ಮೇಲ್ಮನೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಗೋವಿಂದರಾಜ್ ಸೋಲು ಸಾಮಾನ್ಯದ್ದಲ್ಲ. ಈ ಸೋಲಿನಿಂದ ರಾಜ್ಯದ ಮೈತ್ರಿ ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದೀಗ ಬಹಿರಂಗಗೊಂಡಿದೆ. ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿ ಹಾಗೂ ದಳದ ಅಗ್ರ ನೇತಾರರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ರಣತಂತ್ರ ಹೂಡಬೇಕಿತ್ತು. ಆದರೆ ಇದಾವುದೂ ಮೈತ್ರಿ ಪಾಳೆಯದಲ್ಲಿ ಕಂಡು ಬರಲಿಲ್ಲ. ಇದು ದಿಲ್ಲಿ ಬಿಜೆಪಿ ಹೈಕಮಾಂಡ್ ಅಗ್ರಜರ ನಿದ್ದೆಗೆಡಿಸಿದೆ.
ವಿಧಾನಪರಿಷತ್ ಚುನಾವಣೆ ಫಲಿತಾಂಶವೀಗ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾದ ಬೆನ್ನಹಿಂದೆಯೇ ಮೇಲ್ಮನೆ ಚುನಾವಣೆ ನಡೆದಿದ್ದು ಗಮನಾರ್ಹ. ಡಿಕೆ ಮುಖ್ಯಮಂತ್ರಿಯಾಗಿದ್ದು ಮತ್ತು ಮೇಲ್ಮನೆ ಚನಾವಣೆಯಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿದ್ದು , ಇದು ಕಾಂಗ್ರೆಸ್ ವಿರಾಟ್ ಶಕ್ತಿ ಪ್ರದರ್ಶನ ಕೂಡಾ. ಜೆಡಿಎಸ್ ಅಭ್ಯರ್ಥಿಯನ್ನು ಕಡಾಖಂಡಿತವಾಗಿ ಸೋಲಿಸಲೇಬೇಕೆಂದು ತೀರ್ಮಾನಿಸಿದ್ದ ಶಿವಕುಮಾರ್ ಮತ್ತು ಕಾಂಗ್ರೆಸ್ ರಣತಂತ್ರ ಕೊನೆಗೂ ಫಲಿಸಿತು. ಇದೇ ವೇಳೆ ಇದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ನಾಯಕರ ವರ್ತುಲದಲ್ಲಿ ಕಂಪನವನ್ನೂ ಸೃಷ್ಟಿಸಿದೆ.
ಮೇಲ್ಮನೆ ಚುನಾವಣೆ ಫಲಿತಾಂಶದಿಂದ ರಾಜ್ಯ ರಾಜಕೀಯದಲ್ಲಿ ಭಾರಿ ಪಲ್ಲಟಗಳೆಂಬುದರಲ್ಲಿ ಅರ್ಥವಿಲ್ಲ . ಅರ್ಥಾತ್ ಚಿಂತಕರ ಚಾವಡಿಗೆ ಈ ಪ್ರಮಾಣದಲ್ಲಿ ಬಿರುಸಿನ ಮತ್ತು ಜಿದ್ದಾಜಿದ್ದಿ ರಾಜಕೀಯ ಬೇಕಿಲ್ಲ. ಆದರೆ ಇಂದು ಚಿಂತಕರ ಚಾವಡಿ ಕೇವಲ ನಾಡಿನ ಬುದ್ದಿಜೀವಿಗಳು ಮತ್ತು ಪರಿಣಿತರಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಕೂಡಾ ಆಸೆ ಮತ್ತು ಆಮಿಷ ಮತ್ತು ಕುದುರೆ ವ್ಯಾಪಾರ ಇವೆಲ್ಲವನ್ನೂ ಮೈಗೂಡಿಸಿಕೊಂಡಿರುವುದು ದುರದೃಷ್ಟಕರ.
ದಳ ಅಭ್ಯರ್ಥಿ ಗೋವಿಂದರಾಜ್ ಸೋಲು ಸಾಮಾನ್ಯದ್ದಲ್ಲ. ಇವರ ಸೋಲಿನಿಂದ ರಾಜ್ಯದ ಮೈತ್ರಿ ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗ ಬಹಿರಂಗವಾಗಿದೆ. ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿ ಮತ್ತು ದಳ ಮುಖಂಡರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ರಣತಂತ್ರ ಹೂಡಬೇಕಿತ್ತು. ಆದರೆ ಇದಾವುದೂ ಮೈತ್ರಿ ಪಾಳೆಯದಲ್ಲಿ ಕಂಡು ಬರಲಿಲ್ಲ. ಇದು ದಿಲ್ಲಿ ಬಿಜೆಪಿ ಹೈಕಮಾಂಡ್ ನಿದ್ದೆಗೆಡಿಸಿದೆ. ಕಳೆದ ಮೂರು ವರ್ಷಗಳ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಮತ್ತು ದಳದ ಅಭ್ಯರ್ಥಿಗಳಿಗೆ ಘೋರ ಪರಾಜಯವಾಗಿದೆ . ಕರ್ನಾಟಕದಲ್ಲಿ ತನ್ನ ಶಕ್ತಿಯನ್ನು ಇಮ್ಮಡಿಗೊಳಿಸಬೇಕೆಂಬ ನರೇಂದ್ರ ಮೋದಿ ಮತ್ತು ಅಮಿತ್‌ಷಾ ಅವರ ಬಿಗಿಪಟ್ಟು ಮತ್ತು ಹಪಾಹಪಿಗೆ ಶಿವಕುಮಾರ್ ರಣತಂತ್ರ ತತ್ತರಿಸುವಂತೆ ಮಾಡಿದೆ ನೇರ ಚುನಾವಣೆಯಾಗಲಿ. ಮೇಲ್ಮನೆ ಚುನಾವಣೆಯಾಗಲಿ. ಇದರಲ್ಲಿ ಕಾಂಗ್ರೆಸ್ ಹೇಗೆ ಗೆದ್ದು ಬರಬೇಕೆಂಬ ರಿಯಾಲ್ಟಿ ಪಾಲಿಟಿಕ್ಸ್ ಪಟ್ಟುಗಳನ್ನು ಡಿಕೆ ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ.
ಒಟ್ಟಿನಲ್ಲಿ ದಿಲ್ಲಿ ಮತ್ತು ದೇಶದ ಎಲ್ಲ ಕಡೆ ತನ್ನ ಮಹಾವಿಜಯಗಳಿಂದ ಬೀಗುತ್ತಿರುವ ಬಿಜೆಪಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಜಯದ ಜೈತ್ರ ಯಾತ್ರೆ ಮುಂದುವರಿಸಿರುವುದು ಕಂಡು ಕಂಗಾಲಾಗುವಂತಾಗಿದೆ. ಮೂರು ವರ್ಷಗಳ ಕಾಂಗ್ರೆಸ್ ಸರ್ಕಾರದ ಬಳಿಕವೂ ಮೈತ್ರಿ ಕೂಟದ ಪ್ರಮುಖ ನಾಯಕರಿಗೆ ಕಾಂಗ್ರೆಸ್ ಸರ್ಕಾರವೆಂಬ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕಲು ಸಾಧ್ಯವಾಗಿಲ್ಲ. ಬಾಗಲಕೋಟೆ ಮತ್ತು ದಾವಣಗೆರೆ ಮರುಚುನಾವಣೆಯಲ್ಲಿ ಬಿಜೆಪಿ ಮಣ್ಣು ಮುಕ್ಕಿದೆ. ಈಗ ಮೇಲ್ಮನೆ ಚುನಾವಣೆಂiಲ್ಲಿ ಬಿಜೆಪಿ ಎರಡು ಸೀಟುಗಳನ್ನು ಗೆದ್ದರೂ ಅಡ್ಡ ಮತದಾನಕ್ಕೆ ಕಾರಣಗಳೇನೆಂಬುದನ್ನು ಹೈಕಮಾಂಡ್‌ಗೆ ರಾಜ್ಯದ ಕಮಲ ನಾಯಕರು ವಿವರಿಸಬೇಕಿದೆ. ಅಲ್ಲದೆ ತಾಳ ಮೇಳವಿಲ್ಲದ ಮೈತ್ರಿಕೂಟದ ನಾಯಕರ ಮುಂದಿನ ನಡೆಯೂ ಈಗ ತಿಳಿಗೊಳ್ಳಬೇಕಿದೆ.


