Menu

ಲಿವರ್‌ ದಾನ ಮಾಡಿ ಅಮ್ಮನ ಉಳಿಸಿಕೊಂಡ ಮಗ ಚೇತರಿಸಿಕೊಳ್ಳದೆ ಸಾವು

ತಾಯಿಯ ಜೀವ ಉಳಿಸುವುದಕ್ಕೆಂದು ಮಗ ಆಕೆಗೆ ಲಿವರ್‌ ದಾನ ಮಾಡಿದ ಬಳಿಕ ಮೃತಟ್ಟಿರುವ ಹೃದಯವಿದ್ರಾವಕ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದ್ದು, ಭಾರೀ ವೈರಲ್‌ ಆಗಿದೆ. ಅಮ್ಮನಿಗಾಗಿ ಲಿವರ್‌ ದಾನಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಯುವಕ ಚೇತರಿಸಿಕೊಳ್ಳದೆ ಪ್ರಾಣ ಹೋಗಿದೆ. ಮಗನ ಸಾವಿನ ಆಘಾತವನ್ನು ಸಹಿಸಲಾಗದೆ ತಾಯಿ ಒದ್ದಾಡುತ್ತಿದ್ದಾರೆ. ಇದರಿಂದ ಮಗನ ಜೀವ ಹೋಗಬಹುದು ಎಂಬ ಸಣ್ಣ ಶಂಕೆ ಬಂದಿದ್ದರೂ ತಾನು ಈ ಆಪರೇಷನ್‌ಗೆ ಒಪ್ಪಿಕೊಳ್ಳುತ್ತಿರಲಿಲ್ಲವೆಂದು ತಾಯಿ ಸಂಕಟಪಡುತ್ತಿದ್ದಾರೆ. ಪಾಕಿಸ್ತಾನದ ಸರ್ಗೋಧಾ ನಿವಾಸಿಯಾದ ಉಮರ್

ಇರಾನ್‌-ಇಸ್ರೇಲ್‌ ಸಂಘರ್ಷ: ಎಲ್‌ಪಿಜಿ ವ್ಯತ್ಯಯ, ಬನಶಂಕರಿ ದೇಗುಲದಲ್ಲಿ ಪ್ರಸಾದ ವಿತರಣೆ ಸ್ಥಗಿತ?

ಇರಾನ್‌-ಇಸ್ರೇಲ್‌ ಯುದ್ಧ ತೀವ್ರಗತಿಯಲ್ಲಿದ್ದು, ಜಗತ್ತಿನ ಹಲವು ದೇಶಗಳಲ್ಲಿ ನಾನಾ ರೀತಿಯ ಸಂಕಷ್ಟಗಳಿಗೆ ಕಾರಣವಾಗಿದೆ. ಪ್ರಮುಖವಾಗಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಪೂರೈಕೆ ವ್ಯತ್ಯಯಗೊಂಡು ಹೋಟೆಲ್‌ ಉದ್ಯಮವನ್ನು ಕಂಗೆಡಿಸಿದೆ. ಬೆಂಗಳೂರು ಸೇರಿದಂತೆ ನಗರಗಳಲ್ಲಿ ಹೋಟೆಲ್‌, ಪಿಜಿ, ಹಾಸ್ಟೆಲ್‌ ಮೆನುಗಳೇ ಬದಲಾಗಿವೆ. ಈ ನಡುವೆ ದೇವಸ್ಥಾನಗಳಲ್ಲಿ

ಅಕ್ರಮ ಸಂಬಂಧ: ಮಂಡ್ಯದಲ್ಲಿ ಪ್ರಿಯಕರನೊಂದಿಗೆ ಸೇರಿ ಗಂಡನ ಮುಗಿಸಿದ ಹೆಂಡತಿ

ಮಂಡ್ಯದ ಮರಳಗಾಲ ಬಳಿ ಅರ್ಚಕರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಇದು ಅಕ್ರಮ ಸಂಬಂಧದ ಹಿನ್ನೆಲೆ ನಡೆದ ಕೊಲೆ ಎಂಬ ವಿಚಾರವನ್ನು ಬಯಲಿಗೆಳೆದಿದ್ದಾರೆ. ತನ್ನ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗಬಾರದೆಂದು ಪತ್ನಿಯು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿಸಿದ್ದಾಳೆ. ಶಾಲಿನಿ

ಮದುವೆಗಳಿಗೆ ಹೋಗಿ ಚಿನ್ನಾಭರಣ ಕದಿಯುತ್ತಿದ್ದ ಮಹಿಳೆ ಅರೆಸ್ಟ್‌

ಮದುವೆ ಸಮಾರಂಭಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಶಿವಮೊಗ್ಗ ತುಂಗಾನಗರದ ಪೊಲೀಸಸರು ಬಂಧಿಸಿದ್ದಾರೆ. ರುಕ್ಸಾರ್ ಫಿರ್ದೋಸ್ ಬಂಧಿತ ಆರೋಪಿ. ಇಲಿಯಾಜ್ ನಗರದ ಶಾದಿ ಮಹಲ್‌ನಲ್ಲಿ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, 120 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈ ಹಿಂದೆ

ಮಧ್ಯಪ್ರಾಚ್ಯ ಪ್ರಕ್ಷುಬ್ಧ: ಭಾರತ ನಿಲುವು ಸ್ಪಷ್ಟಪಡಿಸಬೇಕಿದೆ

ಮಧ್ಯ ಪ್ರಾಚ್ಯದಲ್ಲಿ ರಣಭೀಕರ ಯುದ್ದ ಮುಂದುವರಿದಿರುವಾಗ ಇದು ಭಾರತೀಯ ಸಂಸತ್ತಿನಲ್ಲಿ ಚರ್ಚೆಯಾಗಬಾರದೆಂದರೆ ಹೇಗೆ ? ಕೇಂದ್ರ ಸರ್ಕಾರವೇ ಈ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾವನೆಯನ್ನು ಮಂದಿಟ್ಟು ಚರ್ಚೆಗೆ ಮುಂದಾಗಬೇಕಿತ್ತು . ಈ ಹಿಂದೆ ಇಂತಹ ಸನ್ನಿವೇಶದಲ್ಲಿ ಅಮೆರಿಕ ಮತ್ತು ಇರಾಕ್

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿರುವ ಡಿಕೆ ಶಿವಕುಮಾರ್‌ಗೆ ಸಿಎಂ ಅಭಿನಂದನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರಿಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ  ಅಭಿನಂದನೆ ಸಲ್ಲಿಸಿದ್ದಾರೆ.  ಶಿವಕುಮಾರ್ ಅವರ ಸಂಘಟನಾ ಚಾತುರ್ಯ, ಸೈದ್ಧಾಂತಿಕ ಬದ್ದತೆ ಮತ್ತು ಕಠಿಣ ಶ್ರಮ ನಮ್ಮ ಪಕ್ಷದ ಎಲ್ಲ ಯುವನಾಯಕರಿಗೆ ಮಾದರಿಯಾದುದು ಎಂದು ಶ್ಲಾಘಿಸಿದ್ದಾರೆ. ಸಾಮಾಜಿಕ

ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳ ಖಾತ್ರಿಗೆ ಏಕರೂಪ ನಾಗರಿಕ ಸಂಹಿತೆಯೇ ದಾರಿ: ಸುಪ್ರೀಂ

ದೇಶದ ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ಏಕೈಕ ಮಾರ್ಗವೆಂದರೆ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಮುಸ್ಲಿಂ ವೈಯಕ್ತಿಕ ಕಾನೂನು(ಶರಿಯತ್)ಅಡಿ ಮಹಿಳೆಯರ ಹಕ್ಕುಗಳ ಉಲ್ಲಂಘನೆ ಆರೋಪದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಭಾರತದ ಮುಖ್ಯ ನ್ಯಾಯಮೂರ್ತಿ

ವಾಣಿಜ್ಯ ಬಳಕೆ ಸಿಲಿಂಡರ್‌ ಬಿಕ್ಕಟ್ಟು: ಬೆಂಗಳೂರು ಹೋಟೆಲ್‌ಗಳಿಗೆ ನೆರವಾಗಲು ಸಿಎಂ ಕೇಂದ್ರಕ್ಕೆ ಮನವಿ

ಇರಾನ್-ಇಸ್ರೇಲ್ ಯುದ್ಧ ಪರಿಣಾಮ ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಾಗಿದೆ. ಇದರಿಂದ ಬೆಂಗಳೂರಿನಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದು

ಮೂರು ಕೋಟಿ ರೂ. ಬೆಲೆಯ ಚಿನ್ನಾಭರಣ ದೋಚಿದಾತ ಅರೆಸ್ಟ್‌

ಮನೆಯೊಂದರಿಂದ ಮೂರು ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬೆಂಗಳೂರಿನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ವೇಲಾರಾಮ್ ಬಂಧಿತ ಆರೋಪಿ, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ. ಆರು ತಿಂಗಳು ಯೋಜನೆ ರೂಪಿಸಿ ಕಳವು ಮಾಡಿದ್ದ.

ಹನಿಟ್ರಾಪ್‌ಗೆ ಕೆಡವಿ ಹಣ, ಚಿನ್ನ, ಕಾರು ದೋಚಿ ಪರಾರಿ: ಮಹಿಳೆ ಅರೆಸ್ಟ್‌

ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತ ವ್ಯಕ್ತಿಗಳನ್ನುಪರಿಚಯಿಸಿಕೊಂಡು ಹನಿಟ್ರಾಪ್‌ ಮಾಡಿ ಅವರಿಗೆ ಸೇರಿದ್ದ ಅಮೂಲ್ಯ ವಸ್ತುಗಳನ್ನೆಲ್ಲ ದೋಚಿ ಪರಾರಿಯಾಗುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ಮಹಿಳೆ ದೀಪಾ ಅವಟಗಿಯನ್ನು ಬೆಳಗಾವಿ ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತ ಪುರುಷರನ್ನು ಬಲೆಗೆ ಬೀಳಿಸಿ, ಲಾಡ್ಜ್​ಗೆ