇ ಸಾಲಿನಲ್ಲಿ ಭಾರತದ ಸಕ್ಕರೆ ಉತ್ಪಾದನೆಯು ಗಮನಾರ್ಹ ಕುಸಿತವಾಗುವ ನಿರೀಕ್ಷೆಯಿದೆ ಎಂದು ಸೆಂಟ್ರಮ್ ವರದಿ ಹೇಳಿದೆ. ಹಿಂದಿನ ವರ್ಷದಲ್ಲಿ ಉತ್ಪಾದನೆಯಾಗಿದ್ದ 31.8 ಎಂಎಂಟಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಇದು 27 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಗಿಂತ ಕಡಿಮೆಯಾಗುವ ಮುನ್ಸೂಚನೆಗಳಿವೆ
ಕರ್ನಾಟಕ ಪಬ್ಲಿಕ್ ಶಾಲೆಗೆ ಎಡಿಬಿ 2000 ಕೋಟಿ ರೂ. ಸಾಲ: ಮಧು ಬಂಗಾರಪ್ಪ
ಹೊಸದಾಗಿ ಆರಂಭಿಸಲಾಗುತ್ತಿರುವ 450 ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಏಷ್ಯಾ ಅಭಿವೃದ್ಧಿ ಬ್ಯಾಂಕ್ 2,000 ಕೋಟಿ ರೂ. ದೀರ್ಘಾವಧಿ ಸಾಲ ನೀಡಲು ಮುಂದಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ
ಕುಂಭಮೇಳದಲ್ಲಿ ಕಟ್ಟುನಿಟ್ಟಿನ ಸುರಕ್ಷತೆಗೆ ಪ್ರಧಾನಿ ಸೂಚನೆ: ಎಚ್.ಡಿ. ಕುಮಾರಸ್ವಾಮಿ
ಮೈಸೂರು: ಪ್ರಯಾಗ್ ರಾಜ್ ಕುಂಭಮೇಳದಲ್ಲಿ ನಡೆದಿರುವ ಕಾಲ್ತುಳಿತ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಉತ್ತರ ಪ್ರದೇಶದ ಸರಕಾರಕ್ಕೆ ಪ್ರಧಾನಿಗಳು ಸೂಕ್ತ ನಿರ್ದೇಶನ ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು
ಬೆಂಗಳೂರಿನಲ್ಲಿ ಭೀಕರ ಅಗ್ನಿ ಅವಘಢ: 100ಕ್ಕೂ ಹೆಚ್ಚು ವಾಹನ ಭಸ್ಮ
ಪೊಲೀಸರು ಜಫ್ತಿ ಮಾಡಿದ 100ಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾದ ಘಟನೆ ಬೆಂಗಳೂರಿನಲ್ಲಿ ಬುಧವಾರ ಸಂಭವಿಸಿದೆ. ಶೇಷಾದ್ರಿಪುರಂ ಬಳಿಯ ಜೆಡಿಎಸ್ ಕಚೇರಿ ಪಕ್ಕದಲ್ಲಿರುವ ಜಕ್ಕರಾಯನ ಕೆರೆ ಮೈದಾನದಲ್ಲಿಈ ದುರ್ಘಟನೆ ಸಂಭವಿಸಿದ್ದು, 100ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿಯಾಗಿದೆ. ಕಾರು, ಐದು ಆಟೋ, 50




