Saturday, October 10, 2026
Menu

ಭೀಕರ ಪ್ರವಾಹಕ್ಕೆ ನೇಪಾಳ ತತ್ತರ: ಸಾವಿರ ಮಂದಿ ನಾಪತ್ತೆ

ನೇಪಾಳವು ಭೀಕರ ಪ್ರವಾಹಕ್ಕೆ ತತ್ತರಿಸಿದ್ದು,ಅಪಾರ ಪ್ರಮಾಣದ ಜೀವಹಾನಿಯಾಗಿದೆ. ಕನಿಷ್ಠ ಸಾವಿರ ಮಂದಿ ಕೊಚ್ಚಿಕೊಂಡು ಹೋಗಿರುವ ಶಂಕೆಯಿದೆ, ನಿರ್ದಿಷ್ಟವಾಗಿ ಅಧಿಕೃತ ಅಂಕಿ-ಅಂಶ ಇನ್ನಷ್ಟೇ ಲಭ್ಯವಾಗಿದೆ. ರಕ್ಷಣಾ ತಂಡಗಳು ಕಾರ್ಯಾಚರಣೆ ತೀವ್ರಗೊಳಿಸಿವೆ.

ರಸುವಾದಲ್ಲಿ ಟಿಬೆಟ್‌ ಗಡಿಯ ಬಳಿಯಿರುವ ಗ್ರಾಮ ಕೊಚ್ಚಿಹೋದೆ, ನದಿ ದಂಡೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಭೋಟೆ ಕೋಶಿ ನದಿಯ ಉದ್ದಕ್ಕೂ ವಾಸಿಸುವ ನಿವಾಸಿಗಳು ರಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.

ರಸುವಾ ಜಿಲ್ಲೆಯಲ್ಲಿ ಉಂಟಾದ ಹಠಾತ್‌ ಪ್ರವಾಹವು ಹಲವು ಪ್ರದೇಶಗಳಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿದೆ. ಸಯಾಪ್ರು ಬೆಸಿ ಮತ್ತು ತಿಮುರೆ ಪರ್ವತ ಪ್ರದೇಶಗಳ ಕೆಲವು ಹಳ್ಳಿಗಳು ನಾಪತ್ತೆಯಾದಂತಾಗಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ.

Related Posts

Leave a Reply

Your email address will not be published. Required fields are marked *