ಒಂದು ವಾರದಿಂದ ರಾಜ್ಯದ ಮಾರುಕಟ್ಟೆಗಳಲ್ಲಿ ಸಾಮಾನ್ಯ ಹಾಗೂ ಪ್ರೀಮಿಯಂ ಅಕ್ಕಿ ಬೆಲೆಗಳು ಗಣನೀಯವಾಗಿ ಹೆಚ್ಚಳ ಆಗಿದೆ. ಪ್ರತಿ ಕೆಜಿ ಅಕ್ಕಿಗೆ ₹3 ರಿಂದ 10ರವರೆಗೆ ಏರಿಕೆಯಾಗಿದ್ದು, 26 ಕೆಜಿ ಬ್ಯಾಗ್ ಅಕ್ಕಿ ದರ ₹50 ರಿಂದ 100ರವರೆಗೆ ಏರಿಕೆಯಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಕಲಬುರಗಿ ನಗರಗಳಲ್ಲಿ ಅಕ್ಕಿ ದರ ತೀವ್ರವಾಗಿ ಏರಿಕೆ ಕಂಡು ಬಂದಿದೆ.
ಈಗಾಗಲೇ ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಾದ್ದು, ಅಕ್ಕಿ ದರ ಏರಿಕೆ ಜೊತೆಗೆ ಖಾಸಗಿ ಬಸ್ ಟಿಕೆಟ್ ದರವೂ ಹೆಚ್ಚಳವಾಗಿದೆ. ಹಾಲಿನ ದರವೂ ಲೀಟರ್ಗೆ ಎರಡು ರೂ. ಏರಿಕೆ ಆಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.
ಮುಂದಿನ ದಿನಗಳಲ್ಲಿ ಮಳೆ ಸುಧಾರಿಸಿದರೆ ಅಕ್ಕಿ ಬೆಲೆ ಸ್ಥಿರಗೊಳ್ಳುವ ಸಾಧ್ಯತೆ ಇದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಮಾತು. ಆದರೆ ಈಗ ನಿರ್ಮಾಣಗೊಂಡಿರುವ ಪರಿಸ್ಥಿತಿ ಮಧ್ಯಮ ವರ್ಗಕ್ಕೆ ಬಹಳಷ್ಟು ಆರ್ತಿಕವಾಗಿ ಹೊರೆಯಾಗಿದೆ.
ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸತತವಾಗಿ ಏರಿದ್ದು, ಸಾರಿಗೆ ವಲಯದ ಮೇಲೆ ನೇರ ಪರಿಣಾಮ ಬೀರಿದೆ. ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಸ್ ನಿರ್ವಹಣಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ ಎಂದು ಬಸ್ ಮಾಲೀಕರು ವಾದಿಸುತ್ತಿದ್ದಾರೆ. ರಾಜ್ಯಾದ್ಯಂತ ಖಾಸಗಿ ಬಸ್ಗಳ ಟಿಕೆಟ್ ದರಗಳನ್ನು ಹೆಚ್ಚಿಸುವ ನಿರ್ಧಾರಕ್ಕೆ ಬಸ್ ಮಾಲೀಕರ ಸಂಘ ಮುಂದಾಗಿದೆ.
ಒಂದು ಟಿಕೆಟ್ಗೆ ಸರಾಸರಿ ₹100 ಇದ್ದಲ್ಲಿ, ಈಗ 120 ರಿಂದ 130 ಆಗಲಿದೆ. ಬೆಂಗಳೂರು-ಮೈಸೂರು, ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಬೆಳಗಾವಿ ಮಾರ್ಗಗಳಲ್ಲಿ ಏರಿಕೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು. ಡೀಸೆಲ್ ಬೆಲೆಯಲ್ಲಿ 8-10 ರೂಪಾಯಿ ಏರಿಕೆಯಾಗಿರುವುದರಿಂದ ಬಸ್ಗಳ ನಿರ್ವಹಣಾ ವೆಚ್ಚ 25-30% ಹೆಚ್ಚಾಗಿದೆ. ಸರಿದೂಗಿಸಲು ಟಿಕೆಟ್ ದರ ಹೆಚ್ಚಿಸುವುದು ಅನಿವಾರ್ಯವಾಗಿದೆಎಂಬುದು ಬಸ್ ಮಾಲೀಕರ ಅಳಲು. ರಾಜ್ಯದಲ್ಲಿ 5 ಶೇಕಡಾ ಆಲ್ಕೊಹಾಲ್ ಹೊಂದಿರುವ ಬಿಯರ್ಗಳ ಗರಿಷ್ಠ ಚಿಲ್ಲರೆ ಬೆಲೆ 20 ರಿಂದ 25 ಶೇಕಡಾ ಇಳಿಕೆಯಾಗಿದೆ. ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿ 20 ಶೇಕಡಾ ಕಡಿಮೆಯಾಗಿದೆ.


