ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆಯಾದ ನಂಬಿಯಾರ್ ಬಿಲ್ಡರ್ಸ್, ಸರ್ಜಾಪುರ ರಸ್ತೆಯಲ್ಲಿ ತನ್ನ ಐಷಾರಾಮಿ ಸಂಯೋಜಿತ ಟೌನ್ ಶಿಪ್ ಯೋಜನೆಯಾದ ಡಿಸ್ಟ್ರಿಕ್ಟ್ 25ರ ಮೂರನೇ ಹಂತವನ್ನು ಅನಾವರಣಗೊಳಿಸಿದೆ.
ಯೋಜನೆಯ ಮೊದಲ ಎರಡು ಹಂತಗಳಲ್ಲಿ ಈಗಾಗಲೇ 1,600 ಕ್ಕೂ ಹೆಚ್ಚು ಕುಟುಂಬಗಳು ಮನೆಗಳನ್ನು ಖರೀದಿಸಿದ್ದು, ಅಂದಾಜು ₹3,200 ಕೋಟಿ ಮೌಲ್ಯದ ವಹಿವಾಟು ದಾಖಲಾಗಿದೆ. ಮೊದಲ ಎರಡು ಹಂತಗಳ ಖರೀದಿದಾರರಲ್ಲಿ ಶೇ. 90 ಜನ ಸ್ವಂತ ಬಳಕೆಗೆ ಮನೆ ಕೊಂಡುಕೊಂಡಿದ್ದರೆ, ಉಳಿದವರು ಹೂಡಿಕೆಯ ಉದ್ದೇಶದಿಂದ ಖರೀದಿಸಿದ್ದಾರೆ.
ಡಿಸ್ಟ್ರಿಕ್ಟ್ 25 ಫೇಸ್ 3 ಯೋಜನೆಯು 1,250 ರಿಂದ 2,980 ಚದರ ಅಡಿ ವಿಸ್ತೀರ್ಣದ ಅತ್ಯುತ್ತಮ ವಿನ್ಯಾಸದ 2ಬಿ ಎಚ್ ಕೆ, 3ಬಿ ಎಚ್ ಕೆ, 4ಬಿ ಎಚ್ ಕೆ ಮತ್ತು 4.5ಬಿ ಎಚ್ ಕೆ ಐಷಾರಾಮಿ ಅಪಾರ್ಟ್‌ಮೆಂಟ್ ಗಳನ್ನು ಒಳಗೊಂಡಿದ್ದು, ಇವುಗಳ ಬೆಲೆ ₹1.62 ಕೋಟಿಯಿಂದ ಪ್ರಾರಂಭವಾಗುತ್ತದೆ.
11 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ನಂಬಿಯಾರ್ ಬಿಲ್ಡರ್ಸ್ ನ ಡಿಸ್ಟ್ರಿಕ್ಟ್ 25 ಫೇಸ್ 3, ಪ್ರಸ್ತುತ ಅನುಮೋದನೆ ಪಡೆದಿರುವ 63 ಎಕರೆ ಟೌನ್ ಶಿಪ್ ನ ಒಂದು ಭಾಗವಾಗಿದೆ. ಯೋಜನೆಯು ಚಂದಾಪುರ- ದೊಮ್ಮಸಂದ್ರ ರಸ್ತೆಯಲ್ಲಿದ್ದು, ಬೆಂಗಳೂರಿನ ಪ್ರಮುಖ ಐಟಿ ಕಾರಿಡಾರ್ ಗಳಿಗೆ ಸುಲಭ ಸಂಪರ್ಕ ಸಾಧ್ಯವಿದೆ. ಪ್ರಸ್ತಾವಿತ ಮೆಟ್ರೋ ನಿಲ್ದಾಣಕ್ಕೆ ಈ ಯೋಜನೆ ಅತ್ಯಂತ ಹತ್ತಿರದಲ್ಲಿದೆ. ಈ ಯೋಜನೆಯು ಒಟ್ಟು 8 ಟವರ್‌ಗಳಲ್ಲಿ 1,202 ಮನೆಗಳನ್ನು ಒಳಗೊಂಡಿದ್ದು, ಶೇ. 85 ಜಾಗವನ್ನು ಮುಕ್ತ ಪ್ರದೇಶಕ್ಕಾಗಿ ಕಾಯ್ದಿರಿಸಲಾಗಿದೆ.
ಟವರ್ ಗಳನ್ನು ಒಂದಕ್ಕೊಂದು 40 ರಿಂದ 135 ಮೀಟರ್‌ಗಳಷ್ಟು ಅಂತರದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಟವರ್ ಗಳನ್ನು ಕ್ಲಬ್ ಸೋಹೋ ಮತ್ತು ಹೊಸದಾಗಿ ಪರಿಚಯಿಸಲಾದ 20 ಕ್ಕೂ ಹೆಚ್ಚು ಎಕರೆಯ ಸ್ಪೋರ್ಟ್ಸ್ ಡಿಸ್ಟ್ರಿಕ್ಟ್ ಕಡೆಗೆ ಮುಖಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಇಡೀ ಟೌನ್‌ಶಿಪ್ ವ್ಯವಸ್ಥೆಯ ಪ್ರಮುಖ ಕ್ರೀಡಾ ಸೌಲಭ್ಯಗಳು ಮತ್ತು ಕ್ಲಬ್ ಹೌಸ್ ಗೆ ತೀರಾ ಹತ್ತಿರದಲ್ಲಿವೆ. ಮೊದಲ ಎರಡು ಹಂತಗಳು ಡಿಸ್ಟ್ರಿಕ್ಟ್ 25 ರ ಜೀವನಶೈಲಿ ಮತ್ತು ಕ್ಲಬ್ ಹೌಸ್ ಆಧಾರಿತ ಮೂಲಸೌಕರ್ಯಗಳಿಗೆ ಭದ್ರ ಬುನಾದಿ ಹಾಕಿದ್ದರೆ, ಫೇಸ್ 3 ಯೋಜನೆಯು ಸ್ಪೋರ್ಟ್ಸ್ ಡಿಸ್ಟ್ರಿಕ್ಟ್ ಮೂಲಕ ನಿವಾಸಿಗಳ ಸಕ್ರಿಯ ಜೀವನಶೈಲಿಗೆ ಹೆಚ್ಚಿನ ಒತ್ತು ನೀಡಲಿದೆ. ಕ್ರೀಡೆ, ದೈಹಿಕ ಚಟುವಟಿಕೆ ಮತ್ತು ಆರೋಗ್ಯವನ್ನು ದಿನನಿತ್ಯದ ಜೀವನದ ಭಾಗವಾಗಿಸುವಂತೆ ಈ ಹಂತವನ್ನು ಯೋಜಿಸಲಾಗಿದೆ. ವಿಶೇಷವಾಗಿ ಮುಕ್ತ ಜಾಗ, ಮಕ್ಕಳ ಆಟದ ಮೈದಾನ ಮತ್ತು ಸಮುದಾಯದ ಒಳಗೇ ದಿನನಿತ್ಯದ ಮನರಂಜನೆಯನ್ನು ಬಯಸುವ ಕುಟುಂಬಗಳಿಗೆ ಇದು ಅತ್ಯಂತ ಸೂಕ್ತವಾಗಿದೆ.
“ದಿ ಸೋಹೋ ಲೈಫ್” ಪರಿಕಲ್ಪನೆಯಡಿ ವಿನ್ಯಾಸಗೊಳಿಸಲಾದ ಡಿಸ್ಟ್ರಿಕ್ಟ್ 25, ಹೈ-ರೈಸ್ ಅಪಾರ್ಟ್ ಮೆಂಟ್ ಗಳಲ್ಲೇ ವಿಲ್ಲಾ ಶೈಲಿಯ ಜೀವನದ ಅನುಭವವನ್ನು ನೀಡುತ್ತದೆ. ಇಲ್ಲಿನ ಪ್ರತಿಯೊಂದು ಮನೆಯನ್ನು ಕಾರ್ನರ್ ಯೂನಿಟ್ ಆಗಿ ಯೋಜಿಸಲಾಗಿದ್ದು, ಪ್ರತಿ ಟವರ್‌ನ ಪ್ರತಿಯೊಂದು ಮಹಡಿಯಲ್ಲಿ ನಾಲ್ಕು ನಿವಾಸಗಳು ಮಾತ್ರ ಇರಲಿವೆ. ಫೇಸ್ 3 ಯೋಜನೆಯು ಈ ಆಲೋಚನೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುತ್ತದೆ. ಮೊದಲ ಎರಡು ಹಂತಗಳ ಖರೀದಿದಾರರಿಂದ ಪಡೆದ ಪ್ರತಿಕ್ರಿಯೆಗಳ ಆಧಾರದ ಮೇಲೆ, ನಂಬಿಯಾರ್ ಬಿಲ್ಡರ್ಸ್ ಈ ಮನೆಗಳನ್ನು ಮತ್ತಷ್ಟು ಆರಾಮದಾಯಕವಾಗಿ ಪರಿಷ್ಕರಿಸಿದೆ.
ಪರಿಣಾಮಕಾರಿಯಾದ ಯೂನಿಟ್ ಪ್ಲಾನ್ ಗಳು, ವಿಶಾಲವಾದ ಕೋಣೆಗಳು, ಆರಾಮದಾಯಕವಾದ ರೌಂಡ್ ಬಾಲ್ಕನಿಗಳು, ಕಿಚನ್ ಮತ್ತು ಡೈನಿಂಗ್ ನಡುವೆ ಉತ್ತಮ ಸಂಪರ್ಕ, ದೊಡ್ಡ ಅಪಾರ್ಟ್ ಮೆಂಟ್ ಗಳಲ್ಲಿ ವಾಕ್- ಇನ್ ವಾರ್ಡ್ ರೋಬ್ ಗಳು ಮತ್ತು ಆಯ್ದ ಲೇಔಟ್ ಗಳಲ್ಲಿ ಸ್ಟಡಿ ಸ್ಪೇಸ್ ಗಳನ್ನು ನೀಡಲಾಗಿದೆ. ದಕ್ಷಿಣಾಭಿಮುಖ ಕಿಟಕಿಗಳಿಗೆ ಶಾಖವನ್ನು ಕಡಿಮೆ ಮಾಡುವ ವಿಶೇಷ ಗ್ಲೇಜಿಂಗ್ ಗ್ಲಾಸ್ ಬಳಸಲಾಗುತ್ತಿದ್ದು, ಮನೆಯೊಳಗಿನ ತಾಪಮಾನವನ್ನು ಸಮತೋಲನದಲ್ಲಿಡುತ್ತದೆ. ಟವರ್‌ಗಳ ನಡುವಿನ ಹೆಚ್ಚಿನ ಅಂತರವು ನಿವಾಸಿಗಳ ಗೌಪ್ಯತೆ, ನೈಸರ್ಗಿಕ ಬೆಳಕು ಮತ್ತು ಉತ್ತಮ ಗಾಳಿಯ ಸಂಚಾರವನ್ನು ಹೆಚ್ಚಿಸಲಿದೆ.
ಸರ್ಜಾಪುರ ವಲಯವು ಪ್ರಸ್ತುತ 50 ಕ್ಕೂ ಹೆಚ್ಚು ಶಾಲೆಗಳು, ಸುಸಜ್ಜಿತ ಆರೋಗ್ಯ ಸೌಲಭ್ಯಗಳು, ಶಾಪಿಂಗ್ ಕೇಂದ್ರಗಳು ಮತ್ತು ದಿನನಿತ್ಯದ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದೆ. ಈ ಕಾರಿಡಾರ್ ಔಟರ್ ರಿಂಗ್ ರೋಡ್ ಕಚೇರಿ ವಲಯ ಸೇರಿದಂತೆ ಪ್ರಮುಖ ಐಟಿ ಪಾರ್ಕ್‌ಗಳಿಗೆ ಉತ್ತಮ ಸಂಪರ್ಕವನ್ನು ಕಲ್ಪಿಸುತ್ತದೆ. ಇದರೊಂದಿಗೆ, ಪ್ರಸ್ತಾವಿತ ಸರ್ಜಾಪುರ-ಹೆಬ್ಬಾಳ ಮೆಟ್ರೋ ಕಾರಿಡಾರ್ ಈ ಪ್ರದೇಶದ ದೀರ್ಘಾವಧಿಯ ಸಂಪರ್ಕ ವ್ಯವಸ್ಥೆಗೆ ಮತ್ತಷ್ಟು ಬಲ ನೀಡಲಿದೆ.
ಯೋಜನೆಯ ಕುರಿತು ಮಾತನಾಡಿದ ಚೀಫ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಆಫೀಸರ್ ಸಂಜಿತ್ ನಂಬಿಯಾರ್, ಯೋಜನೆಯು 3,500 ಕ್ಕೂ ಹೆಚ್ಚು ಮರಗಳು ಮತ್ತು 2.50 ಲಕ್ಷ ಚದರ ಅಡಿಯ ಬೃಹತ್ ಸೋಹೋ ಕ್ಲಬ್ ಹೌಸ್ ಒಳಗೊಂಡ 20ಕ್ಕೂ ಹೆಚ್ಚು ಎಕರೆಯ ಸ್ಪೋರ್ಟ್ಸ್ ಡಿಸ್ಟ್ರಿಕ್ಟ್ ಒಳಗೊಂಡಿದೆ. ಕುಟುಂಬಗಳು ಒಟ್ಟಿಗೆ ವಾಸಿಸಲು, ಆಟವಾಡಲು ಮತ್ತು ಹೆಚ್ಚಿನ ಸಮಯವನ್ನು ಕಳೆಯಲು ಸೂಕ್ತ ಸ್ಥಳವಾಗಿದೆ. ಮಧ್ಯಭಾಗದಲ್ಲಿ ಫಿಫಾ ಮಾದರಿಯ ಫುಟ್ ಬಾಲ್ ಮೈದಾನ, ಅಥ್ಲೆಟಿಕ್ಸ್ ಟ್ರ್ಯಾಕ್ ಮತ್ತು ಪೆವಿಲಿಯನ್, ಟೆನ್ನಿಸ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಸ್ಕ್ವಾಷ್ ಮತ್ತು ಪಿಕಲ್‌ಬಾಲ್‌ಗಾಗಿ ಮಲ್ಟಿ-ಕೋರ್ಟ್ ಸೌಲಭ್ಯಗಳು ಇರಲಿವೆ. ಬೀಚ್ ವಾಲಿಬಾಲ್, ಕ್ರಿಕೆಟ್, ಸೆಲೆಬ್ರೇಷನ್ ಲಾನ್ಸ್ ಮತ್ತು ಈಜುಕೊಳಗಳ ಸೌಲಭ್ಯವೂ ಇದೆ. ದಿನನಿತ್ಯದ ಜೀವನಕ್ಕಾಗಿ ವಿನ್ಯಾಸಗೊಳಿಸಲಾದ ಫೇಸ್ 3, ಕೇವಲ ಸೌಲಭ್ಯಗಳ ಪಟ್ಟಿಯಾಗುಳಿಯದೆ ದೈಹಿಕ ಚಟುವಟಿಕೆ, ಮನರಂಜನೆ ಮತ್ತು ಸಮುದಾಯ ಜೀವನವನ್ನು ಮನೆಯ ದಿನನಿತ್ಯದ ಭಾಗವಾಗಿಸುತ್ತದೆ ಎಂದರು.
ಡಿಸೈನ್ ಹೆಡ್ ಅರುಣ್ ಮಾತನಾಡಿ, ಡಿಸ್ಟ್ರಿಕ್ಟ್ 25 ಅನ್ನು ಬೆಂಗಳೂರಿನ ಅತ್ಯುತ್ತಮ ಸಂಯೋಜಿತ ಟೌನ್‌ಶಿಪ್‌ಗಳಲ್ಲಿ ಒಂದಾಗಿ ರೂಪಿಸುವುದು ನಮ್ಮ ಗುರಿ. ಈ ಯೋಜನೆಯು ಟೌನ್‌ಶಿಪ್ ಜೀವನಶೈಲಿಯಲ್ಲಿ ಮನೆ ಖರೀದಿದಾರರ ವಿಶ್ವಾಸವನ್ನು ಗಳಿಸಿದೆ. ಇಂದಿನ ಕುಟುಂಬಗಳು ಪ್ರತಿ ದಿನವೂ ಹೊಸ ಉತ್ಸಾಹ ನೀಡುವ ಒಂದು ಸಕ್ರಿಯ ಸಮುದಾಯವನ್ನು ಹುಡುಕುತ್ತಿವೆ. ಮಕ್ಕಳು ಮುಕ್ತವಾಗಿ ಆಟವಾಡುವ, ನಿವಾಸಿಗಳು ಕ್ರೀಡೆ ಮತ್ತು ಮನರಂಜನೆಯ ಮೂಲಕ ಸಕ್ರಿಯರಾಗಿರುವ ಮತ್ತು ಕುಟುಂಬಗಳು ಸುರಕ್ಷಿತ ವಾತಾವರಣದಲ್ಲಿ ಒಟ್ಟಿಗೆ ಆಚರಣೆಗಳನ್ನು ಆನಂದಿಸುವ ಸ್ಥಳವನ್ನು ಬಯಸುತ್ತವೆ. ನಂಬಿಯಾರ್ ಬಿಲ್ಡರ್ಸ್ ಡಿಸ್ಟ್ರಿಕ್ಟ್ 25 ಫೇಸ್ 3 ಈ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತದೆ ಎಂದು ವಿವರಿಸಿದರು.
ನಂಬಿಯಾರ್ ಬಿಲ್ಡರ್ಸ್‌ನ 17 ವರ್ಷಗಳ ಬ್ರ್ಯಾಂಡ್ ಪ್ರಯಾಣವು ಸ್ಪಷ್ಟ ಉದ್ದೇಶ, ಸ್ಥಿರತೆ ಮತ್ತು ಗ್ರಾಹಕರಿಗೆ ಆದ್ಯತೆ ನೀಡುವ ತತ್ವದೊಂದಿಗೆ ಸಾಗಿದೆ. ‘ಥಾಟ್‌ಫುಲ್, ಮೈಂಡ್‌ಫುಲ್ ಮತ್ತು ಸೋಲ್‌ಫುಲ್’ ದೃಷ್ಟಿಕೋನದಲ್ಲಿ ಬೇರೂರಿರುವ ಸಂಸ್ಥೆಯು ಬುದ್ಧಿವಂತ ವಿನ್ಯಾಸ, ಉನ್ನತ ನಿರ್ಮಾಣ ಗುಣಮಟ್ಟ ಮತ್ತು ಪಾರದರ್ಶಕ ಸಂವಹನದ ಮೂಲಕ ಪ್ರೀಮಿಯಂ ಜೀವನಶೈಲಿಯನ್ನು ಸೊಗಸುಗೊಳಿಸುವತ್ತ ಹರಿಸಿದೆ. ವ್ಯಾಪಾರದ ವಿಸ್ತರಣೆಗಿಂತ ಮುಂಚಿತವಾಗಿ ನಂಬಿಕೆ ಗಳಿಸಿದೆ. ನಂಬಿಯಾರ್ ಬಿಲ್ಡರ್ಸ್ ಹೆಗ್ಗುರುತಿನ ಯೋಜನೆಗಳಿಗೆ ಮಾತ್ರವಲ್ಲದೆ, ಮನೆಗಳನ್ನು ಶಾಶ್ವತ ಜೀವನಶೈಲಿಯಾಗಿ ಪರಿವರ್ತಿಸುವ ಪ್ರಾಮಾಣಿಕತೆ, ಕಾಳಜಿ ಮತ್ತು ಶ್ರೇಷ್ಠತೆಗೆ ಹೆಸರುವಾಸಿ.
ಈ ಟೌನ್‌ಶಿಪ್ ಅನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು, ಬೆಂಗಳೂರಿನ ಆಗ್ನೇಯ ಬೆಳವಣಿಗೆಯ ಕಾರಿಡಾರ್‌ನಲ್ಲಿ ನಂಬಿಯಾರ್ ಬಿಲ್ಡರ್ಸ್ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತಿದ್ದಂತೆ ಭವಿಷ್ಯದ ವಿಸ್ತರಣೆಗೂ ಇಲ್ಲಿ ಅವಕಾಶವಿದೆ.


