ತುಮಕೂರು
ಗಿಫ್ಟ್ ಆಮಿಷವೊಡ್ಡಿ ನಿವೃತ್ತ ಯೋಧನಿಗೆ 2.82 ಲಕ್ಷ ರೂಪಾಯಿ ವಂಚನೆ
ನಿವೃತ್ತ ಯೋಧರೊಬ್ಬರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಕರೆ ಮಾಡಿದ್ದ ದುಷ್ಕರ್ಮಿಗಳು ಉಡುಗೊರೆ ಕಳುಹಿಸುವುದಾಗಿ ನಂಬಿಸಿ 2.82 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ನಡೆದಿದೆ. ಜೂನ್ 20ರಂದು ನಿವೃತ್ತ ಯೋಧ ಶಿವಕುಮಾರ್ ಅವರ ಹುಟ್ಟುಹಬ್ಬದಂದು ಬೆಳಗ್ಗೆ ವಂಚಕರು ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ, ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮ ಕಡೆಯಿಂದ ಒಂದು ಅಮೂಲ್ಯ ಗಿಫ್ಟ್ ನೀಡುತ್ತಿದ್ದೇವೆ ಎಂದು ನಂಬಿಸಿ ಗಿಫ್ಟ್ ಪಾರ್ಸೆಲ್ ಕಳುಹಿಸಲು ಮನೆಯ ವಿಳಾಸ
ತೋಟಕ್ಕೆ ವಾಕಿಂಗ್ ಹೋಗಿದ್ದ ವೃದ್ಧೆಯ ಕೊಲೆ
ತೋಟಕ್ಕೆ ವಾಕಿಂಗ್ ಹೋಗಿದ್ದ ವೃದ್ಧೆಯನ್ನು ಕೊಲೆ ಮಾಡಿರುವ ಘಟನೆ ಕೊರಟಗೆರೆ ಸಿಎನ್ ದುರ್ಗದ ದಾಸಲುಕುಂಟೆಯಲ್ಲಿ ನಡೆದಿದೆ. ರತ್ನಮ್ಮ (74) ಕೊಲೆಯಾದ ವೃದ್ಧೆ. ರತ್ನಮ್ಮ ಸಂಜೆ ವಾಕಿಂಗ್‌ಗೆಂದು ತೋಟಕ್ಕೆ ಹೋಗಿದ್ದವರು ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ಸೊಸೆ ಭಾಗ್ಯಮ್ಮ ಹಾಗೂ ಊರಿನ ಜನರು
ಉಗ್ರನೊಂದಿಗೆ ಸಂಪರ್ಕ ಶಂಕೆ: ತುಮಕೂರಿನಲ್ಲಿ ಯುವಕ ಅರೆಸ್ಟ್
ವಿದೇಶಿ ಭಯೋತ್ಪಾದಕನ ಜೊತೆ ನಿರಂತರ ಸಂಪರ್ಕ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುವಂಥ ಚಟುವಟಿಕೆಗಳನ್ನು ನಡೆಸುತ್ತಿದ್ದ ಶಂಕೆಯಿಂದ ತುಮಕೂರಿನ ಯುವಕನೊಬ್ಬನನ್ನು ಕ್ಯಾತಸಂದ್ರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳು ನೀಡಿದ ನಿಖರ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ತುಮಕೂರು ನಗರ ಪೊಲೀಸರು
ಚಿಕ್ಕನಾಯಕನಹಳ್ಳಿಯಲ್ಲಿ ಕಾರುಗಳು ಡಿಕ್ಕಿ: ಒಂದೇ ಕುಟುಂಬದ ಮೂವರ ಸಾವು
ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟಟ್ಟಿರುವ ದಾರುಣ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದ ಬಳಿ ನಡೆದಿದೆ. ಮೃತಪಟ್ಟವರು ಆಂಧ್ರಪ್ರದೇಶ ಮೂಲದವರು ಎನ್ನಲಾಗುತ್ತಿದೆ. ಈ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ
“ಎಐ ಸಹಾನುಭೂತಿ, ಸಂದರ್ಭೋಚಿತ ನಿರ್ಧಾರ, ಅಂತಃಪ್ರಜ್ಞೆ, ಸೃಜನಶೀಲತೆ ನಕಲು ಮಾಡಲು ಸಾಧ್ಯವಿಲ್ಲ”
ಪುನರಾವರ್ತಿತ ಮತ್ತು ದತ್ತಾಂಶ ಆಧಾರಿತ ಕೆಲಸಗಳನ್ನು ಮಾಡುವಲ್ಲಿ ಎಐ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. ಆದರೆ ಇದಕ್ಕೆ ಮಾನವ ಸಹಜವಾದ ಸಹಾನುಭೂತಿ,ಸಂದರ್ಭೋಚಿತ ನಿರ್ಧಾರ ಸಾಮರ್ಥ್ಯ, ಆಳವಾದ ಅಂತಃಪ್ರಜ್ಞೆ ಮತ್ತು ಸೃಜನಶೀಲತೆಯನ್ನು ನಕಲು ಮಾಡಲು ಸಾಧ್ಯವಿಲ್ಲ, ಇವು ಕೇವಲ ಸುಸಂಸ್ಕೃತ ಮಾನವನ ಮನಸ್ಸಿನಿಂದ ಮಾತ್ರ
ಮಾಜಿ ಸಚಿವ ವೆಂಕಟರಮಣ್ಣಪ್ಪ ತಳಸಮುದಾಯದವರ ಬಗ್ಗೆ ಕಾಳಜಿ ಹೊಂದಿದ್ದ ನಾಯಕ: ಸಿಎಂ ಸಿದ್ದರಾಮಯ್ಯ
ಅಹಿಂದ ವರ್ಗದ ಧ್ವನಿಯಾಗಿದ್ದ ಹೆಚ್. ವೆಂಕಟರಮಣ್ಣಪ್ಪ ಅವರು ಸಮಾಜದ ತಳಸಮುದಾಯದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಾವಗಡ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು ಮಾಜಿ ಶಾಸಕರಾದ ದಿವಂಗತ ಹೆಚ್. ವೆಂಕಟರಮಣಪ್ಪ ಅವರ ಅಂತಿಮ ದರ್ಶನ
ಮತ್ತೊಬ್ಬನ ಜೊತೆ ಸಂಬಂಧ: ತುರುವೇಕೆರೆಯಲ್ಲಿ ವಿವಾಹಿತೆಯ ಕೊಲೆಗೈದ ಪ್ರಿಯಕರ
ತುರುವೇಕೆರೆ ತಾಲೂಕಿನ ಅಂಚಿಹಳ್ಳಿ ಅರಣ್ಯ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣದ ರಹಸ್ಯವನ್ನು ನಾಲ್ಕು ತಿಂಗಳ ಬಳಿಕ ಪೊಲೀಸರು ಬೇಧಿಸಿದ್ದಾರೆ. ವಿವಾಹಿತ ಮಹಿಳೆಯ ಪ್ರಿಯಕರ ಆಕೆ ಬೇರೊಬ್ಬನ ಜೊತೆ ಸಂಬಂಧ ಬೆಳೆಸಿದ್ದಾಳೆಂದು ಸಿಟ್ಟಿಗೆದ್ದು ಕೊಲೆ ಮಾಡಿರುವುದಾಗಿ ಬಯಲಾಗಿದೆ. ವಿವಾಹಿತೆ
17 ಜನಾನ ಇಟ್ಕೊಂಡು ಹರೀತಿನಿ, ಹರೀತಿನಿ ಅಂದ್ರೆ ಆಗುತ್ತಾ ಕುಮಾರಣ್ಣ: ಡಿಕೆ ಶಿವಕುಮಾರ್
ಮೊನ್ನೆ ತಾನೆ ಕುಮಾರಸ್ವಾಮಿಯವರು ಬೆಂಗಳೂರು ನಗರದಲ್ಲಿ ಬಿ ಖಾತೆಯಿಂದ ಎ ಖಾತೆ ಮಾಡಿಸಬೇಡಿ, ನಮ್ಮ ಸರ್ಕಾರ ಬಂದು ಬಿಡುತ್ತದೆ. ನೀವು ಯಾರೂ ದುಡ್ಡು ಕೊಡಲು ಹೋಗಬೇಡಿ. ನಾವು ಮಾಡುತ್ತೇವೆ ಎಂದು ಮಾತಾಡಿದ್ದಾರೆ. ಅಧಿಕಾರ ಕೊಟ್ಟಾಗ ನಿಮಗೇನೂ ಮಾಡುವುದಕ್ಕೆ ಆಗಲಿಲ್ಲ. ಅಧಿಕಾರ ಇಲ್ಲದೆ
ಪ್ರಣಾಳಿಕೆಯಲ್ಲಿನ 580 ಭರವಸೆಗಳಲ್ಲಿ 290ಕ್ಕೂ ಹೆಚ್ಚು ಭರವಸೆ ಈಡೇರಿಸಿದ್ದೇವೆ: ಸಿಎಂ ಸಿದ್ದರಾಮಯ್ಯ
ಚುನಾವಣೆ ವೇಳೆ ಜಿ.ಪರಮೇಶ್ವರ್ ಅವತ ಅಧ್ಯಕ್ಷತೆಯ ಪ್ರಣಾಳಿಕೆ ಸಮಿತಿ ಸಿದ್ದಪಡಿಸಿದ್ದ ಪ್ರಣಾಳಿಕೆಯಲ್ಲಿನ 580 ಭರವಸೆಗಳಲ್ಲಿ 290 ಕ್ಕೂ ಹೆಚ್ಚು ಈಡೇರಿಸಿದ್ದೇವೆ. ಉಳಿದ ಎರಡು ವರ್ಷಗಳಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರಕ್ಕೆ ಮೂರು ವರ್ಷಗಳು ಪೂರೈಸಿರುವ ಸಂದರ್ಭದಲ್ಲಿ
ಶಿರಾದಲ್ಲಿ ಯುವಕನೊಂದಿಗೆ ಮಗಳ ಪ್ರೀತಿ ಒಪ್ಪದೆ ಕೊಲೆಗೈದ ತಂದೆ
ಮಗಳು ಯುವಕನೊಬ್ಬನನ್ನು ಪ್ರೀತಿಸಿ ಮನೆತನದ ಗೌರವಕ್ಕೆ ಕುಂದು ಮಾಡುತ್ತಿದ್ದಾಳೆಂದು ಸಿಟ್ಟಿಗೆದ್ದ ತಂದೆ ಆಕೆಯನ್ನು ಹತ್ಯೆ ಮಾಡಿದ ಘಟನೆ ತುಮಕೂರಿನ ಶಿರಾ ತಾಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬಹಿರಂಗಗೊಂಡಿದೆ.’ ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ತಲೆ ಮರೆಸಿಕೊಂಡಿದ್ದ ಆರೋಪಿ




