ಜಿಲ್ಲಾ ಸುದ್ದಿ
ಮಲಪ್ರಭಾ ನದಿಯಲ್ಲಿ ಮರಳು ಲೂಟಿ: ಪಶ್ನಿಸಿದವರ ಮೇಲೆ ಹಲ್ಲೆ, ಅಸಹಾಯಕ ಪೊಲೀಸ್
ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಕ್ಷೇತ್ರದಲ್ಲಿ ಎಗ್ಗಿಲ್ಲದೇ ಮರಳು ದಂಧೆ ಮುಂದುವರಿದಿದ್ದು, ಮಲಪ್ರಭಾ ನದಿಯನ್ನು ರಾಜಾರೋಷವಾಗಿ ಬಗೆದು ಮರಳು ತೆಗೆಯಲಾಗುತ್ತಿದೆ. ಮರಳು ಲೂಟಿ ಪ್ರಶ್ನಿಸಿದವರ ವಿರುದ್ಧ ಪ್ರಭಾವಿಗಳು ಬೆದರಿಕೆಯೊಡ್ಡುತ್ತಿರುವುದಾಗಿ ಕನ್ನಡ ಪರ ಹೋರಾಟಗಾರ ಮಹೇಶ್ ವಡ್ಡರ್ ಆರೋಪಿಸಿದ್ದಾರೆ. ಪೊಲೀಸರ ಎದುರೇ ಮರಳು ಲೂಟಿಕೋರರು ಮತ್ತು ಹೋರಾಟಗಾರರ ನಡುವೆ ವಗ್ವಾದ.ಹಟಾಚಿ ಬಳಸಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದರೂ ಪೊಲೀಸರು ಪ್ರಶ್ನಿಸದೆ ಅಸಹಾಯಕರಾಗಿ ನಿಂತಿರುತ್ತಾರೆಂದು ವಡ್ಡರ್ ದೂರಿದ್ದಾರೆ. ಬಾದಾಮಿಯ ಚೊಳಚಗುಡ್ಡ ಬಳಿ ಇರುವ ಮಲಪ್ರಭಾ
ಇಂದು ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯ ಸಮಾವೇಶ, ಕೊಂದವರು ಯಾರು ಆಂದೋಲನ
ಮಹಿಳೆಯರ ಮೇಲಿನ ಹಿಂಸಾಚಾರ ಕೊನೆಗೊಂಡು ಎಲ್ಲ ಶೋಷಿತ, ದಮನಿತ ಮಹಿಳೆಯರಿಗೆ ನ್ಯಾಯ ಖಾತ್ರಿಪಡಿಸುವಂತೆ ಆಗ್ರಹಿಸಿ “ನಿರ್ಭಯಾ ದಿನ”ವಾದ ಇಂದು ಧರ್ಮಸ್ಥಳದ ಬೆಳ್ತಂಗಡಿಯಲ್ಲಿ ‘ಮಹಿಳೆಯರ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ’ ನಡೆಯುತ್ತಿದೆ. ಈ ಸಮಾವೇಶದಲ್ಲಿ ಮಹಿಳೆಯರು ಮಾತ್ರ ಭಾಗವಹಿಸುತ್ತಿದ್ದಾರೆ. ಧರ್ಮಸ್ಥಳ
ಶಬರಿಮಲೆಯಿಂದ ಬಂದು ಭರ್ಜರಿ ಪಾರ್ಟಿ: ಸ್ನೇಹಿತರಿಂದಲೇ ಕೊಲೆ
ಬ್ರಹ್ಮಾವರ ತಾಲೂಕು ಕೋಟ ಪಡುಕರೆಯಲ್ಲಿ ಶಬರಿಮಲೆ ಯಾತ್ರೆ ಮುಗಿಸಿಕೊಂಡು ಬಂದ ಯುವಕ ಬಳಿಕ ಸ್ನೇಹಿತರೊಂದಿಗೆ ಸೇರಿಕೊಂಡು ಭರ್ಜರಿ ಪಾರ್ಟಿ ನಡೆಸಿದ್ದು, ಈ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಸ್ನೇಹಿತರಿಂದಲೇ ಕೊಲೆಯಾಗಿದ್ದಾನೆ. ಆಕ್ಸಿಸ್ ಬ್ಯಾಂಕ್ ಉದ್ಯೋಗಿಯಾಗಿದ್ದ ಸಂತೋಷ್ ಪೂಜಾರಿ (30) ಕೊಲೆಯಾದ
ಅನ್ಯ ಜಾತಿ ಯುವತಿಯ ಮದುವೆಯಾದ ಮಗ: ತಾಯಿಯನ್ನು ಥಳಿಸಿದ ಪೊಲೀಸ್
ಮಗ ಅನ್ಯ ಜಾತಿಯ ಯುವತಿಯನ್ನು ಮದುವೆ ಆಗಿದ್ದಕ್ಕೆ ಆತನ ತಾಯಿ ಮೇಲೆ ಧಾರವಾಡದ ಕುಂದಗೋಳ ಠಾಣೆಯ ಪೊಲೀಸರು ಮನ ಬಂದಂತೆ ಥಳಿಸಿರುವ ಆರೋಪ ಕೇಳಿ ಬಂದಿದೆ. ಧಾರವಾಡದ ಕುಂದಗೋಳ ತಾಲೂಕಿನ ಮುಳ್ಳಳಿ ಗ್ರಾಮದ ಯುವಕ ದೇವರಾಜ್ ಎದುರು ಮನೆ ಯುವತಿ ಜೊತೆ
ದಾವಣಗೆರೆಯ ಸರ್ವತೋಮುಖ ಬೆಳವಣಿಗೆಗೆ ಶ್ಯಾಮನೂರು ಶಿವಶಂಕರಪ್ಪ ಕಾರಣ: ಸದನದಲ್ಲಿ ಸಂತಾಪ ಸಲ್ಲಿಸಿದ ಸಿಎಂ
ದಾವಣಗೆರೆ ಜಿಲ್ಲೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಿದ್ದರೆ ಅದಕ್ಕೆ ಶ್ಯಾಮನೂರು ಶಿವಶಂಕರಪ್ಪ ಅವರು ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆಯಲ್ಲಿ ಮಂಡಿಸಲಾದ ಸಂತಾಪ ಸೂಚನಾ
ಮೈ ಕೊರೆಯುವ ಚಳಿಗೆ ಬೀದರ್ ಥಂಡಾ, ಜನವರಿಯಲ್ಲಿ 5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ?
ಮೈಕೊರೆಯುವ ಚಳಿಗೆ ಬೀದರ್ ಜಿಲ್ಲೆಯ ಜನರು ತತ್ತರಿಸಿದ್ದಾರೆ, ಇಲ್ಲಿ ಕನಿಷ್ಠ ತಾಪಮಾನ ತೀವ್ರ ಕುಸಿತವಾಗಿದ್ದು, 7.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಜನ ಹೈರಾಣಾಗಿದ್ದಾರೆ. ಜನವರಿ ತಿಂಗಳಲ್ಲಿ ಇನ್ನಷ್ಟು ಚಳಿ ಇರಲಿದ್ದು, 5 ಡಿಗ್ರಿ ವರೆಗೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ
ತುರುವೇಕೆರೆ ದೇಗುಲ ಹುಂಡಿ ಹಣ, ದೇವರ ಸರ ಕಳವು
ತುರುವೇಕೆರೆ ತಾಲೂಕಿನ ಅರೆಹಳ್ಳಿಯಲ್ಲಿರುವ ಬಸವೇಶ್ವರ ಸ್ವಾಮಿಯ ಕತ್ತು ಅಲಂಕರಿಸಿದ್ದ 500 ಗ್ರಾಂ ತೂಕದ ಬೆಳ್ಳಿಯ ಸರ ಮತ್ತು ದೇವಾಲಯದ ಹುಂಡಿಯಲ್ಲಿದ್ದ 10 ಸಾವಿರರೂಪಾಯಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಅರೆಹಳ್ಳಿ ಗ್ರಾಮ ದೇವರಾಗಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಅರ್ಚಕರಾಗಿರುವ ರುದ್ರೇಶ್ ಬೆಳಗ್ಗೆ ಪೂಜೆಗಾಗಿ
ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆಯಲ್ಲಿ ಇಂದು ಸಂಜೆ ಅಂತ್ಯಸಂಸ್ಕಾರ
ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ, ಶಾಸಕ ಶಾಮನೂರು ಶಿವಶಂಕರಪ್ಪ ಭಾನುವಾರ ನಿಧನರಾದರು. ಅವರಿಗೆ 94 ವರ್ಷ ಆಗಿತ್ತು. ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಂತ್ಯಸಂಸ್ಕಾರ ದಾವಣಗೆರೆಯಲ್ಲಿ ಇಂದು ಸಂಜೆ ನಡೆಯಲಿದೆ. ಅವರ ನಿಧನ ಪ್ರಯುಕ್ತ ಗೌರವಾರ್ಥವಾಗಿ ಡಿ.
ರಾಮನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ರಾಮನಗರದ ಹಾರೋಹಳ್ಳಿ ತಾಲೂಕಿನ ದುಮ್ಮಸಂದ್ರ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿದ್ದಾರೆ. ರೈತ ಪುಟ್ಟಮಾದೇಗೌಡ (48) ಆನೆ ದಾಳಿಗೆ ಬಲಿಯಾದವರು. ಮುಂಜಾನೆ ಜಮೀನಿಗೆ ನೀರು ಹಾಯಿಸಲು ಹೋಗುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಮಾದೇಗೌಡ ಸ್ಥಳದಲ್ಲೇ ಅಸು ನೀಗಿದ್ದಾರೆ. ಬನ್ನೇರುಘಟ್ಟ ಅರಣ್ಯ
ಬೇರೆ ಯುವತಿ ಜೊತೆ ಮದುವೆ: ಮಂಟಪಕ್ಕೆ ಬಂದು ತನ್ನನ್ನೇ ಮದುವೆಯಾಗುವಂತೆ ಹಠ ಹಿಡಿದ ಪ್ರೇಯಸಿ
ಚಿಕ್ಕಮಗಳೂರಿನ ದೊಡ್ಡೇಗೌಡ ಕನ್ವೆನ್ಷನ್ ಹಾಲ್‌ನಲ್ಲಿ ಯುವಕ ಮದುವೆಯಾಗುತ್ತಿದ್ದಾಗ ಮಂಟಪಕ್ಕೆ ಬಂದ ಆತನ ಪ್ರೇಯಸಿ, ನಾನು ಇವನನ್ನೇ ಮದುವೆಯಾಗಬೇಕು.ಮದುವೆ ಆಗುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ, ವಿಷ ಕುಡಿದು ಸಾಯುತ್ತೇನೆ ಎಂದು ಗಲಾಟೆ ಮಾಡಿದ್ದಾಳೆ. ಈತ 10 ವರ್ಷ ಪ್ರೀತಿಸಿ ಮೋಸ ಮಾಡಿದ್ದಾನೆಂದು ಯುವತಿ




