Menu

ಟ್ರಂಪ್‌ ದಾಳಿ ಬೆದರಿಕೆ: ಜಾಗರೂಕರಾಗಿರಿ ಎಂದು ಇರಾನ್‌ ತಿರುಗೇಟು

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಮೆರಿಕ-ಇರಾನ್ ಯುದ್ಧ ನಿಲ್ಲಿಸುವ ಕುರಿತು ಶಾಂತಿ ಮಾತುಕತೆ ಆರಂಭಗೊಂಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಾಯಕರ ನಡುವಿನ ವಾಗ್ದಾಳಿ ಮುಂದುವರಿದಿದೆ. ಇರಾನ್ ಮೇಲೆ ಮತ್ತೊಮ್ಮೆ ಭೀಕರ ದಾಳಿ ನಡೆಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದು, ನಮ್ಮ ಸಶಸ್ತ್ರ ಪಡೆಗಳು ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಾಗಿವೆ, ಜಾಗೂಕತೆಯಿಂದ ಇರಿ ಎಂದು ಇರಾನ್ ಪ್ರತಿಕ್ರಿಯಿಸಿದೆ. ಟ್ರಂಪ್ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಹಾಕಿ ಇರಾನ್‌ಗೆ ಕಠಿಣ ಎಚ್ಚರಿಕೆ

ಬೆಂಗಳೂರಿನಲ್ಲಿ ದಿನಕ್ಕೆ 1,775 ಟನ್ ಸಂಸ್ಕರಣೆಯಾಗದ ಕಸ ರಾಜಕಾಲುವೆಗೆ: ಆರ್‌ ಅಶೋಕ

ಬೆಂಗಳೂರಿನಲ್ಲಿ ಪ್ರತಿದಿನ 1,775 ಟನ್ ಕಸ ಸಂಸ್ಕರಣೆಯಾಗದೇ ರಸ್ತೆ, ರಾಜಕಾಲುವೆ ಸೇರುತ್ತಿದೆ. ನಿಮ್ಮ ಮುಖ್ಯಮಂತ್ರಿ @DKShivakumar ಅವರ “ಬ್ರ್ಯಾಂಡ್ ಬೆಂಗಳೂರು” ಅಂದರೆ ಸಾರ್ವಜನಿಕರು ಕಲುಷಿತ ನೀರು ಕುಡಿದು ಸಾಯಬೇಕಾ,  ಕಸದ ರಾಶಿಯಲ್ಲಿ ನರಳಬೇಕಾ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಪ್ರಶ್ನಿಸಿದ್ದಾರೆ.

ಬಹುತ್ವ ಕಾಪಾಡಲು ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್‌ ಹೋರಾಟ ನಿರಂತರವಾಗಿರಲಿದೆ: ಮಾಜಿ ಸಿಎಂ ಸಿದ್ದರಾಮಯ್ಯ

ನಮ್ಮ ಸಮಾಜದಲ್ಲಿರುವ ಬಹುತ್ವವನ್ನು ಕಾಪಾಡುವ ಅಗತ್ಯವಿದೆ. ಹರಿಪ್ರಸಾದ್‌ ಅವರು ಆರ್‌ಎಸ್‌ಎಸ್‌ನ ವಿರುದ್ಧವಾಗಿ, ಬಿಜೆಪಿಯ ವಿರುದ್ಧವಾಗಿ ಹೋರಾಟದ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಆ ಪ್ರಯತ್ನ ನಮ್ಮೆಲ್ಲಾ ಕಾರ್ಯಕರ್ತರಲ್ಲಿ ಬರಬೇಕು. ಈ ಪ್ರಯತ್ನ ಮಾಡಿದಾಗ ಮಾತ್ರ ನಾವು ಈ

ಇದೇ ವರ್ಷದಿಂದ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ: ಸಿಎಂ ಡಿಕೆ ಶಿವಕುಮಾರ್‌

ರಾಹುಲ್ ಗಾಂಧಿ  ಮಾರ್ಗದರ್ಶನದಂತೆ  ಇದೇ ವರ್ಷದಿಂದ ವಿದ್ಯಾರ್ಥಿ ಚುನಾವಣೆ ನಡೆಸಲಾಗುವುದು. ವಿದ್ಯಾರ್ಥಿ ನಾಯಕರ ಚುನಾವಣೆಯನ್ನು ಕಾಲೇಜುಗಳಲ್ಲಿ ನಡೆಸಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗುವುದು.  ಆ ಮೂಲಕ ಪಂಚಾಯಿತಿಗಳಿಂದ ಪಾರ್ಲಿಮೆಂಟ್ ವರೆಗೂ ನಾಯಕರನ್ನು ತಯಾರು ಮಾಡಲಾಗುವುದು. ಇನ್ನು ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ತಪ್ಪಿಸಲಾಗುವುದಿಲ್ಲ.

ಬಿಡದಿ ಯೋಜನೆ ಕುಮಾರಸ್ವಾಮಿ ಆರಂಭಿಸಿ ಯಡಿಯೂರಪ್ಪ ಮುಂದುವರಿಸಿದ್ದರು: ಸಿಎಂ 

ಬಿಡದಿಯಲ್ಲಿ ಕುಮಾರಸ್ವಾಮಿ  ನೋಟಿಫಿಕೇಷನ್ ಮಾಡಿದ್ದರು. ಯಡಿಯೂರಪ್ಪ ಯೋಜನೆ ಮುಂದುವರಿಸಿದ್ದರು. ಅದನ್ನು ನಾವು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆಯೇ ಹೊರತು ಹೊಸದಾಗಿ ನಾವೇನೂ ಮಾಡುತ್ತಿಲ್ಲ. ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಮಾಡಿದವರು ಯಾರು,  ಈಗಿರುವ 9 ಸಾವಿರ ಎಕರೆಯಲ್ಲಿ 1 ಸಾವಿರ ಎಕರೆಯನ್ನು

ಪ್ರಜಾಸೇವೆ ಇಲಾಖೆ ಅಸ್ತಿತ್ವಕ್ಕೆ, ರಾಜ್ಯದ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಕರ್ನಾಟಕ ಭವನ: ಸಿಎಂ

ಸಾರ್ವಜನಿಕರ ಕುಂದುಕೊರತೆಗಳು, ಸಾರ್ವಜನಿಕ ಹೋರಾಟಗಳ ಅಹವಾಲುಗಳನ್ನು ಆಲಿಸಲು “ಪ್ರಜಾಸೇವೆ ಇಲಾಖೆ” ಯನ್ನು ಹೊಸದಾಗಿ ಪ್ರಾರಂಭ ಮಾಡಲಾಗುತ್ತಿದೆ. ಪ್ರತ್ಯೇಕ ಸಚಿವರಿಗೆ ಇದರ ಜವಾಬ್ದಾರಿ ವಹಿಸಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಶಿವಕುಮಾರ್‌ ಮಾಧ್ಯಮಗೋಷ್ಠಿಯಲ್ಲಿ

ಲೆಬನಾನ್‌ನಲ್ಲಿ ಮುಂದುವರಿದ ಇಸ್ರೇಲ್‌ ದಾಳಿ: ಐವರು ಬಲಿ

ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಡ್ರೋನ್ ಮತ್ತು ವಾಯು ದಾಳಿ ಮುಂದುವರಿಸಿದ್ದು, ಕನಿಷ್ಠ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ. ಶನಿವಾರ ಬೆಳಗಿನ ಜಾವದವರೆಗೆ ಇಸ್ರೇಲ್‌ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ಲೆಬನಾನ್‌ನ ನಬತಿಯೇಹ್ ವಸತಿ ಕಟ್ಟಡಗಳ ಮೇಲೆ

“ಅಡ್ಡಕಸುಬಿ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ಸಂಪೂರ್ಣ ಮುಳುಗಿ ಹೋಗಿದೆ”

ವಿರೋಧ ಪಕ್ಷದ ಶಾಸಕರಿಗೆ ಆಮಿಷ ಒಡ್ಡಿ, ಅಡ್ಡಮತದಾನ ಮಾಡಿಸುವ ರಾಜಕೀಯ ಸರ್ಕಸ್‌ನಲ್ಲಿ ದಿನಪೂರ್ತಿ ಮುಳುಗಿರುವ ಮುಖ್ಯಮಂತ್ರಿ @DKShivakumar ಅವರೇ, ನಿಮ್ಮ ಈ ಅಡ್ಡಕಸುಬಿ ಆಡಳಿತದಿಂದಾಗಿ ರಾಜ್ಯದ ಶಾಲಾ ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಕಿಡಿ ಕಾರಿದ್ದಾರೆ.

ಮೇಕೆದಾಟು ಯೋಜನೆ ವಿರುದ್ಧ ನಿಂತ ಟಿವಿಕೆ, ಕಾಂಗ್ರೆಸ್‌ ಬೆಂಬಲ ವಾಪಸ್‌ ಪಡೆಯಲಿ: ಆರ್‌ ಅಶೋಕ ಸವಾಲು

ತಮಿಳುನಾಡಲ್ಲಿ ಟಿವಿಕೆ ಪಕ್ಷದ ಸರ್ಕಾರ ಮೇಕೆದಾಟು ಯೋಜನೆಗೆ ವಿರುದ್ಧವಾಗಿ ನಿರ್ಣಯ ಕೈಗೊಂಡಿದೆ. ಈಗ ಕಾಂಗ್ರೆಸ್‌ ತನ್ನ ಬೆಂಬಲವನ್ನು ಹಿಂಪಡೆಯಲಿ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಲ್ಲಿ ಡಿಎಂಕೆ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್‌,

ಪರಿಷತ್‌ ಚುನಾವಣೆ ಫಲಿತಾಂಶ: ಮೈತ್ರಿಬಣದಲ್ಲಿ ಎಲ್ಲವೂ ಸರಿಯಿಲ್ಲ

ಮೇಲ್ಮನೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಗೋವಿಂದರಾಜ್ ಸೋಲು ಸಾಮಾನ್ಯದ್ದಲ್ಲ. ಈ ಸೋಲಿನಿಂದ ರಾಜ್ಯದ ಮೈತ್ರಿ ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದೀಗ ಬಹಿರಂಗಗೊಂಡಿದೆ. ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿ ಹಾಗೂ ದಳದ ಅಗ್ರ ನೇತಾರರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ರಣತಂತ್ರ ಹೂಡಬೇಕಿತ್ತು. ಆದರೆ