Featured
ಬಿಜೆಪಿ ಸರ್ಕಾರ ಯಾವ ಪ್ರಕರಣ ಸಿಬಿಐಗೆ ವಹಿಸಿದೆ, ನಮ್ಮ ಪ್ರಶ್ನಿಸಲು ನೈತಿಕತೆ ಇಲ್ಲ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ. ನಮ್ಮನ್ನು ಪ್ರಶ್ನೆ ಮಾಡಲು ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅವರು ಅಧಿಕಾರದಲ್ಲಿದ್ದಾಗ ಯಾವುದಾದರೂ ಒಂದು ಪ್ರಕರಣವನ್ನಾದರೂ ಕೊಟ್ಟಿದ್ದರೆ ನಮ್ಮನ್ನು ಕೇಳಬಹುದು. ನಾವು ಅಧಿಕಾರದಲ್ಲಿದ್ದಾಗ ಸುಮಾರು ಏಳೆಂಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು ಎಂದರು. ಬಳ್ಳಾರಿ ಪ್ರಕರಣದ ಬಗ್ಗೆ ಬಿಜೆಪಿ ಜನಾಂದೋಲನ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿರೋಧಪಕ್ಷದಲ್ಲಿರುವಾಗ ಯಾವ
ಪಾವಗಡದಲ್ಲಿ ಆಸ್ಪತ್ರೆಗೆ ತಂದೆ ಜಮೀನು ದಾನ: ಆ್ಯಂಬುಲೆನ್ಸ್ ಸಿಗದೆ ಮಗ ಸಾವು
ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆಯಲ್ಲಿ ಅಸ್ವಸ್ಥಗೊಂಡ ರೋಗಿಗೆ ಸಮಯಕ್ಕೆ ಸರಿಯಾಗಿ ತಾಲೂಕು ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಸಿಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಸೈಯ್ಯದ್ ಅಕ್ರಮ್(42) ಮೃತಪಟ್ಟವರು. ರೋಗಿ ಸೈಯ್ಯದ್‌ಗೆ ಬಿಪಿ ಕಡಿಮೆಯಾಗಿರುವ ಕಾರಣ ಸಮುದಾಯ ಆರೋಗ್ಯ ಕೇಂದ್ರದವರು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು.
2028ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ: ಸತೀಶ್ ಜಾರಕಿಹೊಳಿ
ಜನರು ಅಭಿಮಾನದಿಂದ ಮುಂದಿನ ಸಿಎಂ ಅಂತ ಘೋಷಣೆ ಕೂಗ್ತಾರೆ, ಆದರೆ ಈ ಅವಧಿಗೆ ಅಲ್ಲ, ಮುಂದಿನ 2028ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನ ಅವರ ಅಭಿಮಾನಕ್ಕಾಗಿ
ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆಸಲು ಗ್ರೀನ್ ಸಿಗ್ನಲ್!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ರಾಜ್ಯ ಗೃಹ ಇಲಾಖೆ ಅನುಮತಿ ನೀಡಿದೆ. ಈ ಮೂಲಕ ತವರಿನ ಪಂದ್ಯಗಳು ಕೈ ತಪ್ಪುವ ಭೀತಿಯಲ್ಲಿದ್ದ ಆರ್ ಸಿಬಿ ಅಭಿಮಾನಿಗಳಿಗೆ ಖುಷಿಯಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ. ಪಂದ್ಯಗಳು ಇಲ್ಲೇ
ಬಿಗ್ ಬಾಸ್ ವಿನ್ನರ್‌ಗೆ ಸಿಕ್ಕಿದೆ ದಾಖಲೆಯ 37 ಕೋಟಿ ಮತ, ವಿನ್ನರ್ ಯಾರು
ಈ ಬಾರಿ ಬಿಗ್‌ಬಾಸ್ ಕನ್ನಡದ ಗೆಲ್ಲುವ ಅಭ್ಯರ್ಥಿಗೆ ದಾಖಲೆ ಪ್ರಮಾಣದಲ್ಲಿ ಮತಗಳು ಬಂದಿವೆ, ವೋಟಿಂಗ್ ಮುಗಿಯಲು ಒಂದು ದಿನ ಬಾಕಿ ಇರುವಾಗಲೇ ಗೆಲುವಿನ ಅಭ್ಯರ್ಥಿ ಪರ 37 ಕೋಟಿಗೂ ಅಧಿಕ ಮತಗಳು ಲಭಿಸಿವೆ. ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಂದ ಜೈಲರ್ ಮೇಲೆ ಹಲ್ಲೆ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯನಿರತ ಜೈಲು ಸಿಬ್ಬಂದಿ ಮೇಲೆಯೇ ಕೈದಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಜೈಲಿನಲ್ಲಿರುವ ಕೈದಿಗಳಿಗೆ ಸಂಬಂಧಿಸಿದ ಕಚೇರಿಗೆ ಅಕ್ರಮವಾಗಿ ನುಗ್ಗಲು ಯತ್ನಿಸಿದಾಗ ತಡೆದ ಜೈಲರ್ ಮೇಲೆ ಹಲ್ಲೆ ಮಾಡಲಾಗಿದೆ. ಜನವರಿ ಏಳರ
ಗಂಗಾವತಿಯಲ್ಲಿ ಶೌಚಾಲಯವಿಲ್ಲದೆ ಮಹಿಳೆಯರ ಪರದಾಟ: ಸರ್ಕಾರದ ವಿರುದ್ಧ ಆರ್ ಅಶೋಕ ಕಿಡಿ
ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮದ ಅಂಬೇಡ್ಕರ್ ಏರಿಯಾ ಮಹಿಳೆಯರು ಸಮುದಾಯ ಶೌಚಾಲಯಕ್ಕೆ ಹೋರಾಡಿ ಬೇಸತ್ತು ಈಗ ಬಯಲನ್ನೇ ಶೌಚಾಲಯ ಮಾಡಿಕೊಂಡು ಸೀರೆಯನ್ನೇ ಬಾಗಿಲು ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಅಂಬೇಡ್ಕರ್, ಗಾಂಧಿ, ದಲಿತರ ಹೆಸರಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಇದಕ್ಕಿಂತ
ಶಿವಮೊಗ್ಗದ ಮನೆಗೆ ನುಗ್ಗಿ ಹಣ, ಚಿನ್ನ ದೋಚಿದ ಕಳ್ಳರು
ಶಿವಮೊಗ್ಗದ ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವವ ಮನೆಯೊಂದರಲ್ಲಿ ನಗದು ಮತ್ತು 15 ಲಕ್ಷ ರೂಪಾಯಿಗಳ ಒಡವೆ ಕಳ್ಳತನವಾಗಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಈ ಮನೆಯ ಮಾಲೀಕ ಗೋಪಾಲ್ ಎಂಬವರು ಆರೋಗ್ಯ ಸಮಸ್ಯೆಯಿಂದ ಕಳೆದ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರ ಮಗಳು
ತುಮಕೂರಿನಲ್ಲಿ ಫಾಯಿಲ್ ಫೆನ್ಸಿಂಗ್: ಬೆಂಗಳೂರು ಹುಡುಗ-ಹುಡುಗಿಯರದ್ದೇ ದರ್ಬಾರ್
ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದ ಮಹಿಳೆಯರ ಫಾಯಿಲ್ ಫೆನ್ಸಿಂಗ್‌ನಲ್ಲಿ ಬೆಂಗಳೂರು ಗ್ರಾಮಂತರದ ಸಯೆದಾ ಇಫ್ತಾಖರ್ ಬಾನು ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರದ ಶ್ರೀರಕ್ಷಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, ಬೆಂಗಳೂರು ನಗರದ ಧೃತಿಕಾ ಎನ್. ಅಂದನ್ ಮತ್ತು ಪಿಸಿ ನಿಶಾ ಕಂಚಿನ
ಖಂಡ್ರೆ ಕುಟುಂಬ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ: ಡಿಸಿಎಂ ಡಿಕೆ ಶಿವಕುಮಾರ್
“ಭೀಮಣ್ಣ ಖಂಡ್ರೆ ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ವೀರಶೈವ ಸಮಾಜದ ಅಧ್ಯಕ್ಷರಾಗಿ ಕೆಲಸ ಮಾಡಿ ಇಡೀ ರಾಜ್ಯದಲ್ಲಿ ಸಂಘಟನೆ ಮಾಡಿದ್ದಾರೆ. ಈ ಕುಟುಂಬ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ. ಈ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದೆ” ಎಂದು ಡಿಸಿಎಂ




