Menu

ಎಸ್‌ಐಆರ್ ಹಾಗೂ ಅಧಿಕಾರಿಗಳ ಹಾರಿಕೆ ಉತ್ತರ

ಎಲ್ಲ  ಮಾಹಿತಿಯೂ  ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿದೆ. ಅದನ್ನು   ಓಪನ್  ಮಾಡಿ  ನೀವೇ  ಅಪ್ಲೆ ಮಾಡಿಕೊಳ್ಳಿ ಎಂಬ ಅಧಿಕಾರಿಗಳ ಹಾರಿಕೆಯ ಉತ್ತರಗಳಿಂದ ಎಸ್‌ಐ ಆರ್  ಪ್ರಕ್ರಿಯೆ ಈಗ ರಾಜ್ಯದಲ್ಲಿ  ಹಳ್ಳ ಹಿಡಿದಿದೆ.  ಉದ್ಯೋಗಸ್ಥ  ಮತ್ತು  ಇತರ  ಅನಿವಾರ್ಯ ಕಸಬುಗಳಲ್ಲಿ ತೊಡಗಿರುವ  ಅದೆಷ್ಟೋ ಮಂದಿ ನೈಜ ಮತದಾರರು  ಈಗ ತಮ್ಮ  ಗುರುತಿನ ಚೀಟಿ  ಹಾಗೂ  ಪೌರತ್ವ  ನೋಂದಣಿ ಬಗ್ಗೆ  ಹೆಚ್ಚು  ಚಿಂತಿತರಾಗುವಂತಾಗಿದೆ.

ರಾಜ್ಯದಲ್ಲಿ ಎಸ್ ಐ ಆರ್ ಪ್ರಕ್ರಿಯೆ  ಇನ್ನೂ  ಮುಗಿದಿಲ್ಲ. ಇದುವರೆಗೆ  ನೋಂದಣಿಯಾಗದ  ೪೩ ಲಕ್ಷ ಮತದಾರರ ಹಕ್ಕುಗಳು ಈಗ ಅತಂತ್ರದಲ್ಲಿದೆ.!  ನಾಡಿನ ರಾಜಧಾನಿ ಬೆಂಗಳೂರು ಸೇರಿದಂತೆ ಬಹಳಷ್ಟು  ಕಡೆ ಮತದಾರರು  ಈ ಕುರಿತ  ಸೂಕ್ತ ಮಾಹಿತಿ  ಇಲ್ಲದೆ ಪರಿತಪಿಸುವಂತಹ  ಪರಿಸ್ಥಿತಿ ಇದೆ. ೨೦೦೨ರಲ್ಲಿ  ಚುನಾವಣೆ  ಆಯೋಗವು  ರೂಪಿಸಿದ ಮಾನದಂಡ ಮತ್ತು  ಮತದಾರರಿಗೆ ನೀಡಿದ  ಗುರುತಿನ  ಚೀಟಿ  ಆಧಾರವಲ್ಲದೆ ಇನ್ನೂ ಕೆಲವು  ಪೂರಕ ದಾಖಲೆಗಳನ್ನು  ಒದಸಿದರೆ  ಮಾತ್ರ ಪೌರತ್ವ ಖಾತರಿಯಾಗುವುದೆಂಬ ಮಾಹಿತಿಗಳೀಗ ಸಾಮಾಜಿಕ  ಜಾಲ  ತಾಣಗಳಲ್ಲಿ  ಈಗ ಹರಿದಾಡುತ್ತಿವೆ.  ಒಟ್ಟಿನಲ್ಲಿ ಈ ದೇಶದಲ್ಲಿ ಹುಟ್ಟಿ ಬೆಳೆದ  ಅಸಲೀ  ಹಾಗೂ ನೈಜ  ಮತದಾರರೂ  ಈಗ ತಮ್ಮ  ಪೌರತ್ವವನ್ನು ಸಾಬೀತುಪಡಿಸಲು  ಹರಸಾಹಸ  ಪಡುವಂತಾಗಿದೆ.

ಫಾರಂ ೬ ಮೂಲಕ ಹೊಸದಾಗಿ  ತಮ್ಮ  ಹೆಸರುಗಳನ್ನು ಸೇರಿಸಲು     ಕೇವಲ ತಾವು ಹೊಂದಿರುವ ಆಧಾರ್  ಒಂದೇ ಸಾಲದು.  ಇದಕ್ಕೆ    ಪೂರಕವಾಗಿ    ಇನ್ನೂ ಕೆಲವೊಂದು  ದಾಖಲೆಗಳು  ಅಗತ್ಯ ಎಂಬ  ಮಾಹಿತಿಯೂ  ಈಗ  ಕೇಳಿ  ಬರತೊಡಗಿವೆ. ಒಟ್ಟಿನಲ್ಲಿ ಈ ವಿಚಾರದಲ್ಲಿ  ಎಲ್ಲ  ರಾಜಕೀಯ  ಪಕ್ಷಗಳು  ಮತ್ತು  ಸ್ವಯಂ ಸೇವಾ  ಸಂಘಟನೆಗಳು  ಮತ್ತ ಸಂಘ ,ಸಂಸ್ಥೆಗಳನ್ನು  ಕೇಂದ್ರ  ಚುನಾವಣೆ  ಆಯೋಗವು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಲ್ಲಿ ಇದೊಂದು  ದೊಡ್ಡ  ಅವಾಂತರವನ್ನು ಸೃಷ್ಟಿಸುವ  ಗಂಭೀರ  ಅಪಾಯವಿದೆ.

ಈ  ದೇಶದ ವಿವಿಧ  ರಾಜ್ಯಗಳಲ್ಲಿ  ಈಗ  ಎಸ್  ಐ ಆರ್   ಪ್ರಕ್ರಿಯೆ   ಮುಂದುವರಿದ್ದು ಇದರ  ಪ್ರತ್ಯಕ್ಷ ಸಮಸ್ಯೆಗಳು  ಈಗೀಗ  ಒಂದೊಂದಾಗಿ    ಕಾಣಿಸಿಕೊಳ್ಳತೊಡಗಿವೆ. ಇಂತಹ  ಸಮಸ್ಯೆಗಳಿಗೆ ಈಗ ಚುನಾವಣೆ ಆಯೋಗ  ಮತ್ತು  ರಾಜಕೀಯ ಪಕ್ಷಗಳು ಪ್ರಾಮಾಣಿಕವಾದ ಪರಿಹಾರವನ್ನು ಕಂಡುಕೊಳ್ಳಲು ಮುಂದಾಗುವುದು ಲೇಸು. ಇಲ್ಲವಾದಲ್ಲಿ  ಆಯೋಗವು  ಈಗ  ರೂಪಿಸಿರುವ  ಮಾನದಂಡಗಳನ್ನೇ  ಅಧಾರವಾಗಿಸಿಕೊಂಡು  ಎಸ್ ಐ ಆರ್ ಪ್ರಕ್ರಿಯೆ  ಮುಂದುವರಿದಲ್ಲಿ  ದೇಶದಲ್ಲಿರುವ  ಲಕ್ಷಾಂತರ  ಮಂದಿ ನೈಜ  ಮತದಾರರೂ  ತಮ್ಮ  ಮತದಾನದ  ಹಕ್ಕುಗಳನ್ನು   ಕಳೆದುಕೊಳ್ಳುವ  ಅಪಾಯವಿದೆ. ಕೇಂದ್ರ  ಚುನಾವಣೆ  ಆಯೋಗದ ಪರಮಾಶಯವಾದರೂ  ಈ  ದೇಶದ ನೈಜ ಪೌರರಿಗೆ  ಮತದಾನದ  ಹಕ್ಕುಗಳನ್ನು  ನೀಡುವುದೆಂಬುದು.

ಇದು  ವರ್ಷಗಳು, ದಶಕಗಳ ಹಿಂದೆ ಇಲ್ಲಿಯೇ ಹುಟ್ಟಿ ಇಲ್ಲಿಯೇ  ಬೆಳೆದು  ಸುಮಾರು   ದಿನಗಳಿಂದ  ಇಲ್ಲಿಯೇ ಬದುಕು ಕಂಡುಕೊಂಡವರ  ಎಲ್ಲರ ಪಾಲಿಗೆ ಆಯೋಗವೀಗ  ರೂಪಿಸಿರುವ   ನಿಯಮಾವಳಿ ಉಗ್ರಶಾಪವಾಗಿ  ಪರಿಣಮಿಸಬಾರದು.  ಎಲ್ಲ  ಮಾಹಿತಿಯೂ  ಆಯೋಗದ ವೆಬ್‌ಸೈಟ್‌ನಲ್ಲಿದೆ. ಅದನ್ನು   ಓಪನ್  ಮಾಡಿ  ನೀವು  ಅಪ್ಲೆ ಮಾಡಿಕೊಳ್ಳಿ  ಎಂಬ ಅಧಿಕಾರಿಗಳ  ಹಾರಿಕೆಯ ಉತ್ತರಗಳಿಂದ,  ಸಾಮಾನ್ಯನ ಮತದಾರರ ಎಸ್‌ಐ  ಆರ್  ನೋಂದಣಿ ಕೆಲಸಕ್ಕೆ ತೊಂದರೆಯಾಗಿದೆ. ಉದ್ಯೋಗಸ್ಥ  ಮತ್ತು      ಇತರೆ   ಅನಿವಾರ್ಯ ಕಸಬುಗಳಲ್ಲಿ ತೊಡಗಿರುವ  ಅದೆಷ್ಟೋ   ಮಂದಿ  ನೈಜ  ಮತದಾರರು  ಈಗ ತಮ್ಮ  ಮತದಾನದ  ಗುರುತಿನ ಚೀಟಿ   ಹಾಗೂ  ಪೌರತ್ವ  ನೋಂದಣಿ ಬಗ್ಗೆ  ಚಿಂತಿತರಾಗಿದ್ದಾರೆ. ಈ ಗೊಂದಲಗಳನ್ನು  ನಿವಾರಿಸಲು   ಆಯೋಗದಿಂದ  ಇದುವರೆಗೆ  ಆಗಿರುವ  ಪ್ರಚಾರ  ಅತಿ  ಕಡಿಮೆ  ಎನ್ನದೆ  ವಿಧಿಯಿಲ್ಲ.

Related Posts

Leave a Reply

Your email address will not be published. Required fields are marked *