Saturday, September 19, 2026
Menu

ಕೆವೈ ನಂಜೇಗೌಡರೇ ಮಾಲೂರು ಶಾಸಕ: ಸುಪ್ರೀಂಕೋರ್ಟ್

ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರುಎಣಿಕೆಯಲ್ಲಿ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಅವರಿಗೆ ಹೆಚ್ಚು ಮತಗಳು ಬಂದಿವೆ. ನಂಜೇಗೌಡಗೆ 50,957 ಮತಗಳು ಬಂದಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಮಂಜುನಾಥಗೌಡಗೆ 50,707 ಮತಗಳು ಬಂದಿವೆ. ಹೀಗಾಗಿ ನಂಜೇಗೌಡ ಅವರೇ ಮಾಲೂರು ಕ್ಷೇತ್ರದ ಶಾಸಕರಾಗಿ ಮುಂದುವರಿಯುತ್ತಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. 2023ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ವಿರುದ್ಧ ಕಾಂಗ್ರೆಸ್​​ನ ಕೆ.ವೈ.ನಂಜೇಗೌಡ 248 ಮತಗಳ ಅಂತರದಲ್ಲಿ ಗೆದ್ದಿದ್ದರು. ಮತ ಎಣಿಕೆಯಲ್ಲಿ ಲೋಪವಾಗಿದೆ

ಉಡುಪಿಯ ಯುವಕ ಅಬುಧಾಬಿಯಲ್ಲಿ ಖರೀದಿಸಿದ ಟಿಕೆಟ್‌ಗೆ ಬಂತು 49 ಕೋಟಿ ರೂ.

ಉಡುಪಿಯ ಯುವಕನೊಬ್ಬ ಸ್ನೇಹಿತನೊಂದಿಗೆ ಸೇರಿ ಖರೀದಿಸಿದ ಅಬುಧಾಬಿಯ ಲಕ್ಕಿ ಡ್ರಾನಲ್ಲಿ 49 ಕೋಟಿ ರೂ. ಬಹುಮಾನ ಲಭಿಸಿದೆ. ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗಾರ್ ಬಹುಮಾನ ವಿಜೇತರಾಗಿದ್ದು, 20 ಮಿಲಿಯನ್ ದಿರಮ್‌ ಬಹುಮಾನ ಸಿಕ್ಕಿದೆ. ಅಬುಧಾಬಿಯಲ್ಲಿ ಬಿಗ್ ಟಿಕೆಟ್

ಬೆಳೆದ ಮೂಲಂಗಿಯನ್ನೇ ಅಧಿಕಾರಿಗಳಿಗೆ ಲಂಚ ಕೊಡಲು ಮುಂದಾದ ತುಮಕೂರು ರೈತ

ತುಮಕೂರಿನಲ್ಲಿ ಜಮೀನಿಗೆ ರಸ್ತೆ ಮಾಡಿಕೊಡುವಂತೆ ಲೋಕಾಯುಕ್ತರೇ ಸೂಚಿಸಿದ್ದರೂ ಕಂದಾಯ ಅಧಿಕಾರಿಗಳು ಲಂಚಕ್ಕಾಗಿ ಅಲೆದಾಡಿಸುತ್ತಿರುವುದರಿಂದ ಅಕ್ರೋಶಗೊಂಡ ರೈತರೊಬ್ಬರು ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ಮುಂದಾದ ಘಟನೆ ನಡೆದಿದೆ. ಮಧುಗುರಿ ತಾಲೂಕಿನ ದೊಡ್ಡರಿ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ಎಂಬವರು ತಾಲೂಕು ಕಚೇರಿ

ಹಿಂದೂ ಮಹಿಳೆಯ ಮನೆಯಲ್ಲಿದ್ದ ಯುವ ಕಾಂಗ್ರೆಸ್ ಮುಖಂಡನಿಗೆ ಸ್ಥಳೀಯರಿಂದ ಹಲ್ಲೆ

ಚಿಕ್ಕಮಗಳೂರಿನ ಗಾಂಧಿನಗರದಲ್ಲಿ  ಒಂಟಿಯಾಗಿರುವ ವಿವಾಹಿತ ಹಿಂದೂ ಮಹಿಳೆಯ ಮನೆಯಲ್ಲಿದ್ದ ಯುವ ಕಾಂಗ್ರೆಸ್ ಮುಖಂಡನ ಮೇಲೆ ಸ್ಥಳೀಯ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಹಿಲ್ ಶರೀಫ್ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾತ್ರಿ ಮಹಿಳೆಯ ಮನೆಗೆ ರಾಹಿಲ್

ಮೈಲಾರದಲ್ಲಿ “ಸಂಪಾಯಿತಲೇ ಪರಾಕ್” ಕಾರ್ಣಿಕೋತ್ಸವ ವಾಣಿ

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರದಲ್ಲಿ ಕಾರ್ಣಿಕೋತ್ಸವ ಅದ್ಧೂರಿಯಾಗಿ ಬುಧವಾರ ನೆರವೇರಿದ್ದು, ಸಂಪಾಯಿತಲೇ ಪರಾಕ್ ಎಂದು ಗೊರವಯ್ಯ ಭವಿಷ್ಯ ನುಡಿ ದಿದ್ದು, ಭಕ್ತರು ಜಯಘೋಷ ಹಾಕಿದ್ದಾರೆ. ಕಷ್ಟಗಳೆಲ್ಲ ಕಳೆದು ಒಳ್ಳೆ ದಿನಗಳು ಬರುತ್ತದೆಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಮೈಲಾರ ಲಿಂಗೇಶ್ವರನ ಸನ್ನಿಧಿಯಲ್ಲಿ

ರೋಣದಲ್ಲಿ ರಸ್ತೆ ಅಪಘಾತಕ್ಕೆ ಮೂವರು ಮಹಿಳೆಯರು ಬಲಿ

ಗದಗದ ರೋಣ ತಾಲೂಕಿನ ಜಿಗಳೂರ ಕ್ರಾಸ್ ಬಳಿ ಕ್ರೂಸರ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ರೈತ ಮಹಿಳೆಯರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಗಜೇಂದ್ರಗಡದ ಶಿವಾಜಿಪೇಟೆ ನಿವಾಸಿಗಳಾದ ಅನ್ನಪೂರ್ಣ (56), ಸಂಗೀತ ಹೊಸಮನಿ (48), ಮರಿಯಂಬೂ ಹುನಗುಂದ (55)

ಬೆಳಗಾವಿಯಲ್ಲಿ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ: ಅಪರಾಧಿಗಳಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ

ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಅಪರಾಧಿಗಳಿಗೆ ನ್ಯಾಯಾಲಯ ಐದು ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಬೆಳಗಾವಿ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ.ಎಚ್.ಎಸ್.ಮಂಜುನಾಥ ಅವರು ಅಪರಾಧಿಗಳಾದ ಬಸಪ್ಪ,

ಜಾತಕ ತೋರಿಸಲು ಹೋದರೆ ರೇಪ್‌: ಮೂಡಿಗೆರೆಯಲ್ಲಿ ಅರ್ಚಕನ ಬಂಧನ

ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಮದುವೆಯಾಗುತ್ತಿರುವ ಯುವತಿ ತನ್ನ ಜಾತಕ ತೋರಿಸಲು  ಹೋಗಿದ್ದ ಯುವತಿ ಮೇಲೆ ದೇವಸ್ಥಾನದ ಅರ್ಚಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಯುವತಿ ಬಣಕಲ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅರ್ಚಕ ಕೃಷ್ಣರಾವ್‌ ಎಂಬವರನ್ನು ಬಂಧಿಸಿದ್ದಾರೆ. ಆರೋಪಿ ಕೃಷ್ಣರಾವ್

ವ್ಯಕ್ತಿಯ ಕೊಲೆ: ಕಮಲಾಕರ ಭಟ್‌ ಸೇರಿ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಸಿದ್ದಾಪುರದಲ್ಲಿ ಅಕ್ರಮ ಸಂಬಂಧ ಬಯಲಾದ ಹಿನ್ನೆಲೆ ನಡೆದ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳಾದ ಸುಚಿತ್ರಾ, ಲೋಕನಾಥ್, ಕಮಲಾಕರ ಭಟ್ ಮತ್ತು ಆಕಾಶ್ ಎಂಬವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಸಿದ್ದಾಪುರ ಜೆಎಂಎಫ್​ಸಿ ಕೋರ್ಟ್​ ಆದೇಶ ಮಾಡಿದೆ. ಈ ಕೊಲೆ ಪ್ರಕರಣಕ್ಕೆ ಸಾರ್ವಜನಿಕ ವಲಯದಲ್ಲೂ

‘ಬಿತ್ತಿ ಬೆಳೆದ ಕೈ ಬಂಗಾರದ ಕಡಗ ತೊಟ್ಟಿತ್ತಲೇ ಪರಾಕ್’ ಹಾವನೂರು ಕಾರ್ಣಿಕೋತ್ಸವ ದೈವವಾಣಿ

‘ಬಿತ್ತಿ ಬೆಳೆದ ಕೈ ಬಂಗಾರದ ಕಡಗ ತೊಟ್ಟಿತ್ತಲೇ ಪರಾಕ್’ ಎಂದು ಹಾವನೂರು ಗ್ರಾಮದಲ್ಲಿ ಮೈಲಾರಲಿಂಗೇಶ್ವರ ದೇವರ ಕಾರ್ಣಿಕೋತ್ಸವದಲ್ಲಿ ಆನಂದ ಬಿಲ್ಲರ ಹೆಸರಿನ ಗೊರವಯ್ಯ ದೈವವಾಣಿ ನುಡಿದಿದ್ದಾರೆ. ‘ಬಿತ್ತಿ ಬೆಳೆದ ಕೈ ಬಂಗಾರದ ಕಡಗ ತೊಟ್ಟಿತ್ತಲೇ ಪರಾಕ್’ ಎಂಬ ದೈವವಾಣಿಯನ್ನು ಪ್ರಸ್ತಕ ವರ್ಷ