ರಾಮಲಿಂಗಾ ರೆಡ್ಡಿ ಅವರು ಗ್ರಾಮೀಣ ಭಾಗದಿಂದ ಬಂದವರಲ್ಲ. ಅವರಿಗೆ ಜಲಸಂಪನ್ಮೂಲ ಸಚಿವಾಲಯ ಸಿಕ್ಕಿದ್ದು, ಅವರು ನಗರ ಪ್ರದೇಶದಲ್ಲಿ ಕೆಲಸ ಮಾಡಲು ಬಯಸಿದ್ದಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ರಾಮಲಿಂಗಾ ರೆಡ್ಡಿ ಅವರು ರಾಜಿನಾಮೆ ನೀಡಿರುವ ಬಗ್ಗೆ ಕೇಳಿದಾಗ ಹೀಗೆ ಪ್ರತಿಕ್ರಿಯಿಸಿದ್ದಾರೆ. ರಾಮಲಿಂಗಾ ರೆಡ್ಡಿ ಪ್ರಮುಖ ನಾಯಕರು ಹಾಗೂ ನನಗೆ ಬಹಳ ಆತ್ಮೀಯರಾಗಿದ್ದು, ಅವರೊಂದಿಗೆ ನಾನು ಮಾತನಾಡುತ್ತೇನೆ ಎಂದು ತಿಳಿಸಿದರು. ಕೆಲವು ಕಾರ್ಯಕರ್ತರು ರಾಜೀನಾಮೆ ನೀಡುತ್ತಿರುವ ಬಗ್ಗೆ ಕೇಳಿದಾಗ, ಏನೇ ಇದ್ದರು ಶಿಸ್ತು ಬಹಳ ಮುಖ್ಯ ಎಂದರು.
ಬೆಂಗಳೂರು ನಗರ ದೇವತೆ ಅಣ್ಣಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ಅಣ್ಣಮ್ಮ ದೇವಿ ಬೆಂಗಳೂರಿನ ಗ್ರಾಮ ದೇವತೆ. ನಾಡಿನ ದೇವತೆ ಚಾಮುಂಡಿ ತಾಯಿ. ತಾಯಿ ದರ್ಶನ ಮಾಡಿ ಆಶೀರ್ವಾದ ಪಡೆದು, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ, ಸಮೃದ್ಧಿ, ನೆಮ್ಮದಿ, ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ, ಕೆಲಸ ಪ್ರಾರಂಭಿಸಿದ್ದೇನೆ ಎಂದು ಹೇಳಿದರು.
ಪೂಜೆ ವೇಳೆ ದೇವಿಯ ಬಲಭಾಗದಿಂದ ಹೂ ಬಿದ್ದಿದ್ದು, ಶುಭಸೂಚನೆ ಎಂದು ಅರ್ಚಕರು ಅದನ್ನು ಸಿಎಂಗೆ ನೀಡಿ ಆಶೀರ್ವದಿಸಿದರು. ಎನ್ನಲಾಗಿದೆ.


