Featured
ಧಾರವಾಡದಲ್ಲಿ ಕಾರು ಉರುಳಿ ಮೂವರ ಸಾವು
ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಅಸು ನೀಗಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಬೆಳಗಾವಿ ಕಡೆಯಿಂದ ಧಾರವಾಡಕ್ಕೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಉರುಳಿದೆ. ಮೃತಪಟ್ಟ ಮೂವರು ದಾವಣಗೆರೆ ಜಿಲ್ಲೆಯ ನಿವಾಸಿಗಳಾದ ವಿನಾಯಕ ಕೆ.ಯು (25), ಮಂಜುನಾಥ (29) ಹಾಗೂ ಬಸವರಾಜ (34) ಎಂದು ಗುರುತಿಸಲಾಗಿದೆ. ಗಾಯಗೊಂಡ ಅಭಿಷೇಕ, ಅಜಯ್ ಹಾಗೂ ಬಸನಗೌಡ ಸ್ಥಿತಿ ಕೂಡ ಗಂಭೀರವಾಗಿದೆ. ಸ್ಥಳಕ್ಕೆ ಗರಗ
ಓದು ಎಂದು ಪೋಷಕರು ಬುದ್ಧಿ ಹೇಳಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ
ಚೆನ್ನಾಗಿ ಓದು ಎಂದು ಪೋಷಕರು ಬುದ್ಧಿ ಹೇಳಿದ್ದಕ್ಕೆ ನೊಂದ ಒಂಬತ್ತನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸೃಷ್ಟಿ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ, ನಗರದ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು. ಪೋಷಕರು ಚೆನ್ನಾಗಿ
ಬಿಜೆಪಿ ಪಾದಯಾತ್ರೆಯಿಂದ ಜನತೆಗೇನು ಉಪಯೋಗ ?
ರಾಜ್ಯಕ್ಕೆ ಸಂದಾಯವಾಗಬೇಕಿರುವ ಕೇಂದ್ರದ ಅನುದಾನದ ವಿಚಾರದಲ್ಲಿ ತಾರತಮ್ಯ ಮುಂದುವರಿದಿದೆ. ಇದರಿಂದ ರಾಜ್ಯ ತೊಂದರೆ ಅನಭವಿಸಿದೆ. ಕೇಂದ್ರ ಮಂತ್ರಿಮಂಡಲದಲ್ಲಿ ಸಚಿವರೂ ಆಗಿರುವ ರಾಜ್ಯದ ಬಿಜೆಪಿ ಮತ್ತು ದಳ ಸಂಸದರು ಪ್ರಧಾನಿ ಅವರ ಮೇಲೆ ಒತ್ತಡ ತಂದು ಸೂಕ್ತ ಅನುದಾನ ಬಿಡುಗಡೆಗೆ ಆಗ್ರಹಿಸುತ್ತಿಲ್ಲವೇಕೆ? ಆಂಧ್ರ
ಶಿವರಾಮ ಕಾರಂತ ಬಡಾವಣೆ: ಭೂಮಿ ಮಾಲೀಕರಿಗೆ ಭೂ ಪರಿಹಾರ ವಿತರಿಸಿದ ಸಿಎಂ
ನಾನೊಬ್ಬ ರೈತರ ಮಗ, ರೈತ ಆಸ್ತಿ ಕಳೆದುಕೊಳ್ಳಬೇಕಾದರೆ ಆಗುವ ನೋವಿನ ಅರಿವಿದೆ. ಆ ನೋವನ್ನು ಕಡಿಮೆ ಮಾಡಬೇಕೆನ್ನುವ ಉದ್ದೇಶವೂ ಇದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಡಾ ಕೆ ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ ಭೂಮಾಲೀಕರು, ರೈತರಿಗೆ ನೆಹರು
ದೊಡ್ಡಬಳ್ಳಾಪುರದಲ್ಲಿ ರೈಲು ಡಿಕ್ಕಿ ಹೊಡೆದು ಅಜ್ಜಿ , ಮೊಮ್ಮಕ್ಕಳ ಸಾವು
ದೊಡ್ಡಬಳ್ಳಾಪುರ ನಗರ ರೈಲು ನಿಲ್ದಾಣದಲ್ಲಿ ನಡೆದ ಅಪಘಾತದಲ್ಲಿ ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ಪ್ರಾಣ ಕಳೆದುಕೊಂಡ ದಾರುಣ ಘಟನೆ ನಡೆದಿದೆ. ಶನಿವಾರ-ಭಾನುವಾರ ಶಾಲೆಗೆ ರಜೆ ಇದ್ದುದರಿಂದ ಮೊಮ್ಮಕಳಿಬ್ಬರು ಅಜ್ಜಿ ಮನೆಗೆ ಬಂದಿದ್ದರು. ಬೇಗ ಮನೆಗೆ ವಾಪಸ್ ಹೋಗಿ ಶಾಲೆಗೆ ತೆರಳಬೇಕೆಂದು ರೈಲು
ಚಿಕನ್ ಪೀಸ್ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ
ಪಾರ್ಟಿಯಲ್ಲಿ ಚಿಕನ್‌ಪೀಸ್ ತಿನ್ನುವ ವಿಚಾರಕ್ಕೆ ಆರಂಭಗೊಂಡ ಕ್ಷುಲ್ಲಕ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಬೆಳಗಾವಿಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಡೆದಿದೆ. ಸೀತಾರಾಮ್ ಕೊಲೆಯಾಗಿದ್ದು, ಅರುಣ್‌ಕುಮಾರ್ ಕೊಲೆ ಮಾಡಿದಾತ. ಇವರಿಬ್ಬರೂ ಉತ್ತರ ಪ್ರದೇಶದ ಪಿಲಿಪತ್ ಜಿಲ್ಲೆಯ ಕಬೀರಗಂಜ್
ಮೊಬೈಲ್ ವಿಚಾರಕ್ಕೆ ಜಗಳ: ಅಣ್ಣನ ಕೊಂದ ತಮ್ಮ
ಮೊಬೈಲ್ ವಿಚಾರಕ್ಕೆ ಸೋದರರಿಬ್ಬರು ಜಗಳವಾಡಿ ತಮ್ಮ ಅಣ್ಣನನ್ನು ಕೊಂದಿರುವ ಘಟನೆ ಮಂಗಳೂರಿನ ಕೊಟ್ಟಾರ ಕ್ರಾಸ್ ಬಳಿ ನಡೆದಿದೆ. ನಲ್ವತ್ತು ವರ್ಷದ ಅಡಿವಪ್ಪ ಎಂಬವರನ್ನು ತಮ್ಮ ರಾಜು ಎಂಬಾತ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸೋದರರು ಸೇರಿದಂತೆ ಬೆಳಗಾವಿ ಬೈಲಹೊಂಗಲದ ಕುಟುಂಬ
ಬಿಜೆಪಿ ಇರಬಾರದು ಎಂದು ಕುಮಾರಸ್ವಾಮಿ ಹೋರಾಟ: ಸಿಎಂ ಡಿಕೆ ಶಿವಕುಮಾರ್
ಬಿಜೆಪಿ ಇರಬಾರದು ಎಂದು ಕುಮಾರಸ್ವಾಮಿ ಹೋರಾಟ ಮಾಡುತ್ತಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನೆಹರು ತಾರಾಲಯದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಕೆಪಿಎಸ್ ಸಿ ಹಗರಣದಲ್ಲಿ ಸರ್ಕಾರ ಭಾಗಿಯಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದು, ಮತ್ತೊಂದೆಡೆ ಅವರ ಮೈತ್ರಿ ನಾಯಕರೇ
ಕೆಪಿಎಸ್ಸಿ ಅಕ್ರಮದಲ್ಲಿ ಬಿಜೆಪಿಯವರೂ ಭಾಗಿ: ಸಾಮಾಜಿಕ ಕಾರ್ಯಕರ್ತ ಶರಣು ಆರೋಪ
ಕೆಪಿಎಸ್ಸಿ ಪಶು ವೈದ್ಯಕೀಯ ನೇಮಕದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತ ಬಸವರಾಜ ಕನ್ನಾಳೆ ಅವರನ್ನು ಬಂಧಿಸಿದ್ದು, ಈ ಅಕ್ರಮದಲ್ಲಿ ಬಿಜೆಪಿಯವರೂ ಭಾಗಿಗಳಾಗಿದ್ದಾರೆ ಎಂದು ಕಲಬುರಗಿಯ ಸಾಮಾಜಿಕ ಕಾರ್ಯಕರ್ತ ಶರಣು ಐಟಿ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ನೀವು ಮಾಡುತ್ತಿರುವುದೇ ಚಿತ್ರಾನ್ನ, ಯಾರಿಗೆ ಮೃಷ್ಟಾನ್ನ ಕೊಟ್ಟಿದ್ದೀರಿ: ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ
ಗೃಹ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ , ನೀವು ಮಾಡುತ್ತಿರುವುದೇ ಚಿತ್ರಾನ್ನ, ಯಾರಿಗೆ ಮೃಷ್ಟಾನ್ನ ಕೊಟ್ಟಿದ್ದೀರಿ, ನಾನು ಕೇಳುತ್ತಿರುವ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ಕೊಡದೆ ಕೇವಲ ಎಕ್ಸ್ ವೇದಿಕೆಯಲ್ಲಿ ಮಾತನಾಡಿ ಜಾರಿಕೊಳ್ಳುತ್ತಿರುವುದು ಏಕೆ




