Saturday, September 19, 2026
Menu

ಸಾಗರ ಮಾರಿಕಾಂಬ ಜಾತ್ರೆ: ತಾಳಗುಪ್ಪದವರೆಗೆ ರೈಲು ವಿಸ್ತರಣೆಗೆ ಸಚಿವರ ಸಮ್ಮತಿ

ಸಾಗರದಲ್ಲಿ ಮಾರಿಕಾಂಬ ದೇವಿ ಜಾತ್ರೆ ಹಿನ್ನೆಲೆ ಭಕ್ತರ ಅನುಕೂಲಕ್ಕಾಗಿ ಯಶವಂತಪುರ – ಶಿವಮೊಗ್ಗ ನಡುವೆ ಸಂಚರಿಸುವ ರಾತ್ರಿ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ. ಮಾರಿಕಾಂಬ ಜಾತ್ರೆಯು ಫೆಬ್ರವರಿ 3ರಿಂದ 11ರ ವರೆಗೆ ನಡೆಯಲಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ನೆಲೆಸಿರುವ ಭಕ್ತರಿಗಾಗಿ ತಾಳಗುಪ್ಪದವರೆಗೆ ವಿಶೇಷ ರೈಲನ್ನು ಬಿಡುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಚಿವರು ವಿಶೇಷ ರೈಲು

ಮದುವೆಯಾಗಿ ಹಣ ದೋಚಿ ತೊರೆಯುವುದೇ ಆಕೆಯ ಉದ್ಯೋಗ: ಸಂತ್ರಸ್ತ ಪತಿಯರ ದೂರು

ಪ್ರೀತಿ, ಮದುವೆ ಎಂದು ಪುರುಷರನ್ನು ನಂಬಿಸಿ ಅವರಿಂದ ಬೇಕಾಬಿಟ್ಟಿ ಹಣ ದೋಚಿಕೊಂಡು ಬಳಿಕ ತೊರೆದು ಹೋಗುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ದೊಡ್ಡಬಳ್ಳಾಪುರ ಮಹಿಳೆ ವಿರುದ್ಧ ಸಂತ್ರಸ್ತರು ದೂರು ನೀಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಹೀಗೆ ವಂಚಿಸುತಿರುವ ಆರೋಪಿ ಎನ್ನಲಾಗಿದೆ. ಆಕೆಯ

ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು: ಡಿಕೆ ಶಿವಕುಮಾರ್‌

ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಯಾವುದೇ ಧರ್ಮ ಬೇರೆಯವರಿಗೆ ತೊಂದರೆ ಮಾಡು ಎಂದು ಹೇಳುವುದಿಲ್ಲ. ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದ, ಜ್ಞಾನ ಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತ. ಎಲ್ಲರಿಗೂ ಮಂಗಳವಾಗಲಿ, ಶುಭವಾಗಲಿ, ಆರೋಗ್ಯವಾಗಿರಲಿ ಎಂದು

ಕಿಮ್ಸ್ ಅಧಿಕಾರಿ ಕಲ್ಲೇಶ್ ನಿವಾಸ, ಕಾಲೇಜ್ ಸೇರಿ ಆರು ಕಡೆ ಲೋಕಾಯುಕ್ತ ದಾಳಿ

ಕೊಪ್ಪಳ: ವಾಲ್ಮೀಕಿ‌ ನಿಗಮದ ಹಗರಣದಲ್ಲಿ ಸುದ್ದಿಯಾಗಿದ್ದ ಪ್ರಸ್ತುತ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಡಳಿತಾಧಿಕಾರಿ ಬಿ.ಕಲ್ಲೇಶ್ ಅವರ ಮನೆ ಹಾಗೂ ಭಾಗ್ಯನಗರದ ಯತ್ನಟ್ಟಿ ರಸ್ತೆಯ ನವಚೇತನ ಪಿಯು ವಿಜ್ಞಾನ ಕಾಲೇಜು ಸೇರಿದಂತೆ ಆರು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಶುಕ್ರವಾರ

ಅಡುಗೆ ಅನಿಲ‌ ಸೋರಿಕೆಯಾಗಿ ಬೆಂಕಿ, ಮನೆ ಮಾಲೀಕನಿಗೆ ಗಾಯ

ಮನೆಯಲ್ಲಿ ಅಡುಗೆ ಅನಿಲದ ಸಿಲಿಂಡರ್ ಸೋರಿಕೆಯಾಗಿ  ಹೊತ್ತಿದ ಬೆಂಕಿಗೆ ಮನೆ ಮಾಲೀಕ ಮಲ್ಲಿಕಾರ್ಜುನ್ ತೀವ್ರವಾಗಿ  ಗಾಯಗೊಂಡಿರುವ ಘಟನೆ  ಶಿವಮೊಗ್ಗ ಶಿಕಾರಿಪುರ ಪಟ್ಟಣದ ಕುಂಬಾರಗುಂಡಿ ಬಡಾವಣೆಯಲ್ಲಿ ನಡೆದಿದೆ. ಮನೆಗೆ ಬಂದ ಅಡುಗೆ ಅನಿಲ ಸಿಲಿಂಡರ್ ಅನ್ನು ಮಲ್ಲಿಕಾರ್ಜುನ್ ಹಾಗೂ ಅವರ ಪತ್ನಿ ಸ್ಟವ್‌ಗೆ

ಸುಳ್ವಾಡಿ ವಿಷಪ್ರಸಾದ ಆರೋಪಿ ಮಹದೇವಸ್ವಾಮಿಗೆ ಮಲೆ ಮಹದೇಶ್ವರ ಬೆಟ್ಟ ಪ್ರವೇಶವಿಲ್ಲ

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿ ಮಲೆ ಮಹದೇಶ್ವರ ಬೆಟ್ಟ ಪ್ರವೇಶಿಸುವುದನ್ನು ನಿಷೇಧಿಸಿ ಹನೂರು ತಹಸೀಲ್ದಾರ್ ಚೈತ್ರಾ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಆದೇಶವು ಇಂದಿನಿಂದ ಮುಂದಿನ

ಹಲವು ಯುವತಿಯರೊಂದಿಗೆ ಸೆಕ್ಸ್‌ ವೀಡಿಯೊ ವೈರಲ್‌: ಮಡಿಕೇರಿಯ ಯುವಕ ಅರೆಸ್ಟ್‌

ಯುವಕನೊಬ್ಬ ಹಲವು ಯುವತಿಯರೊಂದಿಗೆ ಸೆಕ್ಸ್‌ ಮಾಡಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಮೊಹಮ್ಮದ್ ಸವದ್ ಎಂಬಾತನನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮೊಹಮ್ಮದ್ ಸವದ್ ಬೆಂಗಳೂರಿನ ಸಂಪಿಗೆಹಳ್ಳಿಯ

ಶೆಟ್ಟಿಹಳ್ಳಿ ಅಭಯಾರಣ್ಯ ಡಿನೋಟಿಫಿಕೇಷನ್, ಶರಾವತಿ ಸಂತ್ರಸ್ತರಿಗೆ ಪರಿಹಾರ: ತೀರ್ಮಾನ ಅಂತಿಮ ಘಟ್ಟದಲ್ಲಿ ಎಂದ ಸಚಿವ ಖಂಡ್ರೆ

ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂಪತ್ತು ರಕ್ಷಣೆ ಮತ್ತು ಜನರ ಅಭಿವೃದ್ದಿಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದು ಶೆಟ್ಟಿಹಳ್ಳಿ ಅಭಯಾರಣ್ಯ ಡಿನೋಟಿಫಿಕೇಷನ್ ಮತ್ತು ಶರಾವತಿ ಸಂತ್ರಸ್ತರಿಗೆ ಪರಿಹಾರ ಕುರಿತಾದ ತೀರ್ಮಾನಗಳು ಅಂತಿಮ ಘಟ್ಟ ತಲುಪಿವೆ ಎಂದು ಅರಣ್ಯ ಜೀವಶಾಸ್ತ್ರ ಮತ್ತು

ಧಾರವಾಡ ಹಾಸ್ಟೆಲ್‌ನಲ್ಲಿ ಮೆಡಿಕಲ್​​ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆ

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (DIMHANS)ಯ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್‌ನಲ್ಲಿ  ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ಡಾ. ಪ್ರಜ್ಞಾ ಪಾಲೇಗರ್ (24) ಆತ್ಮಹತ್ಯೆ ಮಾಡಿಕೊಂಡವರು. ಡಾ. ಪ್ರಜ್ಞಾ ಡಿಮ್ಹಾನ್ಸ್ ಸಂಸ್ಥೆಯಲ್ಲಿ ಮನೋವೈದ್ಯಶಾಸ್ತ್ರ ವಿಭಾಗದ ಪ್ರಥಮ

ಮಂಗನಕಾಯಿಲೆಗೆ ತೀರ್ಥಹಳ್ಳಿ ಯುವಕ ಬಲಿ

ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕಟಗಾರು ಗ್ರಾಮದ 29 ವರ್ಷದ ಯುವಕ ಮಂಗನಕಾಯಿಲೆ (ಕೆಎಫ್ ಡಿ)ಯಿಂದ ಮೃತಪಟ್ಟಿದ್ದಾರೆ.   ಸೋಂಕಿನಿಂದಾಗಿ  ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಕಳೆದ ಭಾನುವಾರದಿಂದ  ಮಣಿಪಾಲ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದರೂ ಫಲಕಾರಿಯಾಗದೆ ಅಸು ನೀಗಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಯು ಈಗಾಗಲೇ