Breaking
ಬೆಂಗಳೂರಿನಲ್ಲಿ 11.86 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ
ಬೆಂಗಳೂರು ನಗರದ ನಾನಾ ಕಡೆ ದಾಳಿ ನಡೆಸಿದ ಪೊಲೀಸರು 11.86 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಮಹಿಳೆಯರು ಹಾಗೂ ಹೊರರಾಜ್ಯದ ಐವರು ಸೇರಿದಂತೆ ಒಟ್ಟು 10 ಆರೋಪಿಗಳನ್ನು ಬಂಧಿಸಿದ್ದಾರೆ. ಯಲಹಂಕ, ಡಿ.ಜೆ.ಹಳ್ಳಿ, ಬಾಣಸವಾಡಿ, ಕೋರಮಂಗಲ, ಬೊಮ್ಮನಹಳ್ಳಿ ಹಾಗೂ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಬಂಧಿತರಿಂದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 5.9 ಕೆಜಿ ಎಂಡಿಎಂಎ,
ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಆಮಿಷ: ಕಡೂರು ರೈತರಿಗೆ 1.35 ಕೋಟಿ ರೂ. ವಂಚನೆ
ಕೃಷಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆಸರ್ಕಾರಿ ಇಲಾಖೆಗಳಿಂದ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ಮತ್ತು ಇತರ ಕೃಷಿ ಉಪಕರಣಗಳನ್ನು ಕೊಡಿಸುವುದಾಗಿ ರೈತರನ್ನು ನಂಬಿಸಿ 1,34,98,400 ರೂಪಾಯಿ ಪಡೆದು ವಂಚಿಸಿರುವ ಪ್ರಕರಣ ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೈ.
ಎಲ್ಲ ವಲಯದಲ್ಲೂ ಋತುಚಕ್ರ ರಜೆ ಕಡ್ಡಾಯ ಜಾರಿಗೊಳಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ
18 ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ‘ಋತುಚಕ್ರ ರಜೆ’ ನೀತಿಯನ್ನು ರಾಜ್ಯ ಸರ್ಕಾರವು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಈ ಹಿಂದೆ ರಾಜ್ಯ ಸರ್ಕಾರ ಮಹಿಳೆಯರ ಮುಟ್ಟಿನ ರಜೆಗೆ
ಮಹಿಳಾ ಮೀಸಲು ಸೇರಿ ಲೋಕಸಭೆಯಲ್ಲಿ ಮೂರು ಮಹತ್ವದ ವಿಧೇಯಕ ಮಂಡನೆ
ಮಹಿಳಾ ಮೀಸಲಾತಿ, ಗಡಿ ನಿರ್ಣಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ವಿಧೇಯಕ 2026 ಲೋಕಸಭೆಯಲ್ಲಿ ಮಂಡನೆಯಾಗಿವೆ. ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆಯ ಬಲವನ್ನು ಪ್ರಸ್ತುತ ಇರುವ 543 ರಿಂದ 850 ಸ್ಥಾನಗಳಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ವಿಧೇಯಕವು ಒಳಗೊಂಡಿದೆ. ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನೂ
ಐಎಎಸ್ ಎಂದು ನಂಬಿಸಿ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳಿಗೆ ಕೋಟ್ಯಾಂತರ ರೂ. ವಂಚನೆ
2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ತಾನೆಂದು ನಂಬಿಸಿ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ್ದ ಮಿಥುನ್ ಎಂಬಾತನನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಈ ವಂಚನಕ ಬಲೆಗೆ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಬಿದ್ದಿದ್ದಾರೆಂಬುದು
ಡಿಜಿಟಲ್ ಅರೆಸ್ಟ್: ದಾವಣಗೆರೆಯ ನಿವೃತ್ತ ಪ್ರಾಂಶುಪಾಲರಿಗೆ 15 ಲಕ್ಷ ರೂ. ವಂಚನೆ
ದಾವಣಗೆರೆ ನಗರದ ಎಸ್.ಎಸ್ ಲೇಔಟ್‌ನ ನಿವೃತ್ತ ಪ್ರಾಂಶುಪಾಲರೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಮಾಡುವ ಮೂಲಕ ಸೈಬರ್ ವಂಚಕರು 15.12 ಲಕ್ಷ ರೂಪಾಯಿಗಳನ್ನು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾರ್ಚ್ 25ರಂದು 79 ವರ್ಷದ ನಿವೃತ್ತ ಪ್ರಾಂಶುಪಾಲರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ. ತಾನು
ಎಲ್ಪಿಜಿ ಕೊರತೆ: ಬದುಕು ದುಸ್ತರಗೊಂಡ ಸಮುದಾಯಗಳ ನೋವಿಗೆ ಸ್ಪಂದಿಸದ ಸರ್ಕಾರಗಳು
ಎಲ್ಲ ಕಡೆ ಎಲ್ಪಿಜಿ ಕೊರತೆಯಿಂದ ಹೊಟೇಲ್, ಆಟೋರಿಕ್ಷಾ ಚಾಲಕರು ಸೇರಿದಂತೆ ದಿನಗೂಲಿ ಮೇಲೆ ಜೀವನ ನಡೆಸುವವರು ಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ಈ ಬಡವರ ನೋವಿಗೆ ಸ್ಪಂದಿಸುವ ಯಾವ ಲಕ್ಷಣವನ್ನೂ ಇದುವರೆಗೆ ತೋರಿಲ್ಲ. ಇವರ ಸಂಘಟನೆಗಳು ತಮ್ಮ ಕಷ್ಟವನ್ನು
ಮಂತ್ರಾಲಯ ಸನ್ನಿಧಿಗೆ ತೆರಳುತ್ತಿದ್ದ ವಾಹನಕ್ಕೆ ಟ್ಯಾಂಕರ್ ಡಿಕ್ಕಿ: ಚಿಕ್ಕಮಗಳೂರಿನ ಎಂಟು ಮಂದಿ ಸಾವು
ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಕಲ್ಲುದೇವಕುಂಟ ಗ್ರಾಮದ ಬಳಿ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಚಿಕ್ಕಮಗಳೂರಿನ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶ್ರೀ ಗುರು ರಾಘವೇಂದ್ರ ಸನ್ನಿಧಿ ಮಂತ್ರಾಲಯ ಕ್ಷೇತ್ರದಲ್ಲಿ ಗುರುಗಳ ದರ್ಶನಕ್ಕಾಗಿ ತೆರಳುತ್ತಿದ್ದ ವಾಹನಕ್ಕೆ ಸಿಮೆಂಟ್ ಮತ್ತು ಜಲ್ಲಿಕಲ್ಲು
ಯಡಿಯೂರಪ್ಪ ಮಗನನ್ನು ಗೆಲ್ಲಿಸಿ ಎಂದು ಶಾಮನೂರು ವೇದಿಕೆಯಲ್ಲೇ ಹೇಳಿದಾಗ ಏನು ಕ್ರಮ ತಗೊಂಡ್ರಿ?
ಯಜಮಾನರು (ಶಾಮನೂರು ಶಿವಶಂಕರಪ್ಪ ) ಅವರು ವೇದಿಕೆಯಲ್ಲೇ ಯಡಿಯೂರಪ್ಪ ಅವರ ಮಗನನ್ನು ಗೆಲ್ಲಿಸಿ ಎಂದು ಮಾತನಾಡಿದಾಗ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೆ ಇಲ್ಲಿಯವರೆಗೆ ಅಮಾನತು ಪತ್ರ ಬಂದಿಲ್ಲ. ನನಗೆ
ರಾಯಚೂರಿನಲ್ಲಿ ವೇಶ್ಯಾವಾಟಿಕೆ ದಂಧೆ: ಮೂವರ ಬಂಧನ
ರಾಯಚೂರು ನಗರ ಹೊರವಲಯದ ನ್ಯಾಷನಲ್ ಲೇಔಟ್‌ನಲ್ಲಿರುವ ವಸತಿ ಗೃಹದ ಮೇಲೆ ಪೊಲೀಸರು ದಾಳಿ ನಡೆಸಿ, ವೇಶ್ಯಾವಾಟಿಕೆ ಅಕ್ರಮ ದಂಧೆಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ರಾಯಚೂರು ಪೊಲೀಸ್ ಠಾಣೆಯ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದು, ದಂಧೆಗೆ ಬಲವಂತವಾಗಿ ಬಳಸಿಕೊಳ್ಳಲಾಗಿದ್ದ ಒಬ್ಬ




