Menu

ದೇಶದ ಖ್ಯಾತ ಶೂಟರ್‌, ಶೂಟಿಂಗ್‌ ತರಬೇತುದಾರ ಜಸ್ಪಾಲ್ ರಾಣಾ ನಿಧನ

ಖ್ಯಾತ ಭಾರತೀಯ ಶೂಟಿಂಗ್ ತರಬೇತುದಾರ, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಜಸ್ಪಾಲ್ ರಾಣಾ (49) ನಿಧನರಾಗಿದ್ದಾರೆ. ಭಾರತದ ಪಿಸ್ತೂಲ್ ಶೂಟರ್‌ಗಳಿಗೆ ಹೈ-ಪರ್ಫಾರ್ಮೆನ್ಸ್ ಕೋಚ್ ಆಗಿದ್ದ ಅವರು ಮ್ಯೂನಿಚ್‌ನಲ್ಲಿ ನಡೆದ ISSF ವಿಶ್ವಕಪ್‌ನಿಂದ ಭಾರತಕ್ಕೆ ವಾಪಸಾಗುವಾಗ ಅನಾರೋಗ್ಯಕ್ಕೆ ಒಳಗಾಗಿದ್ದರು. ಭಾರತ ತಂಡವು ವಿಶ್ವಕಪ್‌ನಲ್ಲಿ ಎರಡು ಚಿನ್ನ ಮತ್ತು ಎರಡು ಬೆಳ್ಳಿ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿತ್ತು.

ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತಪಾಸಣೆ ನಡೆಸಿದ ವೈದ್ಯರು ಹೃದಯದ ಸಮಸ್ಯೆ ಇದ್ದ ಕಾರಣ ಸ್ಟೆಂಟ್‌ ಅಳವಡಿಸಿದ್ದರು, ಕೆಲವು ದಿನಗಳ ನಂತರ ಎರಡನೇ ಸ್ಟೆಂಟ್ ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧತೆ ನಡೆಸಿದ್ದರು.
ರಾಣಾ ಅವರ ಸಾವು ಭಾರತೀಯ ಶೂಟಿಂಗ್‌ಗೆ ಭರಿಸಲಾಗದ ನಷ್ಟವಾಗಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಚಾಂಪಿಯನ್ ಕ್ರೀಡಾಪಟು ಮತ್ತು ತರಬೇತುದಾರರಾಗಿದ್ದರು. ರಾಣಾ ಹಲವು ವರ್ಷ ಭಾರತವನ್ನು ಪ್ರತಿನಿಧಿಸಿದ್ದರು. ದೇಶದಲ್ಲಿ ಕ್ರೀಡೆ ಅಭಿವೃದ್ಧಿ ಹೊಂದುತ್ತಿರುವ ಕಾಲಘಟ್ಟದಲ್ಲೇ ಶೂಟಿಂಗ್ ಅನ್ನು ಜನಪ್ರಿಯಗೊಳಿಸಿದ್ದರು.

ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಸೇರಿದಂತೆ ಹಲವು ಭಾರತೀಯ ಪಿಸ್ತೂಲ್ ಶೂಟರ್‌ಗಳಿಗೆ ತರಬೇತಿ ನೀಡುತ್ತಿದ್ದ ರಾಣಾ, ಪ್ರಸ್ತುತ ಭಾರತೀಯ ಪಿಸ್ತೂಲ್ ಈವೆಂಟ್‌ಗಳಿಗೆ ಉನ್ನತ-ಕಾರ್ಯಕ್ಷಮತೆಯ ತರಬೇತುದಾರರಾಗಿದ್ದರು.

ರಾಣಾ 1990ರ ದಶಕದಲ್ಲಿ ಶೂಟಿಂಗ್ ಕ್ರೀಡೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದರು. ಏಷ್ಯನ್ ಕ್ರೀಡಾಕೂಟದಲ್ಲಿ ನಾಲ್ಕು ಬಾರಿ ಚಿನ್ನದ ಪದಕ ಗೆದ್ದಿದ್ದಾರೆ ಮತ್ತು ಒಂಬತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಒಮ್ಮೆ ಏಷ್ಯನ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ ಮತ್ತು 1994ರಲ್ಲಿ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿದ್ದರು. ಜಸ್ಪಾಲ್ ರಾಣಾ 2006ರಲ್ಲಿ ಏಷ್ಯನ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published. Required fields are marked *