ಜಿಲ್ಲಾ ಸುದ್ದಿ
ಮಹದೇಶ್ವರ ಬೆಟ್ಟಕ್ಕೆ ಭಕ್ತರ ಪಾದಯಾತ್ರೆ: ಸಮಗ್ರ ರಕ್ಷಣಾ ವ್ಯವಸ್ಥೆಗೆ ಡಿಕೆ ಶಿವಕುಮಾರ್ ಆದೇಶ
-ಹೇಮಂತ್ ಗೌಡ, ಕನಕಪುರ ಮಲೈ ಮಹದೇಶ್ವರ ಬೆಟ್ಟ—ಭಕ್ತಿಭಾವ, ತ್ಯಾಗ ಮತ್ತು ನಂಬಿಕೆಯ ಸಂಕೇತ. ಪ್ರತಿವರ್ಷ ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಈ ಪವಿತ್ರ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಾರೆ. ಆದರೆ ಈ ಭಕ್ತಿಪೂರ್ಣ ಪಯಣದ ನಡುವೆ ಆಗಾಗ ಸಂಭವಿಸುವ ಅವಘಡಗಳು ಭಕ್ತರಲ್ಲಿ ಆತಂಕ ಮೂಡಿಸುತ್ತಿವೆ. ಭಕ್ತರ ಸುರಕ್ಷತೆ ಕುರಿತ ಆತಂಕದ ನಡುವೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಾದಯಾತ್ರೆಗೆ ಸಮಗ್ರ ರಕ್ಷಣಾ ವ್ಯವಸ್ಥೆ ಮಾಡಲು ಬೆಂಗಳೂರು
ಅನ್ಯ ಸಮುದಾಯದವನ ಪ್ರೀತಿ: ಕೊಟ್ಟೂರಿನಲ್ಲಿ ತಂದೆ, ತಾಯಿ, ಗರ್ಭಿಣಿ ಸೋದರಿ ಹತ್ಯೆಗೆ ಕಾರಣ
ವಿಜಯನಗರದ ಕೊಟ್ಟೂರಿನಲ್ಲಿ ತಂದೆ, ತಾಯಿ, ಸೋದರಿಯ ಹತ್ಯೆ ಪ್ರಕರಣ ತನಿಖೆ ಕೈಗೊಂಡಿದ್ದ ಪೊಲೀಸರು ಈ ಭೀಕರ ಕೊಲೆಗೆ ಕಾರಣವೇನು ಎಂಬುದನ್ನು ಬಯಲಿಗೆಳೆದಿದ್ದಾರೆ. ತಂಗಿ ಅನ್ಯ ಸಮುದಾಯದವನನ್ನು ಪ್ರೀತಿಸುತ್ತಿದ್ದು, ಗರ್ಭಿಣಿಯಾ ಗಿರುವ ಕಾರಣಕ್ಕೆ ಕುಟುಂಬದ ಗೌರವ ಉಳಿಸಲು ಮೂವರನ್ನೂ ಕೊಲೆ ಮಾಡಿದ್ದಾಗಿ ಆರೋಪಿ
ಫೆ. 6ರಿಂದ 8ರವರೆಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ; ರೈತರ ಶ್ರಮಕ್ಕೆ ಸರಿಯಾದ ಮೌಲ್ಯ ಸಿಗಬೇಕು ಹಾಗೂ ಆದಾಯ ದ್ವಿಗುಣಗೊಳ್ಳಬೇಕು ಎಂಬ ಉದ್ದೇಶದೊಂದಿಗೆ ಕೃಷಿ ಇಲಾಖೆಯ ನೇತೃತ್ವದಲ್ಲಿ ಅಂತರರಾಷ್ಟ್ರೀಯ ವಾಣಿಜ್ಯ ಮೇಳ–2026 (ITF–2026) ಅನ್ನು ಫೆಬ್ರವರಿ 6, 7 ಮತ್ತು 8ರಂದು ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಈ
ಕೊಟ್ಟೂರಿನಲ್ಲಿ ತಂದೆ, ತಾಯಿ, ಸೋದರಿಯ ಕೊಲೆ ಮಾಡಿ ನಾಪತ್ತೆ ದೂರು
ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ತಂದೆ, ತಾಯಿ ಮತ್ತು ಸಹೋದರಿಯನ್ನು ವ್ಯಕ್ತಿ ಕೊಲೆ ಮಾಡಿ ನಾಪತ್ತೆ ಎಂದು ದೂರು ದಾಖಲಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಸತ್ಯ ತಿಳಿದ ಕೊಟ್ಟೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಕ್ಷಯ ಕುಮಾರ ಕೊಲೆ ಮಾಡಿದ
ಗುಂಡ್ಲುಪೇಟೆಯಲ್ಲಿ ವ್ಯಕ್ತಿ ಮೇಲೆ ಚಿರತೆ ದಾಳಿ
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ. ರಾಜಶೇಖರಪ್ಪ ಚಿರತೆ ದಾಳಿಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ದಾಳಿಯಿಂದ ಅವರ ಮುಖ ಹಾಗೂ ಕತ್ತಿನ ಭಾಗಕ್ಕೆ ಗಾಯಗಳಾಗಿವೆ. ಧೈರ್ಯದಿಂದ ಚಿರತೆ ದಾಳಿಯನ್ನು ಎದುರಿಸಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು 56.78 ಲಕ್ಷ ರೂ. ವಂಚನೆ
ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮರ್ಕೆಂಟೈಲ್ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು 56.78 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬಯಲಾಗಿದೆ. ಬ್ಯಾಂಕ್ ಸಿಬ್ಬಂದಿ ಸುರೇಶ್ ಕಣ್ಣನ್ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಏಳು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೈಸೂರಿನ
ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವಂತೆ ಬಿಜಿಪಿ ಸಂಸದರು: ಡಿಕೆ ಶಿವಕುಮಾರ್
ಕೇಂದ್ರ ಸರ್ಕಾರದಿಂದ ಬಜೆಟ್ ಅಲ್ಲಿ ಕರ್ನಾಟಕಕ್ಕೆ ಯಾವಾಗಲೂ ಮಲತಾಯಿ ಧೋರಣೆ ಮಾಡಲಾಗುತ್ತಿದೆ. ಇದರ ಬಗ್ಗೆ ಬಿಜೆಪಿ ಸಂಸದರು, ಕೇಂದ್ರ ಸಚಿವರು ಯಾರೂ ದನಿ ಎತ್ತಿಲ್ಲ. ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು. ಶಿವಮೊಗ್ಗ
ಬಿಸಿಯೂಟದಲ್ಲಿ ಹಲ್ಲಿ: 50ಕ್ಕೂ ಅಧಿಕ ಮಕ್ಕಳು ಅಸ್ವಸ್ಥ, ಮನೆಯಲ್ಲಿ ಹೇಳದಂತೆ ಶಿಕ್ಷಕರ ಸೂಚನೆ
ಯಲಬುರ್ಗಾ ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದಲ್ಲಿ ಗುರುವಾರ ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿದ್ದಾರೆ. ಶಾಲೆ ಮುಗಿಸಿ ವಿದ್ಯಾರ್ಥಿಗಳು ಮನೆಗೆ ಬರುತ್ತಿದ್ದಂತೆ ಸುಸ್ತಾಗಿದ್ದನ್ನು ಗಮನಿಸಿ ಕೇಳಿದಾಗ ವಿದ್ಯಾರ್ಥಿಗಳು ಪಾಲಕರ ಬಳಿ ಹೇಳಿದ್ದಾರೆ,
ಸಾಗರ ಮಾರಿಕಾಂಬ ಜಾತ್ರೆ: ತಾಳಗುಪ್ಪದವರೆಗೆ ರೈಲು ವಿಸ್ತರಣೆಗೆ ಸಚಿವರ ಸಮ್ಮತಿ
ಸಾಗರದಲ್ಲಿ ಮಾರಿಕಾಂಬ ದೇವಿ ಜಾತ್ರೆ ಹಿನ್ನೆಲೆ ಭಕ್ತರ ಅನುಕೂಲಕ್ಕಾಗಿ ಯಶವಂತಪುರ – ಶಿವಮೊಗ್ಗ ನಡುವೆ ಸಂಚರಿಸುವ ರಾತ್ರಿ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ. ಮಾರಿಕಾಂಬ ಜಾತ್ರೆಯು ಫೆಬ್ರವರಿ 3ರಿಂದ 11ರ ವರೆಗೆ ನಡೆಯಲಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ
ಮದುವೆಯಾಗಿ ಹಣ ದೋಚಿ ತೊರೆಯುವುದೇ ಆಕೆಯ ಉದ್ಯೋಗ: ಸಂತ್ರಸ್ತ ಪತಿಯರ ದೂರು
ಪ್ರೀತಿ, ಮದುವೆ ಎಂದು ಪುರುಷರನ್ನು ನಂಬಿಸಿ ಅವರಿಂದ ಬೇಕಾಬಿಟ್ಟಿ ಹಣ ದೋಚಿಕೊಂಡು ಬಳಿಕ ತೊರೆದು ಹೋಗುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ದೊಡ್ಡಬಳ್ಳಾಪುರ ಮಹಿಳೆ ವಿರುದ್ಧ ಸಂತ್ರಸ್ತರು ದೂರು ನೀಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಹೀಗೆ ವಂಚಿಸುತಿರುವ ಆರೋಪಿ ಎನ್ನಲಾಗಿದೆ. ಆಕೆಯ




