Menu

ಸೋಷಿಯಲ್‌ ಮೀಡಿಯಾಗಳಲ್ಲಿ ಕೋರ್ಟ್‌ ವಿಚಾರಣೆಗಳ ವೀಡಿಯೊ ಪ್ರಸಾರಕ್ಕೆ ಸುಪ್ರೀಂ ನಿರ್ಬಂಧ

ನ್ಯಾಯಾಲಯದ ವಿಚಾರಣೆಗಳ ನೇರ ಪ್ರಸಾರದ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ , ರೀ ಪೋಸ್ಟ್‌ ಮಾಡುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ನೀಡಿದೆ. ವೀವ್ಸ್, ಲೈಕ್‌ಗಾಗಿ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊಗಳನ್ನು ಪೋಸ್ಟ್‌ ಮಾಡುತ್ತಾರೆ. ನ್ಯಾಯಾಲಯದ ವಿಚಾರಣೆಗಳ ನೇರಪ್ರಸಾರದ ವೀಡಿಯೊಗಳನ್ನು ಅನುಮತಿಯಿಲ್ಲದೆ ಕಟ್, ಎಡಿಟ್, ಅಪ್‌ಲೋಡ್, ರೀ ಪೋಸ್ಟ್ ಮಾಡುವುದು ಹಾಗೂ ಅವುಗಳಿಂದ ಹಣ ಸಂಪಾದಿಸುವುದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್‌ಮಲ್ಯ

ಕಪ್ಪು ಸಮುದ್ರದಲ್ಲಿ ವಾಣಿಜ್ಯ ಹಡಗಿಗೆ ದಾಳಿ: ಭಾರತೀಯ ಪ್ರಜೆ ಸಾವು

ಕಪ್ಪು ಸಮುದ್ರದಲ್ಲಿ ಸಂಚರಿಸುತ್ತಿದ್ದ ವಾಣಿಜ್ಯ ಹಡಗೊಂದರ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಪ್ರಜೆ ಮೃತಪಟ್ಟಿದ್ದಾರೆ. ಜುಲೈ 18 ರಂದು ರಷ್ಯಾದ ಪ್ರಾದೇಶಿಕ ಜಲಪ್ರದೇಶದಲ್ಲಿ ಚಲಿಸುತ್ತಿದ್ದ ಎಂವಿ ಒಮೊರ್ಫಿ ಎಂಬ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ಈ ದಾಳಿ ನಡೆದಿದೆ. ಹಡಗಿನಲ್ಲಿ

ಇಂದು, ನಾಳೆ ಬೆಂಗಳೂರಿನ ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ

ಜುಲೈ 25 ಮತ್ತು 26 ರಂದು ನಗರದ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 66/11 ಕೆ.ವಿ ಎಸ್‌ಆರ್‌ಟಿ, ವಿಕ್ಟೋರಿಯಾ, ಬ್ಯಾಡರಹಳ್ಳಿ

ವಿದ್ಯಾರ್ಥಿ ಪ್ರತಿಭಟನೆ: ತಡವಾಗಿ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರವೆಂದ ಸಿಎಂ

ನೀಟ್‌ ಪರೀಕ್ಷಾ ಅಕ್ರಮ ಖಂಡಿಸಿ ಹಾಗೂ ಅದರ ಹೊಣೆ ಹೊತ್ತು ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ  ವಿದ್ಯಾರ್ಥಿಗಳು ಮತ್ತು ಯುವಜನರು  ಪ್ರತಿಭಟನೆ ಆರಂಭಿಸಿ ತಿಂಗಳಾದ ಬಳಿಕ ಎಚ್ಚೆತ್ತುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ  ಹಾಗೂ ಕೇಂದ್ರ ಸರ್ಕಾರ ಶಿಕ್ಷಣ ವ್ಯವಸ್ಥೆ ಬಗ್ಗೆ

ಜೆನೆರಿಕ್‌ ಔಷಧ ಬಳಿಕ ಶೇ10 ಸರಕು ಸುಂಕ: ಭಾರತಕ್ಕೆ ಹೊರೆಯಾಗುತ್ತಿರುವ ಟ್ರಂಪ್‌ ನೀತಿ

ಬಲವಂತದ ಕಾರ್ಮಿಕರ ಶ್ರಮದಿಂದ ಉತ್ಪಾದಿಸಲಾದ ವಸ್ತುಗಳ ಬಳಕೆ ತಡೆ ಉದ್ದೇಶದಿಂದ ಅಮೆರಿಕವು ಭಾರತ ಸೇರಿದಂತೆ 17 ದೇಶಗಳಿಂದ ಆಮದು ಆಗುವ ಸರಕುಗಳ ಮೇಲೆ ಶೇ.10ರ ಸುಂಕ ವಿಧಿಸಿದೆ. 1974ರ ಟ್ರೇಡ್ ಆ್ಯಕ್ಟ್‌ನ ಸೆಕ್ಷನ್ 301 ಅಡಿ ಅಮೆಕದ ವ್ಯಾಪಾರ ಪ್ರತಿನಿಧಿ ಜೇಮಿಸನ್

ಗಂಡನ ಕಿರುಕುಳ, ಅನುಮಾನ ಆರೋಪ: ಯುವತಿ ಆತ್ಮಹತ್ಯೆ

ಬೆಂಗಳೂರಿನ ಇಂದಿರಾ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಿವಾಹಿತ ಯುವತಿ 21 ವರ್ಷದ ಪ್ರೇರಣಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಕಿರುಕುಳ ಹಾಗೂ ಅತಿಯಾದ ಅನುಮಾನಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇತ್ತೀಚೆಗಷ್ಟೇ ಬಿಎಸ್ಸಿ ಮುಗಿಸಿದ್ದ ಪ್ರೇರಣಾ

ಬೆಂಗಳೂರು ರೋಬಾಟಿಕ್ಸ್ ಅಂಡ್ ಎಐ ಇನ್ನೋವೇಷನ್ ಜೋನ್ ಆರಂಭಿಸಲು ತೀರ್ಮಾನ: ಸಿಎಂ ಡಿಕೆ ಶಿವಕುಮಾರ್‌

ನಾವು ಬೆಂಗಳೂರು ರೋಬೋಟಿಕ್ಸ್ ಮತ್ತು ಇನ್ನೋವೇಶನ್ ಝೋನ್ ಪ್ರಾರಂಭಿಸುತ್ತಿದ್ದೇವೆ, ಅಲ್ಲಿ ಸುಧಾರಿತ ಸಂಶೋಧನೆ, ಉತ್ಪನ್ನ ಅಭಿವೃದ್ಧಿ ಮತ್ತು ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿ ಹೊಂದಬಹುದು. ಜವಾಬ್ದಾರಿಯುತ ಮೂಲಸೌಕರ್ಯವಿಲ್ಲದೆ ಈ ಯಾವುದೇ ಡಿಜಿಟಲ್ ಬೆಳವಣಿಗೆಯು ಸುಸ್ಥಿರವಾಗಿರಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಭೂಮಿ, ವಿದ್ಯುತ್, ನೀರು, ಸಂಪರ್ಕ

ಸಂಸತ್ತಿನಲ್ಲಿ ಮುಂದುವರಿದ ನೀಟ್‌ ಕೋಲಾಹಲ: ಸಚಿವ ಪ್ರಧಾನ್‌ ರಾಜೀನಾಮೆಗೆ ಪ್ರತಿಪಕ್ಷಗಳ ಆಗ್ರಹ

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಶುಕ್ರವಾರವೂ ನೀಟ್‌ ಕೋಲಾಹಲ ಮುಂದುವರಿದಿದೆ.  ಕಲಾಪ ಆರಂಭಗೊಳ್ಳುವುದಕ್ಕೆ ಮೊದಲೇ ದ್ವಾರದ ಬಳಿ ಸಮಾವೇಶಗೊಂಡ ಪ್ರತಿಪಕ್ಷಗಳ ನಾಯಕರು ‘ಧರ್ಮೇಂದ್ರ ಪ್ರಧಾನ್ ವಜಾಗೊಳಿಸಿ’ ಎಂಬ ಬಿತ್ತಿಪತ್ರಗಳನ್ನು ಹಿಡಿದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರ ರಾಜೀನಾಮೆ ಪಡೆಯುವವರೆಗೂ ಸದನದಲ್ಲಿ ಚರ್ಚೆಗೆ

ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳನ್ನು ಶತ್ರುಗಳಂತೆ ಕಾಣುತ್ತಿರುವ ಕೇಂದ್ರ ಮತ್ತು ಪ್ರಧಾನಿ ಮೋದಿ: ಸೋನಿಯಾ ಗಾಂಧಿ

ನೀಟ್‌ ಅಕ್ರಮಗಳ ತನಿಖೆಗೆ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಶತ್ರುಗಳಂತೆ ಕಾಣುತ್ತಿರುವುದಾಗಿ  ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟಿಸುತ್ತಿರುವ

ದೇಗುಲಕ್ಕೆ ತೆರಳುತ್ತಿದ್ದ ಸ್ನೇಹಿತರಿಬ್ಬರು ಕೋಲಾರದಲ್ಲಿ ಅಪಘಾತಕ್ಕೆ ಬಲಿ

ಕೋಲಾರದ ಶ್ರೀನಿವಾಸಪುರ ತಾಲೂಕಿನ ಅರಿಕೆರೆ ಗೇಟ್‌ ಬಳಿ ಕ್ಯಾಂಟರ್ ವಾಹನ ಹಾಗೂ ಬೈಕ್‌ ಡಿಕ್ಕಿಯಾಗಿ ದೇವಾಲಯಕ್ಕೆ ತೆರಳುತ್ತಿದ್ದ ಸ್ನೇಹಿತರಿಬ್ಬರು ಸ್ಥಳದಲ್ಲೇ ಅಸು ನೀಗಿದ್ದಾರೆ. ಚಿಂತಾಮಣಿ ತಿಮ್ಮಸಂದ್ರದ ಶಶಿ (25), ಬೆಂಗಳೂರು ನೆಲಮಂಗಲದ ತನುಷ್ (25) ಮೃತಪಟ್ಟವರು. ಕಾಣಿಪಾಕಂ ದೇವಾಲಯಕ್ಕೆ ತೆರಳುತ್ತಿದ್ದಾಗ ಈ