Menu

ಕುಮಾರಸ್ವಾಮಿ  ಬಿಡದಿ ಟೌನ್ ಶಿಪ್ ಯೋಜನೆ ಚರ್ಚೆಗೆ ಬರಲಿ: ಡಿಕೆ ಶಿವಕುಮಾರ್ 

ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಕುಮಾರಸ್ವಾಮಿ ಜತೆ ಚರ್ಚೆಗೆ ಸಿದ್ಧನಿದ್ದೇನೆ. ಈ ವಿಚಾರವನ್ನು ಎಲ್ಲಾ ಮಾಧ್ಯಮಗಳು ಕುಮಾರಸ್ವಾಮಿ ಅವರಿಗೆ ತಿಳಿಸಿ. ಅವರು ಮುಖ್ಯಮಂತ್ರಿಯಾಗಿ ದ್ದಾಲೇ ಅವರ ಸವಾಲನ್ನು ಸ್ವೀಕಾರ ಮಾಡಿದ್ದೇನೆ. ಈಗಲೂ  ಬಹಳ ನಮ್ರತೆಯಿಂದ ಸವಾಲು ಸ್ವೀಕಾರ ಮಾಡುತ್ತೇನೆ, ಚರ್ಚೆಗೆ ಬರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್  ಪ್ರತಿಸವಾಲು ಎಸೆದರು. ಕನಕಪುರದ ದೊಡ್ಡ ಆಲಹಳ್ಳಿಯಲ್ಲಿ ನಿರ್ಮಾಣವಾಗಿರುವ ನೂತನ ರಾಮಮಂದಿರದ ಉದ್ಘಾಟನಾ ಸಮಾರಂಭದ ಬಳಿಕ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಕನಕಪುರ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಹಿಳೆ ಶವ ಪತ್ತೆ

ಕನಕಪುರ ತಾಲೂಕಿನ ಬೆಟ್ಟೆಗೌಡನಪಾಳ್ಯದ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಪ್ರತಿಭಾ (29) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಇದು ಆಕಸ್ಮಿಕ ಸಾವೇ, ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ಅನುಮಾನ ಗಳು ವ್ಯಕ್ತವಾಗಿವೆ. ಹೊರ ವಲಯದಲ್ಲಿರುವ ತೋಟದ ಮನೆಯಲ್ಲಿ ಪ್ರತಿಮಾ ವಾಸವಾಗಿದ್ದರು.

ಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ಅವಕಾಶ: ಮುಖ್ಯಮಂತ್ರಿ‌ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ಅವಕಾಶವಿದೆ, ಕೌಶಲ್ಯವಿರುವ ಮಾನವ ಸಂಪನ್ಮೂಲ ಲಭ್ಯವಿದೆ  ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಹೇಳಿದ್ದಾರೆ.  ಮೈಸೂರು ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದಿಂದ ಗೌರವ ವಂದನೆ ಸ್ವೀಕರಿಸಿ ಮಾಧ್ಯಮದವರ ಜೊತೆ ಮಾತನಾಡಿದರು.‌ ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ನಲ್ಲಿ ಉಪಮುಖ್ಯಮಂತ್ರಿಗಳು

ಕೇಂದ್ರ ಕಾರಾಗೃಹದಲ್ಲಿ ಕೈ ಕೈ ಮಿಲಾಯಿಸಿದ ಕೈದಿಗಳು

ಶಿವಮೊಗ್ಗ : ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಎರಡು ಗುಂಪುಗಳ ಮಧ್ಯೆ ಜಗಳವಾಗಿದ್ದು, ಕೆಲವು ಕೈದಿಗಳ ಮೇಲೆ ಹಲ್ಲೆ ನಡೆದಿದೆ. ಶರಾವತಿ ವಿಭಾಗದ ಸೊಹೈಲ್ ಅಹ್ಮದ್ ಮತ್ತು ಮೊಹ್ಮದ್ ಜುನೈದ್ ಎಂಬುವವರು ಟವರ್ ವಿಭಾಗದ ಬಳಿ ಬಂದಾಗ ಅನ್ವರ್ ಎಂಬಾತನೊಂದಿಗೆ ಮಾತಿನ

ಯಾದಗಿರಿಯಲ್ಲಿ ಶಿಕ್ಷಕರು ಬೈದರೆಂದು ಬಾಲಕ ಆತ್ಮಹತ್ಯೆ

ಯಾದಗಿರಿಯಲ್ಲಿ ಶಿಕ್ಷಕರು ಬೈದರೆಂದು ಮನ ನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶಾಲೆಯ ಮುಖ್ಯ ಶಿಕ್ಷಕ ಸೇರಿ 6 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಪವನ್ (15) ಆತ್ಮಹತ್ಯೆ ಮಾಡಿಕೊಂಡ ಒಂಬತ್ತನೇ ತರಗತಿಯ ವಿದ್ಯಾರ್ಥಿ.

ಶಿಕಾರಿಪುರದಲ್ಲಿ ಕರಡಿ ದಾಳಿ: ತೀವ್ರ ಗಾಯಗೊಂಡ ಕೃಷಿಕ

ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮ ಸಮೀಪದ ಗಂಗವ್ವನ ಸರ ಮೀಸಲು ಅರಣ್ಯ ಪ್ರದೇಶದಲ್ಲಿ ಹಾರೋಗೊಪ್ಪ‌ ಗ್ರಾಮದ ಕೃಷಿಕ ಸೋಮ್ಲನಾಯ್ಕ(60) ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ. ರೈತ  ಸೋಮ್ಲನಾಯ್ಕ  ಜಮೀನಿನಲ್ಲಿ ಅಳವಡಿಸಿದ್ದ ಮೋಟರ್ ಆನ್​ ಮಾಡಲು  ಹೋಗಿದ್ದಾಗ ಕರಡಿ

ಬಳ್ಳಾರಿಯಿಂದ ಗುಜರಾತ್ ಗೆ ಅಕ್ರಮವಾಗಿ ಸಾಗಿಸುತ್ತಿದ್ದ 523 ಚೀಲ ಪಡಿತರ ಅಕ್ಕಿ ವಶ

ಬಳ್ಳಾರಿಯಿಂದ  ಗುಜರಾತ್‌ಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 523 ಚೀಲ ಪಡಿತರ ಅಕ್ಕಿಯನ್ನು ಸಹಾಯಕ ಆಯುಕ್ತ ರಾಜೇಶ್ ಹೆಚ್. ಡಿ  ತಂಡ ಎಸ್.ಎಲ್.ಎನ್ ಮಾಲ್ ಬಳಿ ಇರುವ ಪುಲ್ಲಯ್ಯ ಕಾಂಪೌಂಡನ ಒಳ ಆವರಣದಲ್ಲಿ ತಡೆ ಹಿಡಿದಿದೆ. ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಅಡ್ಡೆ

ಇಂದಿರಾನಗರದಲ್ಲಿ ‘ಒರಿಜಿನಲ್‌ ಮೈಲಾರಿ ಹೋಟೆಲ್‌-1938’ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರಿನ ಐತಿಹಾಸಿಕ ರುಚಿಯನ್ನು ಹೊತ್ತು ಬಂದಿರುವ ಪ್ರಸಿದ್ಧ ‘ಒರಿಜಿನಲ್ ವಿನಾಯಕ ಮೈಲಾರಿ-1938’ (Old Original Vinayaka Mylari) ಹೋಟೆಲ್‌ನ ಬೆಂಗಳೂರು ಶಾಖೆಗೆ ಮುಖ್ಯಮಂತ್ರಿ  ಸಿದ್ದರಾಮಯ್ಯ  ಚಾಲನೆ ನೀಡಿದರು. ಇಂದಿರಾನಗರದ 80 ಅಡಿ ರಸ್ತೆಯಲ್ಲಿ ನಡೆದ ಸಮಾರಂಭದಲ್ಲಿ ಹೋಟೆಲ್ ಉದ್ಘಾಟಿಸಿದ  ಸಿಎಂ ಸಿದ್ದರಾಮಯ್ಯ

ಬೈಲಹೊಂಗಲದಲ್ಲಿ ಮಕ್ಕಳಾಗಿಲ್ಲವೆಂದು ಹೆಂಡತಿಯ ಕಿರಿಕಿರಿ: ಕೊಲೆಗೈದು ಹೃದಯಾಘಾತ ಕತೆ ಕಟ್ಟಿದ ಗಂಡ

ಬೆಳಗಾವಿಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮದುವೆ ಆಗಿ ಮೂರು ವರ್ಷ ಕಳೆದರೂ ಮಕ್ಕಳಾಗಿಲ್ಲವೆಂದು ಕಾಟ ಕೊಡುತ್ತಿದ್ದ ಹೆಂಡತಿಯನ್ನು ಗಂಡನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪತ್ನಿ ರಾಜೇಶ್ವರಿ (21) ಕೊಲೆಯಾಗಿದ್ದು, ಪತಿ ಫಕೀರಪ್ಪ ಗಿಲಕ್ಕನವರ ಕೊಲೆ ಆರೋಪಿ. ಪತ್ನಿಯನ್ನು

ಖಾನಾಪುರ ಕಾಡಂಚಿನ ಸಮುದಾಯಗಳ ಬದುಕು: ‘ಉದಯಕಾಲ’ ಕಳಕಳಿಗೆ ಡಿಸಿ ಮೆಚ್ಚುಗೆ, ಜ.28ಕ್ಕೆ ವಿಶೇಷ ಸಭೆ

ಖಾನಾಪುರದ  ಕಾಡಂಚಿನ ಸಮುದಾಯಗಳ ಬದುಕಿಗೆ ಆಶಾಕಿರಣ ಗೋಚರಿಸಿದ್ದು,  ಜನೆವರಿ 28ಕ್ಕೆ ಅಧಿಕಾರಿಗಳ ವಿಶೇಷ ಸಭೆ ನಡೆಯಲಿದೆ.ಹಕ್ಕಿ-ಪಿಕ್ಕಿ, ಕಾತಕರಿ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ,  ‘ಉದಯಕಾಲ’ ದಿನಪತ್ರಿಕೆಯ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಖಾನಾಪುರ ತಾಲೂಕಿನ ನಂದಗಡ ಭಾಗದ ಕಾಡಂಚಿನಲ್ಲಿ ವಾಸಿಸುತ್ತಿರುವ ಹಕ್ಕಿ-ಪಿಕ್ಕಿ