kannada news
ಮದುವೆಗಳಿಗೆ ಹೋಗಿ ಚಿನ್ನಾಭರಣ ಕದಿಯುತ್ತಿದ್ದ ಮಹಿಳೆ ಅರೆಸ್ಟ್
ಮದುವೆ ಸಮಾರಂಭಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಶಿವಮೊಗ್ಗ ತುಂಗಾನಗರದ ಪೊಲೀಸಸರು ಬಂಧಿಸಿದ್ದಾರೆ. ರುಕ್ಸಾರ್ ಫಿರ್ದೋಸ್ ಬಂಧಿತ ಆರೋಪಿ. ಇಲಿಯಾಜ್ ನಗರದ ಶಾದಿ ಮಹಲ್‌ನಲ್ಲಿ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, 120 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ನಡೆಸಿದ್ದ ನಾಲ್ಕು ಕಲ್ಳತನ ಪ್ರಕರಣಗಳು ಕೂಡ ಬಯಲಾಗಿವೆ. ಬುರ್ಖಾ ಧರಿಸಿ, ವ್ಯಾನಿಟಿ ಬ್ಯಾಗ್ ಹಿಡಿದು ಮದುವೆಗಳಿಗೆ ಬರುತ್ತಿದ್ದ ಸುಳೆಬೈಲು ನಿವಾಸಿ ರುಕ್ಸಾರ್ ಫಿರ್ದೋಸ್ ಮದುವೆಗೆ ಬಂದವರು ಆಭರಣಗಳನ್ನು
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿರುವ ಡಿಕೆ ಶಿವಕುಮಾರ್‌ಗೆ ಸಿಎಂ ಅಭಿನಂದನೆ
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ಶಿವಕುಮಾರ್ ಅವರ ಸಂಘಟನಾ ಚಾತುರ್ಯ, ಸೈದ್ಧಾಂತಿಕ ಬದ್ದತೆ ಮತ್ತು ಕಠಿಣ ಶ್ರಮ ನಮ್ಮ ಪಕ್ಷದ ಎಲ್ಲ ಯುವನಾಯಕರಿಗೆ ಮಾದರಿಯಾದುದು ಎಂದು ಶ್ಲಾಘಿಸಿದ್ದಾರೆ. ಸಾಮಾಜಿಕ
ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳ ಖಾತ್ರಿಗೆ ಏಕರೂಪ ನಾಗರಿಕ ಸಂಹಿತೆಯೇ ದಾರಿ: ಸುಪ್ರೀಂ
ದೇಶದ ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ಏಕೈಕ ಮಾರ್ಗವೆಂದರೆ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಮುಸ್ಲಿಂ ವೈಯಕ್ತಿಕ ಕಾನೂನು(ಶರಿಯತ್)ಅಡಿ ಮಹಿಳೆಯರ ಹಕ್ಕುಗಳ ಉಲ್ಲಂಘನೆ ಆರೋಪದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಭಾರತದ ಮುಖ್ಯ ನ್ಯಾಯಮೂರ್ತಿ
ಮೂರು ಕೋಟಿ ರೂ. ಬೆಲೆಯ ಚಿನ್ನಾಭರಣ ದೋಚಿದಾತ ಅರೆಸ್ಟ್
ಮನೆಯೊಂದರಿಂದ ಮೂರು ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬೆಂಗಳೂರಿನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ವೇಲಾರಾಮ್ ಬಂಧಿತ ಆರೋಪಿ, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ. ಆರು ತಿಂಗಳು ಯೋಜನೆ ರೂಪಿಸಿ ಕಳವು ಮಾಡಿದ್ದ.
ಹನಿಟ್ರಾಪ್‌ಗೆ ಕೆಡವಿ ಹಣ, ಚಿನ್ನ, ಕಾರು ದೋಚಿ ಪರಾರಿ: ಮಹಿಳೆ ಅರೆಸ್ಟ್
ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತ ವ್ಯಕ್ತಿಗಳನ್ನುಪರಿಚಯಿಸಿಕೊಂಡು ಹನಿಟ್ರಾಪ್ ಮಾಡಿ ಅವರಿಗೆ ಸೇರಿದ್ದ ಅಮೂಲ್ಯ ವಸ್ತುಗಳನ್ನೆಲ್ಲ ದೋಚಿ ಪರಾರಿಯಾಗುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ಮಹಿಳೆ ದೀಪಾ ಅವಟಗಿಯನ್ನು ಬೆಳಗಾವಿ ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತ ಪುರುಷರನ್ನು ಬಲೆಗೆ ಬೀಳಿಸಿ, ಲಾಡ್ಜ್ಗೆ
ಗಿಳಿ ಶಾಸ್ತ್ರದವನಿಂದ ಬೆಂಗಳೂರಿನ ಐಟಿ ಅಧಿಕಾರಿಗೆ 35 ಲಕ್ಷ ರೂ. ನಾಮ
ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಗಿಳಿಶಾಸ್ತ್ರ ಹೇಳುವವನನ್ನು ನಂಬಿ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡಿರುವ ಪ್ರಕರಣ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬೆಂಗಳೂರಿನ ಐಟಿ ಇಲಾಖೆಯ ಕಚೇರಿಯಲ್ಲಿ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರಿಗೆ ಡಿಸೆಂಬರ್‌ನಲ್ಲಿ ಗಿಳಿಶಾಸ್ತ್ರ ವಂಚಕನ
ಇರಾನ್ ಹಡಗುಗಳನ್ನು ಮುಳುಗಿಸುವುದೇ ಮಜಾವೆಂದ ಅಮೆರಿಕ ಸೇನೆ
ಇರಾನ್ ಹಡಗುಗಳನ್ನು ಮುಳುಗಿಸುವುದೇ ನಮಗೆ ಮಜಾ ಎಂದು ಅಮೆರಿಕ ಸೇನೆ ಹೇಳಿಕೊಂಡಿದ್ದಾಗಿ ಡೋರಲ್‌ನಲ್ಲಿ ನಡೆದ ನ್ಯಾಷನಲ್ ರಿಪಬ್ಲಿಕನ್ ಸಭೆಯಲ್ಲಿ ಅಮೆರಿಕ ಅಧ್ಯಕ್ಷ್ಯ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ದಾಳಿಯಲ್ಲಿ ಇರಾನ್‌ನ ನೌಕಾಪಡೆಗೆ ದೊಡ್ಡ ಪ್ರಮಾಣದ ಹಾನಿಯುಂಟಾಗಿದೆ. ಅಮೆರಿಕ
ಸುಪ್ರೀಂಕೋರ್ಟ್‌ನ ಕ್ಷಮೆ ಯಾಚಿಸಿ ಪಠ್ಯ ಪುಸ್ತಕ ವಾಪಸ್ ಪಡೆದ ಎನ್ಸಿಆರ್ಟಿ
8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪುಸ್ತಕದ ಒಂದು ಅಧ್ಯಾಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯ ಉಲ್ಲೇಖಕ್ಕೆ ಸಂಬಂಧಿಸಿದಂತೆ ಎನ್ಸಿಆರ್ಟಿ ಸುಪ್ರೀಂಕೋರ್ಟ್‌ನ ಕ್ಷಮೆ ಯಾಚಿಸಿ, ಇಡೀ ಪುಸ್ತಕವನ್ನೇ ವಾಪಸ್ ಪಡೆದಿದೆ. ಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯವನ್ನು ಉಲ್ಲೇಖಿಸಿರುವುದು ಕೋಲಾಹಲಕ್ಕೆ ಕಾರಣವಾಗಿತ್ತು.
ಇರಾನ್ ಇಸ್ರೇಲ್ ಸಂಘರ್ಷದಿಂದ ಎಲ್‌ಪಿಜಿ ಕೊರತೆ: ಹೋಟೆಲ್ ಬಂದ್ ಆತಂಕ
ಇರಾನ್-ಇಸ್ರೇಲ್ ಯುದ್ಧ ಜಾಗತಿಕವಾಗಿ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಇರಾನ್‌ಗೆ ಬೇರೆ ದೇಶಗಳಿಂದ ರಫ್ತು ಆಗುತ್ತಿದ್ದ ವಸ್ತುಗಳು ರಫ್ತು ಆಗುತ್ತಿಲ್ಲ, ವಿಮಾನ ಸಂಚಾರ ಸ್ಥಗಿತಗೊಂಡಿದೆ. ಪ್ರಮುಖವಾಗಿ ಹಲವು ದೇಶಗಳಲ್ಲಿ ತೈಲ ಸಮಸ್ಯೆ ಎದುರಾಗಿದ್ದು, ಬಿಕ್ಕಟ್ಟು ಸೃಷ್ಟಿಯಾಗಿದೆ. ಎಲ್‌ಪಿಜಿ ಪೂರೈಕೆ ವ್ಯತ್ಯಯಗೊಂಡು ಮುಂಬೈನಲ್ಲಿ 20%
ಯುದ್ಧ ನಿಲ್ಲಿಸುವುದು ಅಮೆರಿಕವಲ್ಲ, ಇರಾನ್: ಟ್ರಂಪ್‌ಗೆ ತಿರುಗೇಟು
ಯುದ್ಧ ನಿಲ್ಲಿಸುವುದು ಅಮೆರಿಕದ ನಿರ್ಧಾರವಲ್ಲ, ಅದು ನಮ್ಮ ನಿರ್ಧಾರ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ತಿರುಗೇಟು ನೀಡಿದೆ. ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬ ಟ್ರಂಪ್ ಹೇಳಿಕೆಗೆ ಐಆರ್‌ಜಿಸಿ ಪಡೆ ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.




