Wednesday, August 26, 2026
Menu

ಅಮೆರಿಕದಲ್ಲಿ ಆರೆಸ್ಸೆಸ್‌ ಮುಖ್ಯಸ್ಥ ಭಾಗವತ್‌ ಸಮಾವೇಶ: ನ್ಯೂಯಾರ್ಕ್ ಮೇಯರ್ ಮಾಮ್ದಾನಿ ವಿರೋಧ

ಆರೆಸ್ಸೆಸ್‌ ಶತಮಾನೋತ್ಸವ ಅಂಗವಾಗಿ ಆಯೋಜಿಸಿರುವ ಜಾಗತಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಅಮೆರಿಕದ ಅಹೆಡ್ ಫೋರಂ ಆಶ್ರಯದಲ್ಲಿ ಆಗಸ್ಟ್ 29ರಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆಯಲಿರುವ ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ ಸಮಾವೇಶಕ್ಕೆ ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಾಮ್ದಾನಿ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸಮಾವೇಶದಲ್ಲಿ ಆರೆಸ್ಸೆಸ್‌ ಮುಖ್ಯಸ್ಥ ಲ್ಲಿ ಮೋಹನ್‌ ಭಾಗವತ್‌ ಭಾಗವಹಿಸಲಿದ್ದಾರೆ. ನಾನು ಈ ಸಮಾವೇಶವನ್ನು ಬೆಂಬಲಿಸುವುದಿಲ್ಲ, ಆದರೆ ಅದನ್ನು ರದ್ದುಗೊಳಿಸಲು ನಗರ ಆಡಳಿತಕ್ಕೆ ಸಂಪೂರ್ಣ ಕಾನೂನು ಅಧಿಕಾರ ಇಲ್ಲದಿರುವುದು ಬೇಸರದ ವಿಚಾರ ಎಂದು ಹೇಳಿದ್ದಾರೆ.  ಆರ್‌ಎಸ್‌ಎಸ್ ಎಲ್ಲರನ್ನೂ ಒಳಗೊಳ್ಳದ ಪ್ರತ್ಯೇಕತಾವಾದಿ ದೃಷ್ಟಿಕೋನ ಹೊಂದಿರುವುದು ತಮಗೆ ಕಳವಳಕಾರಿ ವಿಚಾರ. ಕುಟುಂಬ ನನಗೆ ಕಲಿಸಿದ ಮತ್ತು ನಾನು ಬೆಳೆದು ಬಂದ ಭಾರತದ ಕಲ್ಪನೆ ಎಂದರೆ ಅದು ಬಹುತ್ವದ ಸಮಾಜ ಹಾಗೂ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಸ್ಥಾನಮಾನ ನೀಡುವ ಜಾತ್ಯತೀತ ಗಣರಾಜ್ಯ. ಆದರೆ, ಆರ್‌ಎಸ್‌ಎಸ್‌ನ ಸಿದ್ಧಾಂತಗಳು ಈ ತತ್ವಕ್ಕೆ ವಿರುದ್ಧವಾಗಿವೆ ಎಂದು ಪ್ರತಿಪಾದಿಸಿದ್ದಾರೆ. ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಅದನ್ನು ರದ್ದುಗೊಳಿಸುವ ಕಾನೂನು ವ್ಯಾಪ್ತಿ ಅಥವಾ ಹಕ್ಕು ನ್ಯೂಯಾರ್ಕ್ ನಗರ ಸರ್ಕಾರಕ್ಕೆ ಇಲ್ಲದಿರಬಹುದು ಎಂದಿದ್ದಾರೆ.

ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್, ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಸೇರಿದಂತೆ ಹಲವು ಸಂಸ್ಥೆಗಳು ಆರ್‌ಎಸ್‌ಎಸ್ ಮುಖ್ಯಸ್ಥರ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಆಡಳಿತ ಮಂಡಳಿಯನ್ನು ಒತ್ತಾಯಿಸಿವೆ. ಆರೆಸ್ಸೆಸ್‌ ಶತಮಾನೋತ್ಸವ ಭಾಗವಾಗಿ ಜಾಗತಿಕ ಸಂಪರ್ಕ ಕಾರ್ಯಕ್ರಮದಡಿ ಮೋಹನ್ ಭಾಗವತ್ ಅವರು ಅಮೆರಿಕ, ಕೆನಡಾ ಮತ್ತು ಬ್ರಿಟನ್ ಪ್ರವಾಸ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *