Featured
ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ: 8 ವಿದ್ಯಾರ್ಥಿಗಳ ಸಾವು
ತಿರುವನಂತಪುರದಲ್ಲಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಎಂಟು ವಿದ್ಯಾರ್ಥಿಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ತಮಿಳುನಾಡಿನ ಸೇಲಂನ ವಿಶ್ವ (20), ದಿಂಡಿಗಲ್‌ನ ಸೂರ್ಯ (20), ಯುವಸಂಜಿತ್ (20) ಹಾಗೂ ಮಧುರೈನ ಸಂತೋಷ್ (20) ಮತ್ತು ಪ್ರಸನ್ನ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಉಳಿದ ಮೂವರ ಗುರುತು ಪತ್ತೆಯಾಗಬೇಕಿದೆ. ಮೃತರೆಲ್ಲರೂ ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಪಿಎಸ್ಎಂ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ
ರಾಜ್ಯದಲ್ಲಿ ಬರ: ಮನಮೋಹನ್ ಸಿಂಗ್ ಅವರಂತೆ ನರೇಂದ್ರ ಮೋದಿ ನೆರವಿಗೆ ಬರಲಿ ಎಂದ ಮುಖ್ಯಮಂತ್ರಿ ಶಿವಕುಮಾರ್
ಕೇಂದ್ರ ಸರ್ಕಾರದವರು ರೈತರ ಸಹಾಯಕ್ಕೆ ಬರಬೇಕು. ಇದು ಬಿಜೆಪಿಯವರ ಜವಾಬ್ದಾರಿ. ಅವರ ಶಾಸಕರು ಕೇಂದ್ರ ಸರ್ಕಾರ, ಪ್ರಧಾನಿ ಮೇಲೆ ಒತ್ತಾಯ ಮಾಡಿ ಸಾಲಮನ್ನಾ ಮಾಡಿಸಬೇಕು. ಹಿಂದೆ ನಮ್ಮ ಸರ್ಕಾರ ಮನಮೋಹನ್ ಸಿಂಗ್ ಅವರು ಮಾಡಿದರು, ಇವರು ಕೂಡ ಮಾಡಬೇಕು. ಬ್ಯಾಂಕ್ ಗಳು
ಬರ ನಿಖರ ಮಾಹಿತಿ ಕೊಡಿ, ಬೆಳೆವಿಮೆ ಅಕ್ರಮ, ಮೀಟರ್ ಬಡ್ಡಿ, ರೌಡಿ ನಿಗ್ರಹಕ್ಕೆ ಮುಂದಾಗಿ: ಅಧಿಕಾರಿಗಳಿಗೆ ಸಿಎಂ ಸೂಚನೆ
ಬೆಳೆ ವಿಮೆ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ದೂರುಗಳು ಬಂದಿವೆ. ಏಜೆಂಟ್ ಗಳು ರೈತರ ದಾರಿ ತಪ್ಪಿಸುವ ಕೆಲಸಕ್ಕೆ ಕಡಿವಾಣ ಹಾಕಬೇಕು. ಕೆಲವು ಫೈನಾನ್ಸ್ ಕಂಪೆನಿಗಳ ಮೀಟರ್ ಬಡ್ಡಿ ದಂಧೆಯನ್ನು ನಿಲ್ಲಿಸಲು ಪೊಲೀಸರು ಮುಂದಾಗಬೇಕು. ಅಮಾಯಕರು ಈ ಜಾಲಕ್ಕೆ ಸಿಲುಕಿಕೊಳ್ಳದಂತೆ ನಿಗಾ ವಹಿಸಬೇಕು.
15 ದಿನಗಳಲ್ಲಿ ಮತ್ತಷ್ಟು ತಾಲೂಕುಗಳು ಬರಪೀಡಿತವೆಂದು ಘೋಷಣೆ: ಮುಖ್ಯಮಂತ್ರಿ
ರಾಜ್ಯದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಮತ್ತಷ್ಟು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ತೀರ್ಮಾನ ಮಾಡಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬಾಗಲಕೋಟೆಯ ಕೂಡಲಸಂಗಮದಲ್ಲಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಜಿಲ್ಲಾ ಸಚಿವರು
ಫುಟ್‌ಪಾತ್ ಮತ್ತೆ ಒತ್ತುವರಿ ಮಾಡಿದ್ರೆ ಎಫ್‌ಐಆರ್: ಸಚಿವ ಕೃಷ್ಣಬೈರೇಗೌಡ
ಬೆಂಗಳೂರು ನಗರದಲ್ಲಿ ತೆರವುಗೊಳಿಸಿರುವ ಫುಟ್‌ಪಾತ್‌ಗಳನ್ನು ಮತ್ತೆ ಅತಿಕ್ರಮಿಸಿಕೊಂಡರೆ ಅಂಥವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಕಠಿಣ ಕ್ರಮ ಜರುಗಿಸುವಂತೆ ಜಿಬಿಎ ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬೆಂಗಳೂರು ಮಹಾನಗರದ ಐದು ನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಪೊಲೀಸ್ ಹಾಗೂ ನಾಗರಿಕ ಸಂಸ್ಥೆಗಳ
ಬೇಲೂರಿನಲ್ಲಿ ದೂರು ನೀಡಲು ಹೋದ ವ್ಯಕ್ತಿ ಮೇಲೆ ಮಹಿಳಾ ಪೇದೆ ಹಲ್ಲೆ
ಹಣಕಾಸಿಗೆ ಸಂಬಂಧಿಸಿದಂತೆ ಗಲಾಟೆ ನಡೆದ ಬಗ್ಗೆ ದೂರು ನೀಡಲೆಂದು ಬೇಲೂರು ಪೊಲೀಸ್ ಠಾಣೆಗೆ ಹೋಗಿದ್ದ ವ್ಯಕ್ತಿ ಮೇಲೆ ಮಹಿಳಾ ಪೇದೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬೇಲೂರು ಕಬ್ಬಿನಮನೆ ಗ್ರಾಮದ ಪ್ರಕಾಶ್ ಎಂಬವರ ಮೇಲೆ ಮಹಿಳಾ ಕಾನ್ಸ್‌ಟೇಬಲ್ ಲಾವಣ್ಯ ಲಾಠಿಯಿಂದ ಹಲ್ಲೆ
ಮಾನಸಿಕ ಅಸ್ವಸ್ಥೆ ಮೇಲೆ ದೌರ್ಜನ್ಯ ಯತ್ನ: ಕಚ್ಚಿ ಬಾಲಕನ ಓಡಿಸಿದ ಬೀದಿ ನಾಯಿ
ತಮಿಳುನಾಡಿನ ಕೊಯಂಬತ್ತೂರಿನ ರಸ್ತೆಬದಿಯಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಬಾಲಕನನ್ನು ಬೀದಿನಾಯಿ ಕಚ್ಚಿ ಓಡಿಸಿದ ಘಟನೆ ನಡೆದಿದೆ. ರಸ್ತೆಬದಿಯಲ್ಲಿದ್ದ ಅಸಹಾಯಕ ಹಾಗೂ ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಬಾಲಕ ದೌರ್ಜನ್ಯ ಎಸಗಲು ಮುಂದಾದಾಗ ಬೀದಿ ನಾಯಿ ಆತನ
ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಚಿಂತನೆ: ಸಚಿವ ಬೈರತಿ ಸುರೇಶ್
ಜನಸಾಮಾನ್ಯರಿಗೆ ಹೊರೆಯಾಗದ ರೀತಿ ಸ್ವಲ್ಪ ಮಟ್ಟಿಗೆ ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಬಸ್ ಡಿಪೋ, ನಿಲ್ದಾಣಗಳ ಉನ್ನತೀಕರಣಕ್ಕೆ ಕೇಂದ್ರದಿಂದ 2 ಸಾವಿರ ಕೋಟಿ ಸಾಲಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾರಿಗೆ
ಬಾಗಲಕೋಟೆ ಶಾಲೆ ಛಾವಣಿ ಕುಸಿತ: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಲೋಕಾಯುಕ್ತ
ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ತರಗತಿ ನಡೆಯುತ್ತಿರುವಾಗ ಛಾವಣಿ ಕುಸಿದು ಮಕ್ಕಳು ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿ ಆಧರಿಸಿ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಲಾಖೆಯ ಆಯುಕ್ತ, ಹೆಚುವರಿ ಆಯುಕ್ತ, ಬಾಗಲಕೋಟೆ ಜಿಲ್ಲಾಧಿಕಾರಿ,
ಏರ್‌ಟೆಲ್ ಗ್ರಾಹಕರಿಗೆ ಡ್ಯುಯೊಲಿಂಗೊ ವರ್ಷದ ಚಂದಾದಾರಿಕೆ ಉಚಿತ
ಮೊಬೈಲ್ ಕಲಿಕಾ ವೇದಿಕೆಯಾದ ಡ್ಯುಯೊಲಿಂಗೊ, ಭಾರತದ ಪ್ರಮುಖ ಟೆಲಿಕಾಂ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ ಏರ್‌ಟೆಲ್‌ನ ಬರೋಬ್ಬರಿ 37.6 ಕೋಟಿ ಚಂದಾದಾರರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪೂರ್ಣ 12 ತಿಂಗಳು ಸೂಪರ್




