Friday, September 18, 2026
Menu

ಕುಡಿಯಲು ನೀರು ಕೇಳಿ ಬಂದು ಮಹಿಳೆಯ ಕಟ್ಟಿ ಹಾಕಿ ಅತ್ಯಾಚಾರ

ಕುಡಿಯಲು ನೀರು ಬೇಕೆಂದು ಕೇಳಿಕೊಂಡು ಮನೆಗೆ ಬಂದಾತ ಮಹಿಳೆ ನೀರು ತರಲು ಒಳಗೆ ಹೋದಾಗ ನುಗ್ಗಿ ಕೈ ಕಟ್ಟಿ ಚಾಕು ತೋರಿಸಿ ಬೆದರಿಸಿ ಅತ್ಯಾಚಾರ ನಡೆಸಿರುವ ಘಟನೆ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಾಚೆರ್ಲಾ ಪಟ್ಟಣದಲ್ಲಿ ನಡೆದಿದೆ.

ಸಂತ್ರಸ್ತ ಮಹಿಳೆಯು ಮನೆಯಲ್ಲಿ ಒಬ್ಬರೇ ಇರುವಾಗ ಈ ಘಟನೆ ನಡೆದಿದೆ. ಮಧ್ಯಾಹ್ನ ಆರೋಪಿ ಕುಡಿಯುವ ನೀರು ಬೇಕು ಎಂದು ಹೇಳಿ ಮನೆಗೆ ಬಂದಿದ್ದಾನೆ. ಮಹಿಳೆಯ ಕೈ ಕಾಲು ಕಟ್ಟಿ,ಚಾಕುವಿನಿಂದ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ. ಮಹಿಳೆ ತಾನು ಹೆಚ್ಐವಿ ಸೋಂಕು ಪೀಡಿತೆ ಎಂದು ಹೇಳಿದ್ದು, ಆತ ಖಾಸಗಿ ಅಂಗದೊಳಗೆ ಕಬ್ಬಿಣದ ಸಲಾಕೆ ಹಾಕಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಘಟನೆ ನಡೆದ ಬಳಿಕ ನೆರೆಹೊರೆಯವರು ಹಾಗೂ ಸಂಬಂಧಿಕರು ಮನೆಗೆ ಧಾವಿಸಿದಾಗ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು, ಕೂಡಲೇ ಮಾಚೆರ್ಲಾದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ನರಸರಾವ್‌ಪೇಟ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಹಿಳೆಯ ಮನೆಗೆ ವಿಧಿವಿಜ್ಞಾನ ತಂಡ ಆಗಮಿಸಿ, ಬೆರಳಚ್ಚು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಆರೋಪಿಯನ್ನು ಗುರುತಿಸಲು ವಿಶೇಷ ತಂಡ ರಚಿಸಲಾಗಿದ್ದು, ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತಿದೆ. ಮಾಹಿತಿ ಇರುವ ಯಾರಾದರೂ ಮುಂದೆ ಬಂದು ವಿಚಾರಣೆಗೆ ಸಹಾಯ ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *