Menu

ಮುಲಾಯಂ ಸಿಂಗ್ ಯಾದವ್ ಮಗ, ಫಿಟ್ನೆಸ್‌ ಫ್ರೀಕ್‌ ಪ್ರತೀಕ್‌ ಅನುಮಾನಾಸ್ಪದ ಸಾವು

ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮಗ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಮಲಸಹೋದರ ಪ್ರತೀಕ್ ಯಾದವ್(38) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಫಿಟ್ನೆಸ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಪ್ರತೀಕ್‌, ಸಕ್ರಿಯ ರಾಜಕಾರಣದಿಂದ ದೂರವಿದ್ದು, ಅವರ ಪತ್ನಿ ಅಪರ್ಣಾ ಬಿಜೆಪಿ ನಾಯಕಿಯಾಗಿದ್ದಾರೆ. ಬುಧವಾರ ಬೆಳಗಿನ ಜಾವ ಅಡುಗೆಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪ್ರತೀಕ್ ಯಾದವ್ ಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇಹದ ಮೇಲೆ ಕೆಲವು ಗಾಯಗಳು ಕಂಡುಬಂದಿವೆ.

ಸಾವಿಗೆ ನಿಖರವಾದ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಿಡುಗಡೆಯಾದ ನಂತರ ತಿಳಿದುಬರಲಿದೆ. ಪ್ರಕರಣವು ಅನುಮಾನಾಸ್ಪದವಾಗಿದ್ದು, ವೈದ್ಯರ ತಂಡವು ಪ್ರತೀಕ್ ಯಾದವ್ ಅವರ ಆರಂಭಿಕ ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಿದೆ. ಮರಣೋತ್ತರ ಪರೀಕ್ಷೆಯ ವೀಡಿಯೊ ಚಿತ್ರೀಕರಣ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

Related Posts

Leave a Reply

Your email address will not be published. Required fields are marked *