Menu

ಸರ್ಕಾರಿ ಕೆಲಸದ ಆಮಿಷ: ಹಣ ಪಡೆದು ವಂಚನೆ

ಸರ್ಕಾರಿ ಕೆಲಸ‌ದ ಆಮಿಷವೊಡ್ಡಿ ಯುವಕ ಯುವತಿಯರಿಂದ ಲಕ್ಷ ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಹೈದರಾಬಾದ್ ಖಾಸಗಿ ಕಂಪನಿಯೊಂದರ ವ್ಯಕ್ತಿ ಪ್ರದೀಪ್​​ ಎಂಬಾತ ಸಾಕಷ್ಟು ಜನರಿಗೆ ವಂಚಿಸಿದ್ದಾನೆ.

ರಾಜ್ಯದ ಅತಿ ದೊಡ್ಡ ಮೆಡಿಕಲ್ ಕಾಲೇಜು ಇರುವ ಇಎಸ್​​ಐ ಆಸ್ಪತ್ರೆಯಲ್ಲಿ ನರ್ಸ್‌ ಕೆಲಸ ಕೊಡಿಸುವುದಾಗಿ ಯುವಕರನ್ನು ನಂಬಿಸಿ ಹಣ ವಸೂಲಿ ಮಾಡಿಸಿದ್ದ. ಈಗಾಗಲೇ ಹಲವರಿಗೆ ಕೆಲಸ ಕೊಡಿಸಿದ್ದಾಗಿ ಹೇಳಿದ್ದ. ತಮಗೂ ಕೆಲಸ ಸಿಗುವುದಾಗಿ ನಂಬಿದ್ದ ಹಣ ನೀಡಿದ್ದರು.

ಒಂದೊಂದು ಹುದ್ದೆಗೆ ಒಬ್ಬೊರಿಂದ ಎರಡು ಲಕ್ಷ ರೂಪಾಯಿಯಿಂದ ನಾಲ್ಕು ಲಕ್ಷ ರೂಪಾಯಿ ವಸೂಲಿ ಮಾಡಿದ್ದ. 10ಕ್ಕೂ ಜನರ ಬಳಿ ಹಣ ಪಡೆದು ವರ್ಷ ಕಳೆದರೂ ವಾಪಸ್​​ ನೀಡದೆ ಸತಾಯಿಸುತ್ತಿದ್ದಾನೆ.
ಆಕ್ರೋಶಗೊಂಡ ಸಂತ್ರಸ್ತರು ಆತನನ್ನು ರೆಡ್‌ ಹ್ಯಾಂಡ್ ಆಗಿ ಹಿಡಿಯಲು ಬಂದಾಗ ಪರಾರಿಯಾಗಿದ್ದಾನೆ.

ಈ ವಂಚನೆಯಲ್ಲಿ ಇಎಸ್​ಐ ಆಸ್ಪತ್ರೆಯ ಆಡಳಿತ‌ ಮಂಡಳಿ ಕೂಡ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಪ್ರತಿನಿತ್ಯ ಆತ ಕೆಲವರಿಗೆ ಆಮಿಷವೊಡ್ಡಿ ಇಎಸ್​​ಐ ಆಸ್ಪತ್ರೆಯ ಮುಂಭಾಗ ಪರೀಕ್ಷೆ ಬರೆಸಿ ಹಣಕಾಸಿನ ವ್ಯವಹಾರ ಮಾಡಿದ್ದ ಎಂದೂ ಹೇಳಲಾಗಿದೆ.

ಆರೋಪಿ ಪ್ರದೀಪ್​​ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಕೆಲವು ಮಹಿಳೆಯರು ಮತ್ತು ಪುರುಷರಿಗೆ ಪರೀಕ್ಷೆ ಇದೆ ಬನ್ನಿ ಎಂದಿದ್ದ. ಅತ್ತ ಹಣ ಕಳೆದುಕೊಂಡು ಕೆಲಸವೂ ಸಿಗದೆ ಆತನಿಂದ  ವಂಚನೆಗೊಳಗಾಗಿದ್ದವರು ಕೂಡ ಬಂದಿದ್ದಾರೆ. ಆದರೆ ಮಾಧ್ಯಮದವರನ್ನು ನೋಡ ಅಲ್ಲಿಂದ ಪರಾರಿ ಆಗಿದ್ದಾನೆ.

Related Posts

Leave a Reply

Your email address will not be published. Required fields are marked *