Menu

ನೆಲಮಂಗಲದಲ್ಲಿ ಆಯಿಲ್‌ ಗೋದಾಮು ಬೆಂಕಿಗಾಹುತಿ

ನೆಲಮಂಗಲ ಬಳಿಯ ಅಡಕಮಾರನಹಳ್ಳಿ ಬಳಿ ಶಾರ್ಟ್‌ ಸರ್ಕ್ಯೂಟ್‌ನಿಂದ ಶಲ್‌ ಕಂಪನಿಗೆ ಸೇರಿದ ಆಯಿಲ್‌ ಗೋದಾಮು ಬೆಂಕಿಗಾಹುತಿಯಾಗಿದೆ. ಬೆಳಗಿನ ಜಾವ ಮೂರು ಗಂಟೆಗೆ ಈ ದುರಂತ ನಡೆದಿದೆ. ನೆಲಮಂಗಲ, ಪೀಣ್ಯ ಯಶವಂತಪುರ ಭಾಗದ 8 ಕ್ಕೂ ಹೆಚ್ಚು ಅಗ್ನಿಶಾಮಕ ತಂಡಗಳು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದು, ಕ್ಷಣಕ್ಷಣಕ್ಕೂ ಬೆಂಕಿ ಇನ್ನಷ್ಟು ವ್ಯಾಪಿಸುತ್ತಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಕ್ಕಪಕ್ಕದ ಗೋದಾಮು ಹಾಗೂ ಮನೆಗೆ ಬೆಂಕಿ ತಗುಲುವ ಆತಂಕ

ವೈಟ್ ಟ್ಯಾಪಿಂಗ್ ರಸ್ತೆ ಗುಣಮಟ್ಟ ಪರಿಶೀಲಿಸಿದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ವೈಟ್ ಟ್ಯಾಪಿಂಗ್ ನಡೆಯುತ್ತಿರುವ ರಸ್ತೆಗಳ ಗುಣಮಟ್ಟ ಚೆನ್ನಾಗಿರಬೇಕು. ಈ ರಸ್ತೆಗಳು 30 ವರ್ಷಗಳ ಕಾಲ ಬಾಳಿಕೆ ಬರಬೇಕು. ಹೀಗಾಗಿ ನಾನು ಆಗಾಗ್ಗೆ ಕಾಮಗಾರಿಗಳ ಪರಿಶೀಲನೆ ಮಾಡುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ನಗರದ ವಿವಿಧ ಕಡೆಗಳಲ್ಲಿ ಸೋಮವಾರ ರಸ್ತೆ

ಜಮೀನಿಗಾಗಿ ತಾಯಿ- ಮಗನ ಬರ್ಬರ ಹತ್ಯೆ!

ಬಾಗಲಕೋಟೆ: ಜಮೀನು ವಿಚಾರವಾಗಿ ತಾಯಿ ಹಾಗೂ ಮಗನನ್ನು ಹೊಲದಲ್ಲಿ ಕಡಲಿಯಿಂದ ಕಡಿದು ದೊಡ್ಡಪ್ಪನ ಮಗ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬಾಗಲಕೋಟೆಯ ಇಳಕಲ್ ನಲ್ಲಿ ನಡೆದಿದೆ. ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ಹಿನ್ನಲೆಯಲ್ಲಿ 45 ವರ್ಷದ ತಮ್ಮನ ಹೆಂಡತಿ ಸಂಗಮ್ಮ ನಿಂಗಪ್ಪ

ಸದ್ಯದಲ್ಲೇ ಬೆಂಗಳೂರಿಗೆ ಹೊಸ ರೂಪ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಕೆಲವೇ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬರಲಿದೆ. ನಂತರ ಸ್ವಚ್ಛತಾ ಅಭಿಯಾನದ ಮೂಲಕ ನಗರದಲ್ಲಿ ಕಸ ವಿಲೇವಾರಿ ಮಾಡಿ ಸ್ವಚ್ಛ ಬೆಂಗಳೂರು ನಿರ್ಮಿಸಲಾಗುವುದು. ಆ ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ತಿಳಿಸಿದರು. ಪುಲಕೇಶಿನಗರ

ಕೌಶಲ್ಯ ತರಬೇತಿಯಲ್ಲಿ ಭಾರತ-ಆಫ್ರಿಕಾ ಪಾಲುದಾರಿಕೆ: ನಮೀಬಿಯಾದಲ್ಲಿ ಜಿಟಿಸಿಸಿ ಸ್ಥಾಪನೆ

ಬೆಂಗಳೂರು: ಕರ್ನಾಟಕದ ಅತ್ಯಂತ ಹೆಮ್ಮೆಯ ಸಂಸ್ಥೆಗಳಲ್ಲಿ ಒಂದಾಗಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಈಗ ವಿದೇಶದಲ್ಲೂ ತನ್ನ ವ್ಯಾಪ್ತಿ ಮತ್ತು ಕೀರ್ತಿಯನ್ನು ವಿಸ್ತರಿಸುತ್ತಿದೆ. ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು (ಜಿಟಿಟಿಸಿ) ಆಫ್ರಿಕಾದ ನಮೀಬಿಯಾದಲ್ಲಿ ಸ್ಥಾಪಿಸುವ ಕುರಿತು ಉನ್ನತ

ಬೋರ್‌ವೆಲ್‌ಗಳಿಗೆ ಅಂತರ್ಜಲ ಪ್ರಾಧಿಕಾರದ ಅನುಮತಿ ಕಡ್ಡಾಯ

ರಾಜ್ಯದಲ್ಲಿ ಅಂತರ್ಜಲ ಮೂಲಗಳ ಅತಿ ಬಳಕೆಯಿಂದಾಗಿ ಅಂತರ್ಜಲ ಮಟ್ಟ ಗಮನಾರ್ಹವಾಗಿ ಕುಸಿದಿದೆ. ಹೀಗಾಗಿ ಅಂತರ್ಜಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರ ರಾಜ್ಯದ ಎಲ್ಲಾ ಇಲಾಖೆಗಳಿಗೆ ಮತ್ತೊಮ್ಮೆ ಸೂಚನಾ ಪತ್ರ ಕಳುಹಿಸಿದ್ದು, ನಿರ್ಮಾಣ ಚಟುವಟಿಕೆಗಳಿಗೆ ಅಂತರ್ಜಲವನ್ನು ಬಳಸಲು ‘ಆಕ್ಷೇಪಣಾ ಪ್ರಮಾಣಪತ್ರ’ ಅಥವಾ

ಪಹಲ್ಗಾಮ್ ಸಂತ್ರಸ್ತರಿಗೆ ನ್ಯಾಯ ಕೊಡಿಸಿದ್ದೇವೆ: ಭಾರತೀಯ ಸೇನಾಧಿಕಾರಿಗಳು

ಪಾಕಿಸ್ತಾನದ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿ ಪೆಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಟ್ಟಿದ್ದೇವೆ ಎಂದು ಭಾರತೀಯ ಸೇನಾಧಿಕಾರಿಗಳು ಹೇಳಿದ್ದಾರೆ. ನವದೆಹಲಿಯಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮೇ 9ರಂದು ಆರಂಭಿಸಿದ ಪಾಕಿಸ್ತಾನದ ಮೇಲಿನ ಯುದ್ಧದ ವಿವರಗಳನ್ನು ನೀಡಿದ ಭಾರತೀಯ ಸೇನಾಧಿಕಾರಿಗಳು, ಪಾಕಿಸ್ತಾನದ ಪಿಎಲ್-15

ದೇವನಹಳ್ಳಿಯಲ್ಲಿ ತಂದೆಯ ಗನ್‌ನಿಂದ ಫೈರಿಂಗ್‌ ಮಾಡಿಕೊಂಡು ಮಗ ಆತ್ಮಹತ್ಯೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಯುವಕನೊಬ್ಬ ತಂದೆಯ ಸಿಂಗಲ್ ಬ್ಯಾರಲ್​ ಗನ್​ನಿಂದ ಫೈರಿಂಗ್​ ಮಾಡಿಕೊಂಡು ಆತ್ಮ ಹತ್ಯೆಗೆ ಶರಣಾಗಿದ್ದಾನೆ. ಬೈಯೇಶ್(28) ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ ಇತ್ತೀಚೆಗಷ್ಟೆ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿದ್ದ. ಸ್ಥಳಕ್ಕೆ ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ

ದೇಶದಲ್ಲಿ ಆಹಾರ ಧಾನ್ಯ ಕೊರತೆ ಬಗ್ಗೆ ಆತಂಕ ಬೇಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಇಲ್ಲ. ಈ ಬಗ್ಗೆ ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳ ದಾಸ್ತಾನು

ಇಸ್ರೊದಿಂದ ಪಾಕ್‌ ಏರ್‌ಡಿಫೆನ್ಸ್ ಸಿಸ್ಟಂ ಕಾರ್ಯಾಚರಣೆ ಬಗ್ಗೆ ಸೇನೆಗೆ ಮಾಹಿತಿ

ಸೇನೆಯು 9 ಉಗ್ರನೆಲೆಗಳನ್ನು ನಾಶ ಮಾಡಿದ್ದರ ಯಶಸ್ಸಿನಲ್ಲಿ ದೇಶದ ಹೆಮ್ಮೆಯ ಇಸ್ರೊ ಪಾಲು ಕೂಡ ಇದೆ. ಭಾರತೀಯ ವಾಯುಸೇನೆಯ ಪೈಲಟ್‌ಗಳಿಗೆ ಇಸ್ರೊ ಸಹಾಯ ಮಾಡಿದೆ. ಪಾಕಿಸ್ತಾನದ ಏರ್‌ಡಿಫೆನ್ಸ್ ಸಿಸ್ಟಂಗಳು ಆ್ಯಕ್ಟಿವ್ ಆಗಿದ್ದವೋ ಇಲ್ಲವೋ ಎಂಬ ಮಾಹಿತಿಗಳನ್ನು ಸೇನೆಗೆ ಇಸ್ರೊ ನೀಡುತ್ತಿತ್ತು ಎಂದು