Saturday, October 03, 2026
Menu

ಮಾಜಿ ಸಚಿವ ವೆಂಕಟರಮಣ್ಣಪ್ಪ ತಳಸಮುದಾಯದವರ ಬಗ್ಗೆ ಕಾಳಜಿ ಹೊಂದಿದ್ದ ನಾಯಕ: ಸಿಎಂ ಸಿದ್ದರಾಮಯ್ಯ

ಅಹಿಂದ ವರ್ಗದ ಧ್ವನಿಯಾಗಿದ್ದ ಹೆಚ್. ವೆಂಕಟರಮಣ್ಣಪ್ಪ ಅವರು ಸಮಾಜದ ತಳಸಮುದಾಯದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದರು. ಪಾವಗಡ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು ಮಾಜಿ ಶಾಸಕರಾದ ದಿವಂಗತ  ಹೆಚ್. ವೆಂಕಟರಮಣಪ್ಪ ಅವರ ಅಂತಿಮ ದರ್ಶನ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಹೆಚ್. ವೆಂಕಟರಮಣ್ಣಪ್ಪ ಅವರು ಇತ್ತೀಚಿಗಷ್ಟೇ ನನ್ನನ್ನು ಭೇಟಿಯಾಗಿದ್ದರು. ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಹಿಂದ ವರ್ಗದ

ಸಚಿವ ಸಂಪುಟದಲ್ಲಿ ವೀರಶೈವ ಲಿಂಗಾಯತರಿಗೆ ಹೆಚ್ಚಿನ ಸ್ಥಾನಕ್ಕಾಗಿ ಆಗ್ರಹ

ರಾಜ್ಯ ಸರ್ಕಾರದ ಸಂಪುಟ ಪುನರಚನೆ ವೇಳೆಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ – ರಾಷ್ಟ್ರೀಯ ಯುವ ಘಟಕ ಒತ್ತಾಯಿಸಿದೆ. ಬಸವಣ್ಣನವರ ಶಾಶ್ವತ ಲೌಕಿಕ ಮತ್ತು ಸಮಾನತಾವಾದಿ ತತ್ವಶಾಸ್ತ್ರದಿಂದ ಪ್ರೇರಿತವಾದ ನಮ್ಮ ಸಮುದಾಯವು

ಸಿಎಂ ಆಗಿ ಡಿಕೆ ಶಿವಕುಮಾರ್‌ ಪದಗ್ರಹಣ ಜೂನ್‌ ಮೂರಕ್ಕೆ

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪದಗ್ರಹಣ ಸಮಾರಂಭ ಜೂನ್ ಮೂರರಂದು (ಬುಧವಾರ) ನಡೆಯಲಿದೆ ಎಂದು ಹೇಳಲಾಗುತ್ತಿದೆ. ತುಮಕೂರು ನೊಣವಿನಕೆರೆಯ ಶ್ರೀ ಕಾಡಸಿದ್ಧೇಶ್ವರ ಅಜ್ಜಯ್ಯ ಪೀಠದ ಆದೇಶದಂತೆ, ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು

ಬ್ರಿಮ್ಸ್‌ನಲ್ಲಿ ಮಹಿಳಾ ಶವಗಳ ಬೆತ್ತಲೆ ಪೋಟೊ ಕ್ಲಿಕ್ಕಿಸುತ್ತಿದ್ದ ಅಟೆಂಡರ್‌ ಅರೆಸ್ಟ್‌

ಬೀದರ್‌ನ ಬ್ರಿಮ್ಸ್‌ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಪೋಸ್ಟ್‌ಮಾರ್ಟ್‌ಮ್‌ ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ಆರೋಪದ ಮೇಲೆ ಅಟೆಂಡರ್‌ ಒಬ್ಬನನ್ನು ಬಂಧಿಸಲಾಗಿದೆ. ಆರೋಪಿ ಮುನೀರ್‌ ಅಹ್ಮದ್‌ ಬಂಧಿತ, ಹಲವು ವರ್ಷಗಳಿಂದ ಆಸ್ಪತ್ರೆಯ ಶವಾಗಾರ ವಿಭಾಗದಲ್ಲಿ ಅಟೆಂಡರ್‌ ಆಗಿ ಕೆಲಸ

ಚಡಚಣದಲ್ಲಿ ಗುಂಡಿನ ಮೊರೆತ: ಆಸ್ತಿ ವಿವಾದದಲ್ಲಿ ಆರು ಜನರ ಗುಂಡಿಕ್ಕಿ ಹತ್ಯೆ

ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಆಸ್ತಿಗೆ ಸಂಬಂಧಿಸಿದ ಕುಟುಂಬ ಕಲಹ ವಿಕೋಪಕ್ಕೆ ಹೋಗಿ ಆರು ಜನರನ್ನು ಕೊಚ್ಚಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಚಂದು ನಿರಾಳೆ, ದುಂಡಪ್ಪ ನಿರಾಳೆ,

ಇಂದು ಸಂಜೆ ಸಿಎಲ್‌ಪಿ ಸಭೆ: ನೂತನ ಸಿಎಂ ಆಯ್ಕೆ

ಇಂದು (ಶನಿವಾರ) ಸಂಜೆ ವಿಧಾನಸೌಧದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಡೆಯಲಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ.  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೆಸರು ಮುಖ್ಯಮಂತ್ರಿ ಹುದ್ದೆಗೆ ಬಹುತೇಕ ಅಂತಿಮವಾಗಿದ್ದು, ಇಂದಿನ ಸಭೆಯಲ್ಲಿ ಹೈಕಮಾಂಡ್ ಅಧಿಕೃತ

9,590 ಕೆ.ಜಿ. ಹಾಲಿನ ಪುಡಿ ದುರುಪಯೋಗ: ಶೋಕಾಸ್ ನೋಟಿಸ್‌ ತಡೆಗೆ  ಹೈಕೋರ್ಟ್ ನಕಾರ

9,590 ಕೆ.ಜಿ. ಹಾಲಿನ ಪುಡಿ ದುರುಪಯೋಗಪಡಿಸಿಕೊಂಡ ಆರೋಪದ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗೆ ಕಾರಣ ಕೇಳಿ ಸರ್ಕಾರ ಜಾರಿ ಮಾಡಿದ್ದ ಶೋಕಾಸ್ ನೋಟಿಸ್​ಗೆ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಾರಿ ಮಾಡಿದ್ದ

ರಾಷ್ಟ್ರರಾಜಕಾರಣಕ್ಕಿಂದು ಸಿದ್ದರಾಮಯ್ಯ ಪ್ರಸ್ತುತ

ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣದಿಂದ ದೂರ ಸರಿಯುವ ನಿಲುವು ಈಗ , ಪಕ್ಷದ ರಾಜಕೀಯ ಪಡಸಾಲೆಯಲ್ಲಿ ಮಾತ್ರವಲ್ಲ . ರಾಜ್ಯದಲ್ಲಿ ಪಕ್ಷದ ಹೊರಗೂ ಚರ್ಚೆಗೆ ಗ್ರಾಸವಾದ ಸಂಗತಿ. ಅಂಬೇಡ್ಕರ್, ಸಮಾಜವಾದದ ಮೂಲಕ ತಾನೊಬ್ಬ ಯಶಸ್ವಿ ನಾಯಕನಾಗಿ ಬೆಳೆಯಲು ಜನತಾ ಪರಿವಾರದಲ್ಲಿ ಸಾಧ್ಯವಿಲ್ಲ ಎಂಬ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ: ಕೇಂದ್ರ, ಎನ್‌ಟಿಎಗೆ ಸುಪ್ರೀಂ ತರಾಟೆ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ. ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣವಾದ ಲೋಪಗಳ ಬಗ್ಗೆ ಪ್ರತಿಕ್ರಿಯಿಸಿ. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಅವರ ಕುಟುಂಬಗಳಿಗೂ ತುಂಬಾ ಆಘಾತಕಾರಿ

ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮೇ 31ರಂದು ರೈಲು ಸಂಚಾರ ವ್ಯತ್ಯಯ

ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮೇ 31 ಭಾನುವಾರ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಸಂಚಾರ ವ್ಯತ್ಯಯವಾಗಲಿದೆ. ಅತ್ತಿಗುಪ್ಪೆ ಮತ್ತು ವಿಜಯನಗರ ನಡುವೆ ನಿರ್ವಹಣಾ ಕಾಮಗಾರಿ ಹಿನ್ನೆಲೆ ದೀಪಾಂಜಲಿನಗರ ಮತ್ತು ಕೆಎಸ್‌ಆರ್ ಮೆಜೆಸ್ಟಿಕ್ ನಿಲ್ದಾಣಗಳ ನಡುವೆ ರೈಲು ಸಂಚಾರ ಸ್ಥಗಿತಗೊಳ್ಳಲಿದೆ