Wednesday, September 02, 2026
Menu

ಬಿಜೆಪಿ ಪಾದಯಾತ್ರೆಯಿಂದ ಜನತೆಗೇನು ಉಪಯೋಗ ?

ರಾಜ್ಯಕ್ಕೆ ಸಂದಾಯವಾಗಬೇಕಿರುವ ಕೇಂದ್ರದ ಅನುದಾನದ ವಿಚಾರದಲ್ಲಿ ತಾರತಮ್ಯ ಮುಂದುವರಿದಿದೆ. ಇದರಿಂದ ರಾಜ್ಯ ತೊಂದರೆ ಅನಭವಿಸಿದೆ. ಕೇಂದ್ರ ಮಂತ್ರಿಮಂಡಲದಲ್ಲಿ ಸಚಿವರೂ ಆಗಿರುವ ರಾಜ್ಯದ ಬಿಜೆಪಿ ಮತ್ತು ದಳ ಸಂಸದರು ಪ್ರಧಾನಿ ಅವರ ಮೇಲೆ ಒತ್ತಡ ತಂದು ಸೂಕ್ತ ಅನುದಾನ ಬಿಡುಗಡೆಗೆ ಆಗ್ರಹಿಸುತ್ತಿಲ್ಲವೇಕೆ?

ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಯಾವ ತೊಂದರೆ, ತಕರಾರೂ ಇಲ್ಲದೆ ಅನುದಾನ ಹಂಚಿಕೆಯಾಗುತ್ತದೆ. ಆದರೆ ಈ ವಿಷಯದಲ್ಲಿ ರಾಜ್ಯಕ್ಕೆ ಮಾತ್ರ ಸೊನ್ನೆ. ಇಂತಹ ಸನ್ನಿವೇಶದಲ್ಲಿ ವಿಪಕ್ಷಗಳು ತಮ್ಮ ರಾಜಕೀಯ ಹಿತರಕ್ಷಣೆಗಾಗಿ ಪಾದಯಾತ್ರೆ ಮಾಡುವುದರಿಂದ ಸಂಕಷ್ಟದಲ್ಲಿರುವ ರಾಜ್ಯದ ಜನತೆಗೇನಾದರೂ ಉಪಯೋಗವಿದೆಯೆ ?

ರಾಜ್ಯದ ಬಹುತೇಕ ಕಡೆ ಒಣಹವೆ. ತೀವ್ರ ಬರ. ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ನಿರ್ಜೀವ ಸ್ಥಿತಿಯಲ್ಲಿ ಕೆರೆ, ಕುಂಟೆಗಳು. ಒಟ್ಟಾರೆ ಇದು ಬೀದರ್‌ನಿಂದ ಚಾಮರಾಜನಗರದವರೆಗಿನ ವಾಸ್ತವ ಸನ್ನಿವೇಶ. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಪುನಾರಚನೆಗೊಂಡಿರುವುದು ಸರಿಯಷ್ಟೆ. ಈ ಸರ್ಕಾರ ಚಾಲ್ತಿಗೆ ಬಂದ ಕೆಲವೇ ದಿನಗಳಲ್ಲಿ ಕಾವೇರಿ ನೀರಿನ ಸಮಸ್ಯೆ ಮತ್ತು ವಾಲ್ಮೀಕಿ ಹಗರಣ ಮರುಕಳಿಸಿತು. ಆದರೆ ಇಂತಹ ಸನ್ನಿವೇಶ, ಆರೋಪ ಮತ್ತು ಟೀಕೆ, ಟಿಪ್ಪಣಿಗಳ ನಡುವೆ ಯಾವುದೇ ಸರ್ಕಾರವಿರಲಿ, ತನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತದೆ.

ಸರ್ಕಾರ ಎಂದರೆ ಕೇವಲ ಆಡಳಿತಾರೂಢ ಪಕ್ಷ ಒಂದೇ ಅಲ್ಲ. ಮುಖ್ಯಮಂತ್ರಿ ಮತ್ತು ಅವರ ಮಂತ್ರಿ ಮಂಡಲ ಮತ್ತು ಅಧಿಕಾರಿಗಳ ನೆರವಿನಿಂದಲೇ ರಾಜ್ಯವೊಂದರ ಆಡಳಿತ ನಡೆಯುವುದಿಲ್ಲ. ಗುರುತರ ಆರೋಪಗಳನ್ನು ಹೊತ್ತ ಸಚಿವ ನಾಗೇಂದ್ರ ಅವರ ರಾಜೀನಾಮೆಯಿಂದ ಬಿಜೆಪಿ ಮತ್ತು ಜೆಡಿಎಸ್ ಪೊಲಿಟಿಕಲ್ ಅಜೆಂಡಾ ಈಡೇರಿತಷ್ಟೆ ! ಆದರೆ ಇದರಿಂದ ನಾಡಿನ ಜನತೆಯ ಅಥವಾ ವಿರೋಧ ಪಕ್ಷಗಳ ಕ್ಷೇತ್ರದ ಜನತೆಯ ಕುಂದುಕೊರತೆ ಪರಿಹಾರ ಆಯಿತೇ?  ರಾಜ್ಯದ ಜನತೆಯ ಕಷ್ಟ ಕಾರ್ಪಣ್ಯ ನಿವಾರಿಸುವ ವಿಚಾರದಲ್ಲಿ ವಿರೋಧ ಪಕ್ಷಗಳು ಕೈ ಜೋಡಿಸಲು ಮುಖ್ಯಮಂತ್ರಿ ಶಿವಕುಮಾರ್ ಈಗಾಗಲೇ ಹಲವು ಹತ್ತು ಸಾರಿ ಮನವಿ ಮಾಡಿದ್ದಾರೆ.

ನಾಡಿನ ಅಭಿವೃದ್ಧಿ ಮತ್ತು ಜನತೆಯ ಕಷ್ಟ, ಕಾರ್ಪಣ್ಯ ಬಗೆಹರಿಸುವ ವಿಷಯದಲ್ಲಿ ಯಾವುದೇ ರಾಜಕೀಯ ಇರಬಾರದು ಮತ್ತು ಇದು ನುಸಳಬಾರದು. ಈ ಮಾತುಗಳನ್ನು ಈಗ ನಾಡಿನ ಮುಖ್ಯಮಂತ್ರಿ ಪದೇ ಪದೇ ವಿಪಕ್ಷಗಳಿಗೆ ಹೇಳಿದರೂ, ಇದನ್ನು ಕೇಳಿಸಿಕೊಳ್ಳುವ ವ್ಯವದಾನ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಇಲ್ಲ. ಮಂತ್ರಿ ರಾಜೀನಾಮೆ ನಂತರವೂ ಈಗ ಬಿಜೆಪಿ ನಾಯಕರು ರಾಯಚೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು ನಿರ್ಧರಿಸುವುದು ಗಮನಾರ್ಹ. ಇಂತಹ ಪಾದಯಾತ್ರೆ ಬದಲಾಗಿ ಇದೇ ಶಾಸಕರು ತಮ್ಮ ಕ್ಷೇತ್ರದ ಜನತೆ ಈಗ ಎದುರಿಸುತ್ತಿರುವ ಜನ- ಜಾನುವಾರು ಕುಡಿಯುವ ನೀರಿನ ಸಮಸ್ಯೆ, ದುರಸ್ತಿಯಾಗದ ಕೊಳವೆ ಬಾವಿ ಮತ್ತು ಹೂಳು ತುಂಬಿಕೊಂಡಿರುವ ಕೆರೆ, ಕುಂಟೆ ಇತ್ಯಾದಿ ಸಾರ್ವಜನಿಕ ತುರ್ತು ವಿಷಯಗಳ ಬಗ್ಗೆ ಚರ್ಚೆ ನಡೆಸಿ ಸರ್ಕಾರದ ಜೊತೆ ಸಮಾಲೋಚಿಸಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದಲ್ಲಿ ಇದಕ್ಕೊಂದು ಅರ್ಥ ಉಂಟು.

ಬರ ಪರಿಹಾರ ಮತ್ತು ಅನುದಾನದ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಸಂದಾಯವಾಗಬೇಕಿರುವ ಅನುದಾನದ ವಿಚಾರದಲ್ಲಿ ತಾರತಮ್ಯ ಆಗಿದೆ ಈ ವಿಷಯದಲ್ಲಿ ಕೇಂದ್ರದ ಪಕ್ಷಪಾತ ಧೋರಣೆಯ ಫಲವಾಗಿ ರಾಜ್ಯ ತೊಂದರೆಗೀಡಾಗಿದೆ. ರಾಜ್ಯದಿಂದ ಲೋಕಸಭೆಗೆ ಚುನಾಯಿತರಾಗಿ ಈಗ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳೂ ಆದವರು ಈ ವಿಚಾರದಲ್ಲಿ ಪ್ರಧಾನಿ ಅವರ ಮೇಲೆ ಒತ್ತಡ ತಂದು ಸೂಕ್ತ ಅನುದಾನ ಬಿಡುಗಡೆಗೆ ಆಗ್ರಹಿಸುತ್ತಿಲ್ಲ ಏಕೆ? ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆಯಾವುದೆ ತೊಂದರೆ, ತಕರಾರುಗಳಿಲ್ಲದೆ ಅನುದಾನ ಹಂಚಿಕೆಯಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ತೀವ್ರ ಬರ ಇದ್ದರೂ ವಿಪಕ್ಷಗಳು ತಮ್ಮ ರಾಜಕೀಯ ಹಿತರಕ್ಷಣೆಗಾಗಿ ಪಾದಯಾತ್ರೆ ಮಾಡುವುದರಿಂದ ಸಂಕಷ್ಟದಲ್ಲಿರುವ ರಾಜ್ಯದ ಜನತೆಗೇನೂ ಪ್ರಯೋಜನವಿಲ್ಲ.

Related Posts

Leave a Reply

Your email address will not be published. Required fields are marked *