ಲಾರಿ ಮತ್ತು ಕ್ರೂಸರ್ ಡಿಕ್ಕಿಯಾಗಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಆರತಿಬೈಲಿನಲ್ಲಿ ನಡೆದಿದೆ. ಕ್ರೂಸರ್ ಧಾರವಾಡದಿಂದ ಅಂಕೋಲಾ ಕಡೆ ತೆರಳುತ್ತಿದ್ದು, ಲಾರಿ ಯಲ್ಲಾಪುರದಿಂದ ಅಂಕೋಲಾ ಕಡೆ ಸಂಚರಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಕ್ರೂಸರ್ನಲ್ಲಿ ಇದ್ದ ಧಾರವಾಡದ ಬಸವರಾಜ್, ಮಂಜುನಾಥ್ ಚುಲ್ಲಕ್ಕಿ, ಅಭಿಷೇಕ್ ಮಲ್ಲೇಶ್ ಮಡಬಾವಿ, ಅಕ್ಷಯ್ ಮಲ್ಲಣ್ಣನವರ್ ಮೃತಪಟ್ಟಿದ್ದಾರೆ. ಉಳಿದ ಇಬ್ಬರ ಗುರುತು ಪತ್ತೆಯಾಗಬೇಕಿದೆ. ಮೃತದೇಹಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


