Menu

ಡೇಟಿಂಗ್ ಆ್ಯಪ್ ಮಾನಿನಿ ಖೆಡ್ಡಾಗೆ ಬಿದ್ದು 1.30 ಲಕ್ಷ ರೂ. ಕಳೆದುಕೊಂಡ ಹಿರಿಯ ನಾಗರಿಕ

ಒಂಟಿತನ ಕಳೆಯುವುದಕ್ಕೆಂದು ಆನ್‌ಲೈನ್‌ ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯಿಸಿಕೊಂಡ ಯುವತಿಯರ ವಂಚನೆಗೆ ಒಳಗಾಗಿ ಹಿರಿಯ ನಾಗರಿಕರೊಬ್ಬರು 1.30 ಲಕ್ಷ ರೂ. ಕಳೆದುಕೊಂಡಿದ್ದಾರೆ.

ದೆಹಲಿಯಲ್ಲಿ ಈ ವಂಚನೆ ನಡೆದಿದ್ದು, ನಕಲಿ ಡೇಟಿಂಗ್ ಪ್ರೊಫೈಲ್ ಮೂಲಕ ವ್ಯಕ್ತಿಯನ್ನು ನಂಬಿಸಿದ್ದ ಯುವತಿಯರಿಬ್ಬರು ಡಿನ್ನರ್‌ಗೆ ಕರೆದೊಯ್ದು ಮೊಬೈಲ್ ಕದ್ದು 1.30 ಲಕ್ಷ ಯುಪಿಐ ವರ್ಗಾವಣೆ ಮಾಡಿಕೊಂಡಿದ್ದಾರೆ. ಆರೋಪಿ ಯುವತಿಯರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

26 ವರ್ಷದ ಜ್ಯೋತ್ಸ್ನಾ ಡೇಟಿಂಗ್ ಆ್ಯಪ್‌ನಲ್ಲಿ ಸುಳ್ಳು ಮಾಹಿತಿ ಹಾಗೂ ಆಕರ್ಷಕ ಫೋಟೋ ಹಾಕಿ 67 ವರ್ಷದ ಹಿರಿಯ ನಾಗರಿಕರನ್ನು ಪರಿಚಯ ಮಾಡಿಕೊಂಡಿದ್ದಳು. ನಂತರ 21 ವರ್ಷದ ಮಾನ್ಸಿಯನ್ನು ಈ ಜಾಲಕ್ಕೆ ಸೇರಿಸಿಕೊಂಡಿದ್ದಳು. ದಕ್ಷಿಣ ದೆಹಲಿಯ ಡಿಫೆನ್ಸ್ ಕಾಲೋನಿಯ ರೆಸ್ಟೋರೆಂಟ್‌ ಒಂದರಲ್ಲಿ ಡಿನ್ನರ್‌ಗೆ ವ್ಯಕ್ತಿಯನ್ನು ಆಹ್ವಾನಿಸಿದ್ದರು. ಊಟ ಮುಗಿಯುವಷ್ಟರಲ್ಲಿ ಗಮನ ಬೇರೆಡೆ ಸೆಳೆದು ಆತನ ಮೊಬೈಲ್ ಫೋನ್ ಕದ್ದು, ಬ್ಯಾಂಕಿಂಗ್ ಆ್ಯಪ್ ಬಳಸಿ 1.30 ಲಕ್ಷ ರೂ. ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ಪರಾರಿಯಾಗಿದ್ದರು.

ಸಿಸಿಟಿವಿ ದೃಶ್ಯಾವಳಿ, ಕೆವೈಸಿ ಹಾಗೂ ಯುಪಿಐ ಬ್ಯಾಂಕ್ ವಹಿವಾಟಿನ ಮಾಹಿತಿ ಕಲೆ ಹಾಕಿದ ಸೈಬರ್ ಠಾಣೆ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, 23 ವರ್ಷದ ಯುವಕ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯೊಂದಿಗೆ ಮೊದಲ ಭೇಟಿಗೆ ಹೋಗಿ 20,500 ಬಿಲ್ ಪಾವತಿಸಿದ್ದ.

ಯುವತಿಯು ಆತನನ್ನು ಸಾಮಾನ್ಯ ಕೆಫೆ ಬದಲಿಗೆ ದುಬಾರಿ ಪಬ್‌ಗೆ ಕರೆದೊಯ್ದು 13,000 ಮೌಲ್ಯದ ಶಾಂಪೇನ್ ಮತ್ತು 6,000 ರೂ. ಮೌಲ್ಯದ ಹುಕ್ಕಾ ಆರ್ಡರ್ ಮಾಡಿದ್ದಳು. ಅರ್ಧ ತಿಂಗಳ ಸಂಬಳವನ್ನು ಬಿಲ್ ರೂಪದಲ್ಲಿ ಯುವಕ ಕಳೆದುಕೊಂಡಿದ್ದ.

Related Posts

Leave a Reply

Your email address will not be published. Required fields are marked *