Thursday, September 17, 2026
Menu

ಯುದ್ಧ ನಿಲ್ಲಿಸುವುದು ಅಮೆರಿಕವಲ್ಲ, ಇರಾನ್‌: ಟ್ರಂಪ್‌ಗೆ ತಿರುಗೇಟು

ಯುದ್ಧ ನಿಲ್ಲಿಸುವುದು ಅಮೆರಿಕದ ನಿರ್ಧಾರವಲ್ಲ, ಅದು ನಮ್ಮ ನಿರ್ಧಾರ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ತಿರುಗೇಟು ನೀಡಿದೆ.

ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬ ಟ್ರಂಪ್‌ ಹೇಳಿಕೆಗೆ ಐಆರ್‌ಜಿಸಿ ಪಡೆ ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಮುಂದುವರಿದರೆ ಈ ಪ್ರದೇಶದಿಂದ ತೈಲ ರಫ್ತು ಮಾಡಲು ಇರಾನ್ ಅನುಮತಿಸುವುದಿಲ್ಲ ಎಂದು ಐಆರ್‌ಜಿಸಿ ಎಚ್ಚರಿಕೆ ನೀಡಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ  ಟ್ರಂಪ್, ಇರಾನ್ ಯುದ್ಧವು ಸಾಕಷ್ಟು ಪೂರ್ಣಗೊಂಡಿದೆ ಎಂದಿದ್ದರು. ಬಳಿಕ ನಾವು ಸಂಪೂರ್ಣ ಗೆದ್ದಿಲ್ಲ. ಇರಾನ್ ಸಂಪೂರ್ಣವಾಗಿ ಮತ್ತು ನಿರ್ಣಾಯಕ ವಾಗಿ ಸೋಲುವವರೆಗೂ ಯುದ್ಧ ಮುಂದುವರಿಯುತ್ತದೆ ಎಂದು ಹೇಳಿದ್ದರು.

ಯುದ್ಧ ಹೇಗೆ ಮತ್ತು ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ವಾಷಿಂಗ್ಟನ್ ಅಲ್ಲ, ಟೆಹ್ರಾನ್ ನಿರ್ಧರಿಸುತ್ತದೆ. ಟ್ರಂಪ್ ಹೇಳಿಕೆ ಅಸಂಬದ್ಧ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆ ಹೇಳಿದೆ.

Related Posts

Leave a Reply

Your email address will not be published. Required fields are marked *