Menu

ಮಮತಾ- ಸ್ಟಾಲಿನ್‌ಗೆ ಪರ್ವಕಾಲ ಮಾತ್ರವಲ್ಲ, ಪ್ರಾದೇಶಿಕ ಪಕ್ಷಗಳ ಅಳಿವು, ಉಳಿವಿನ ಪ್ರಶ್ನೆ

ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಟಿಎಂಸಿ ಮತ್ತು ಡಿಎಂಕೆ ಪಕ್ಷಗಳಿಗೆ ಫಲಿತಾಂಶದಲ್ಲಿ ಹಿನ್ನಡೆಯಾದಲ್ಲಿ, ದೇಶದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಒಂದು ಡಜನ್ ಆಕ್ಷನ್ ಪ್ಲಾನ್‌ಗಳನ್ನು ಈಗಾಗಲೆ ಸಿದ್ಧಪಡಿಸಿಕೊಂಡು ತನ್ನ ಬತ್ತಳಿಕೆಯಲ್ಲಿ ತುಂಬಿಕೊಂಡಿದೆ.

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶವು, ದೇಶ ಮತ್ತು ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಮೇಲೆ ನೇರ ಪರಿಣಾಮ ಬೀರಲಿದೆ. ಅಲ್ಲದೆ ಎನ್‌ಡಿಎ ಮೈತ್ರಿಕೂಟದ ಮೇಲೆ ಕೂಡಾ ಇದರ ಪರಿಣಾಮವಿದೆ. ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಟಿಎಂಸಿ ಮತ್ತು ಡಿಎಂಕೆಗೆ ಫಲಿತಾಂಶದಲ್ಲಿ ಹಿನ್ನಡೆಯಾದಲ್ಲಿ ಬಿಜೆಪಿ ತನ್ನ ದೇಶದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಒಂದು ಡಜನ್ ಆಕ್ಷನ್ ಪ್ಲಾನ್‌ಗಳನ್ನು ತನ್ನ ಬತ್ತಳಿಕೆಯಲ್ಲಿ ತುಂಬಿಕೊಂಡಿದೆ. ಇದೇ ಮೂಡ್ ಅನ್ನು ದೇಶದ ಮೋಡ್ ಅಥವಾ ಮೋದಿ ಮೂಡ್ ಆಗಿ ಪರಿವರ್ತಿಸಿ, ಇದನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅಬ್ಬರ ಮಾಡಿ ಸಂಭ್ರಮಿಸಲು ಮಹಾನ್ ಕಾರ್ಯತಂತ್ರಗಳ ಮೆಗಾ ಬ್ಲೂಪ್ರಿಂಟ್‌ಗಳು ಮೋದಿ ಮತ್ತು ಶಾ ತಲೆಯಲ್ಲಿ ಸಿದ್ದವಾಗಿವೆ.

ದಕ್ಷಿಣದಲ್ಲಿ ಮತ್ತು ದೇಶದ ಪೂರ್ವ ಭಾಗದಲ್ಲಿ ತನ್ನ ರಾಜಕೀಯ ಪಾಳೆಯವನ್ನು ವಿಸ್ತರಿಸಿಕೊಳ್ಳಲು ಮೊದಲಿಂದಲೂ ಹವಣಿಸುತ್ತಿರುವ ಬಿಜೆಪಿ, ಕಾಂಗ್ರೆಸ್ ಅಲ್ಲದೆ ಪ್ರಾದೇಶಿಕ ಪಕ್ಷಗಳನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಲು  ರಣತಂತ್ರ  ನೂರ್ಮುಡಿಗೊಳಿಸಲು ಸಕಲ ತಯಾರಿ ನಡೆಸಿದೆ ಅಸ್ಸಾಂ ಮತ್ತು ಕೇರಳದ ಫಲಿತಾಂಶಕ್ಕಿಂತಲೂ ಬಿಜೆಪಿಗೆ ಬೃಹತ್ ಸವಾಲಾಗಿರುವುದು ಮಮತಾ ಬ್ಯಾನರ್ಜಿ ಮತ್ತು ಸ್ಟಾಲಿನ್ ಸರ್ಕಾರಗಳ ಮುಂದಿನ ಹಣೆಬರಹದ ಬಗ್ಗೆ.  ಬಿಜೆಪಿ ಹೊಂದಿರುವ ಗುರಿ ಕೇವಲ  ಚುನಾವಣೆಯಲ್ಲಿ ಗೆಲುವನ್ನು ಸಾಧಿಸುವುದು ಒಂದೇ ಅಲ್ಲ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳ ಹುಟ್ಟಡಗಿಸಿ ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಕಾಯಂ ನೆಲೆಯನ್ನು ಕಲ್ಪಿಸುವುದು. ಮೊನ್ನೆ ನಡೆದ ಮೊದಲ ಹಂತದ ಚುನಾವಣೆಯ ಮತದಾನದ ಪ್ರಮಾಣವನ್ನು ಕಂಡಾಗ, ಈ ದೇಶದ ಜನತೆ ತಮ್ಮ ಮತದಾನದ ಹಕ್ಕುಗಳ ಬಗ್ಗೆ ತುಸು ಆತಂಕಕ್ಕೆ ಒಳಗಾಗಿರುವುದು ಸ್ಪಷ್ಟ. ತಾವು ಮತಗಟ್ಟೆಗೆ ತೆರಳಿಮತ ಚಲಾಯಿಸದಿದ್ದಲ್ಲಿ ಮುಂದೊಂದು ದಿನ ಈ ದೇಶದ ಪೌರರೇ ಅಲ್ಲ ಎನ್ನುವಂತಾದರೆ ಅತಿಕಷ್ಟ ಎಂಬ ಭಯ ಮತ್ತು ಕಳವಳ ಉಂಟಾಗಿರುವುದರಿಂದ ಮತದಾನದ ಪ್ರಮಾಣ ದಾಖಲೆ ಪ್ರಮಾಣದಲ್ಲಿ ನಡೆದಿದೆ.

ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ತೆಲುಗುದೇಶಂ, ಜೆಡಿಯು ಮತ್ತು ಜೆಡಿಎಸ್ ಕೂಡಾ ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಗ್ಗೆ ಕಣ್ ಇಟ್ಟಿದೆ. ಟಿಎಂಸಿ ಮತ್ತು ಡಿಎಂಕೆ ಸೋಲು- ಗೆಲುವು ನಾಯಡು ನಿತಿಶ್ ಮತ್ತು ಕುಮಾರಸ್ವಾಮಿ ಅವರ ಪಾರ್ಟಿಗಳ ಮೇಲೆ ಕೂಡಾ ಪರಿಣಾಮ ಬೀರುವಂತಹದು. ಒಂದು ವೇಳೆ ಡಿಎಂಕೆ ಮತ್ತು ಟಿಎಂಸಿ ಭರ್ಜರಿ ಗೆಲುವು ಸಾಧಿಸಿದರೆ ಇತ್ತ ಕೇಂದ್ರದಲ್ಲಿ ಮೋದಿ ಸರ್ಕಾರಕ್ಕೆ ಮೈತ್ರಿ ಪಕ್ಷಗಳಿಂದ ರಾಜಕೀಯ ಒತ್ತಡದ ಸನ್ನಿವೇಶ ತಪ್ಪಿದ್ದಲ್ಲ. ಹಾಗೆಯೇ ಕರ್ನಾಟಕದಲ್ಲಿ ಕೆಲವೊಂದು ಕ್ಷಿಪ್ರ ರಾಜಕೀಯ ಬದಲಾವಣೆಗಳಿಗೆ ಇದು ದಾರಿಯಾಗಬಹುದು. ಈ ಸಾರಿ ಶತಾಯ, ಗತಾಯ ಚುನಾವಣೆಗಳಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಮೋದಿ ಮತ್ತು ಅಮಿತ್‌ಷಾ ಅವರಿಗೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಗೆಲುವು ಅನಿವಾರ್ಯ . ಅಲ್ಲದೆ ಪ್ರಾದೇಶಿಕ ಪಕ್ಷಗಳ ನಿಜವಾದ ಸತ್ವ ಮತ್ತು ಅಳಿವು, ಉಳಿವಿನ ಪ್ರಶ್ನೆ  ಇದಾಗಿದೆ. ಪಾರಂpರಿಕ ರಾಜಕಾರಣಕ್ಕೆ ಯಾವಾಗಲೂ ಮಣೆ ಹಾಕುವ ದ್ರಾವಿಡನಾಡು ಮತ್ತು ವಂಗನಾಡು ರಾಜಕೀಯವಾಗಿ ಬದಲಾಗುವುದೇ ಎಂಬುದು

Related Posts

Leave a Reply

Your email address will not be published. Required fields are marked *