Menu

ಕೋಲಾರದಲ್ಲಿ ಸ್ನೇಹಿತರ ಜೊತೆ ಈಜಲೆಂದು ಹೋದ ಬಾಲಕ ನೀರುಪಾಲು

ಕೋಲಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸ್​ ಆದ ಖುಷಿಯಲ್ಲಿದ್ದ ಬಾಲಕ ಈಜಲು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟಿದಾನೆ. ಕಿರಣ್(15) ಮೃತ ಬಾಲಕ. ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದ ಬಳಿಕ ಸ್ನೇಹಿತರ ಜೊತೆ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ರಘುಪತಿ ಎಂಬವರ ಪುತ್ರನಾದ ಕಿರಣ್ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 239 ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದ. ಕಿರಣ್ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಘಟನೆ

ಮಗನ ಸಾಧನೆಯ ಸಂಭ್ರಮಕ್ಕೆ ಉಜ್ಜಯಿನಿಯಿಂದ ಬಂದ ತಂದೆ ಆಳಂದದಲ್ಲಿ ಅಪಘಾತಕ್ಕೆ ಬಲಿ

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ (ಇ ಆಂಡ್ ಸಿ) ವಿಭಾಗದಲ್ಲಿ ಮಗ ಚಿನ್ನದ ಪದಕ ಸ್ವೀಕರಿಸುವುದನ್ನು ಕಣ್ತುಂಬಿಕೊಳ್ಳಲೆಂದು ಮಧ್ಯ ಪ್ರದೇಶದ ಉಜ್ಜಯಿನಿಯಿಂದ ಬಂದ ತಂದೆ ಆಳಂದದಲ್ಲಿ ಆಟೊ ಉರುಳಿ ಮೃತಪಟ್ಟಿರುವ ದಾರುಣ ಘಟನೆಯೊಂದು ನಡೆದಿದೆ. ಮಗ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎರಡು

ಫೋಟೊ, ವೀಡಿಯೊ ಇಟ್ಕೊಂಡು 1.5 ಕೋಟಿ ರೂ.ಗೆ ಡಿಮ್ಯಾಂಡ್‌: ಯುವತಿ ವಿರುದ್ಧ ಎಫ್‌ಐಆರ್‌

ಖಾಸಗಿ ಫೋಟೊ, ವೀಡಿಯೊ ಇಟ್ಕೊಂಡು ಮೇಕಪ್ ಕ್ಲಿನಿಕ್ ಮಾಲೀಕರೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿದ ಯುವತಿ 1.5 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಮೇಕಪ್ ಕ್ಲಿನಿಕ್ ಮಾಲೀಕ ಕಾರ್ತಿಕ್ ಪುತಾ ಎಂಬವರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026: ಭಾರತದ ಮ್ಯಾಪ್‌ ಪಝಲ್‌ ಜೋಡಿಸಿದ ಕೊಪ್ಪಳದ ತೇಜಸ್‌

ಕೊಪ್ಪಳ ಜಿಲ್ಲೆಯ ಬಾಲಕ ತೇಜಸ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಸಾಧಾರಣ ಏಕಾಗ್ರತೆ ಮತ್ತು ವೇಗದ ಮೂಲಕ ಭಾರತದ ನಕಾಶೆಯ ಪಝಲ್‌ಗಳನ್ನು ಜೋಡಿಸುವ ಮೂಲಕ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026’ರಲ್ಲಿ ಸ್ಥಾನ ಪಡೆದಿದ್ದಾನೆ. ತೇಜಸ್‌ ಕೊಪ್ಪಳಕಿದದಾಳದ ಶಾರದಾ ಇಂಟರ್‌ ನ್ಯಾಷನಲ್ ಶಾಲೆಯ 4ನೇ

ಬಸವಕಲ್ಯಾಣ ಜಾತ್ರೆಯಲ್ಲಿ ರಥದ ಚಕ್ರ ಹರಿದು ವ್ಯಕ್ತಿಯ ಕಾಲು ಕಟ್‌

ಬೀದರ್ ಬಸವಕಲ್ಯಾಣದಲ್ಲಿ ನಡೆದ ಬಸವೇಶ್ವರ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ಕಟ್ ಆಗಿದ್ದು, ಇಬ್ಬರ ಕಾಲಿಗೆ ಗಂಭೀರ ಗಾಯಗಳಾಗಿವೆ. ನಗರದ ತೇರು ಎಳೆಯುವ ಮೈದಾನದಲ್ಲಿ ಈ ದುರಂತ ನಡೆದಿದೆ. ಬಸವೇಶ್ವರ ಜಾತ್ರಾ ರಥದಡಿ ಸಿಲುಕಿ ಧನರಾಜ್ ಎಂಬವರ

ಎಸ್ಸೆಸ್ಸೆಲ್ಸಿ ಫಲಿತಾಂಶ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ದಾವಣಗೆರೆಯ ಭರತ್‌ ರಾಜ್ಯಕ್ಕೆ ಟಾಪರ್‌

2025-26ನೇ ಸಾಲಿನ ಕರ್ನಾಟಕ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ ಸ್ಥಾನ ಗಳಿಸಿದೆ. ದಾವಣಗೆರೆಯ ಭರತ್‌ ರಾಜ್ಯಕ್ಕೆ ಟಾಪರ್‌ ಆಗಿ ಹೊರ ಹೊಮ್ಮಿದ್ದಾರೆ. ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಚನ್ನಗಿರಿ ತಾಲೂಕಿನ ಕಣವೆಬಿಳಚಿಯ ಕಬ್ಬಳ ಗ್ರಾಮದ

ನವಜಾತ ಶಿಶುವನ್ನು ಟಾಯ್ಲೆಟ್‌ನಲ್ಲಿ ಹತ್ಯೆಗೈದ ಅವಿವಾಹಿತ ಮಹಿಳೆ

ದೇವನಹಳ್ಳಿ ತಾಲೂಕಿನ ಬೀರಸಂದ್ರದ ಬಳಿ ಇರುವ ಫಾಕ್ಸ್‌ಕಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವಿವಾಹಿತ ಮಹಿಳೆಯೊಬ್ಬಳು ತನ್ನ ನವಜಾತ ಶಿಶುವನ್ನು ಶೌಚಾಲಯದಲ್ಲೇ ಹತ್ಯೆ ಮಾಡಿರುವ ಭೀಕರ ಘಟನೆ ನಡೆದಿದೆ. ಫಾಕ್ಸ್‌ಕಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಎಂಬಾಕೆಗೆ ಕೆಲಸದ ಅವಧಿಯಲ್ಲೇ ಇವರಿಗೆ ಹೆರಿಗೆ

ಬೆಂಗಳೂರಿನಲ್ಲಿ 410 ಕೋಟಿ ರೂ. ಜಿಎಸ್‌ಟಿ ಹಗರಣ: ಕಿಂಗ್‌ಪಿನ್‌ ಅರೆಸ್ಟ್‌

ಬೆಂಗಳೂರಿನಲ್ಲಿ 410 ಕೋಟಿ ರೂಪಾಯಿ ಜಿಎಸ್‌ಟಿ ಹಗರಣ ನಡೆದಿದ್ದು, ಅಮಾಯಕರ ಆಧಾರ್, ಪಾನ್ ಕಾರ್ಡ್ ಬಳಸಿ 102.೫ ಕೋಟಿ ತೆರಿಗೆ ಲೂಟಿ ಮಾಡಿರುವುದನ್ನು  ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಕಿಂಗ್‌ಪಿನ್ ಆಂಧ್ರದ ತೌಕೀರ್‌ ಎಂಬವನನ್ನು

ಬೆಂಗಳೂರಿನ ಮನೆಯಲ್ಲಿ ದಂಪತಿಯ ಮೃತದೇಹ ಪತ್ತೆ

ಬೆಂಗಳೂರಿನ ಆರ್.ಟಿ.ನಗರ ಗಂಗೇನಹಳ್ಳಿಯ ಮನೆಯೊಂದರಲ್ಲಿ ದಂಪತಿಯ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳು ವ್ಯಕ್ತವಾಗಿವೆ. 35 ವರ್ಷದ ಡೇವಿಡ್ ಮತ್ತು 30 ವರ್ಷದ ಸುಮಿತ್ರಾ ಮೃತರು. ಇವರು 10 ವರ್ಷದ ಹಿಂದೆ ಮದುವೆಯಾಗಿದ್ದರು. ಆರ್.ಟಿ.ನಗರ ಪೊಲೀಸರು ಮತ್ತು ಸೊಕೊ ತಂಡ ಸ್ಥಳಕ್ಕೆ ಆಗಮಿಸಿದ್ದು,

ಚಿನ್ನ ಖರೀದಿಗೆ ಹೋದವನ ಎರಡು ಕೋಟಿ ರೂ. ದೋಚಿದ ಅಂಗಡಿ ಮಾಲೀಕ ಮತ್ತು ಮಹಿಳೆ

ಚಿನ್ನ ಖರೀದಿಗೆ ಹೋಗಿದ್ದವರಿಂದ ಎಂಪಿ ಚಿನ್ನದ ಮಳಿಗೆಯ ಮಾಲೀಕ ಇಂದರ್ ಚಂದ್ ಮತ್ತು ಮಹಿಳೆಯೊಬ್ಬರು ಎರಡು ಕೋಟಿ ರೂ. ಪಡೆದು ವಂಚಿಸಿರುವ ಘಟನೆ ಬೆಂಗಳೂರಿನ ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿ ನಡೆದಿದೆ. ಸರ್ಜಾಪುರದ ಪುನೀತ್ ಎಂಬಾತ ಚಿನ್ನ ಖರೀದಿ ಮಾಡಲು ಮುಂದಾಗಿದ್ದರು. ಪುನೀತ್ ಸಂಬಂದಿ