ಅಮೆರಿಕದ ಗ್ರೀನ್‌ಕಾರ್ಡ್ ಆಕಾಂಕ್ಷಿಗಳು ಇನ್ಮುಂದೆ ತಮ್ಮ ಮಾತೃದೇಶಗಳಿಗೆ ಹಿಂತಿರುಗಿ ಅಲ್ಲಿಂದಲೇ ಅಮೆರಿಕ ಕಾನ್ಸುಲೆಟ್ ಕಚೇರಿ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಅಮೆರಿಕ ಪೌರತ್ವ ಮತ್ತು ವಲಸೆ ವಿಭಾಗವು ಆದೇಶ ಹೊರಡಿಸಿದೆ.
ತಾತ್ಕಾಲಿಕ ವೀಸಾದಲ್ಲಿ ಇರುವವರು, ಅಕ್ರಮವಾಗಿ ವಾಸಿಸುತ್ತಿರುವವರು, ಗಂಡ/ಹೆಂಡತಿ ಅಥವಾ ಮಕ್ಕಳ ಪ್ರಾಯೋಜಕತ್ವ ಮೂಲಕ ಕಾನೂನುಬದ್ಧ ವಲಸಿಗ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವವರು ಈ ನಿಯಮದ ಅನ್ವಯ ಅಮೆರಿಕ ತೊರೆದು ಸ್ವದೇಶಕ್ಕೆ ವಾಪಸಾಗಿ ಅರ್ಜಿ ಸಲ್ಲಿಸಬೇಕಿದೆ.
ಎಚ್1ಬಿ ವೀಸಾ, ಎಲ್1 ವೀಸಾ ಹಾಗೂ ವಿದ್ಯಾರ್ಥಿ ವೀಸಾದಡಿ ಅಮೆರಿಕಕ್ಕೆ ಹೋಗಿದ್ದವರು ಅಲ್ಲಿಯೇ ಉಳಿದುಕೊಂಡು ಗ್ರೀನ್‌ಕಾಡ್‌ಗೆ ಅರ್ಜಿ ಸಲ್ಲಿಸಬಹುದಿತ್ತು. ಇದೀಗ ಮಾತೃದೇಶಗಳಿಗೆ ತೆರಳಿ ಅಲ್ಲಿಂದ ಅರ್ಜಿ ಸಲ್ಲಿಸಬೇಕಿದೆ.
ಅಮೆರಿಕದ ಗ್ರೀನ್ ಕಾರ್ಡ್ ಅಲ್ಲಿ ಕಾನೂನುಬದ್ಧವಾಗಿ ಶಾಶ್ವತವಾಗಿ ವಾಸಿಸಲು ಮತ್ತು ಕೆಲಸ ಮಾಡಲು ವಿದೇಶಿಯರಿಗೆ ನೀಡುವ ಅಧಿಕೃತ ಪ್ರಮಾಣಪತ್ರ. ಶಾಶ್ವತ ನಿವಾಸಿ ಕಾರ್ಡ್ ಎಂದು ಕರೆಯಲಾಗುತ್ತದೆ. ಎಚ್1ಬಿ ವೀಸಾ, ಎಲ್1 ವೀಸಾ ಹಾಗೂ ವಿದ್ಯಾರ್ಥಿ ವೀಸಾದಡಿ ಅಮೆರಿಕಕ್ಕೆ ಹೋಗಿದ್ದವರು ಅಲ್ಲಿಯೇ ಉಳಿದುಕೊಂಡು ಗ್ರೀನ್‌ಕಾಡ್‌ಗೆ ಅರ್ಜಿ ಸಲ್ಲಿಸಬಹುದಿತ್ತು. ಇದೀಗ ಮಾತೃದೇಶಗಳಿಗೆ ತೆರಳಿ ಅಲ್ಲಿಂದ ಅರ್ಜಿ ಸಲ್ಲಿಸಬೇಕಿದೆ.
ಗ್ರೀನ್ ಕಾರ್ಡ್ ಇದ್ದವರು ಅಮೆರಿಕದಲ್ಲಿ ಯಾವುದೇ ನಿರ್ಬಂಧವಿಲ್ಲದೆ ಶಾಶ್ವತವಾಗಿ ವಾಸಿಸಬಹುದು. ಅಮೆರಿಕದ ಯಾವುದೇ ಸಂಸ್ಥೆ ಅಥವಾ ಕಂಪನಿಯಲ್ಲಿ ಉದ್ಯೋಗ ಮಾಡಬಹುದು. ವಿಶ್ವದಾದ್ಯಂತ ಸುಲಭವಾಗಿ ಪ್ರಯಾಣಿಸಲು ಅವಕಾಶ ಇರುತ್ತದೆ. ಮೆರಿಕದ ಶಿಕ್ಷಣ, ಸಾಮಾಜಿಕ ಭದ್ರತಾ ಸೌಲಭ್ಯಗಳು ಮತ್ತು ಸರ್ಕಾರಿ ಯೋಜನೆಗಳ ಲಾಭ ಪಡೆಯಬಹುದು.


