ಹಾಸನ
ಹಾಸನ ಕಾರ್ಖಾನೆಯ ಸಂಪ್‌ನಲ್ಲಿ ಉದ್ಯೋಗಿಯ ಮೃತದೇಹ ಪತ್ತೆ
ಹಾಸನ ಹೊರವಲಯದ ಹನುಮಂತಪುರ ಬಳಿಯ ಕಾರ್ಖಾನೆಯ ನೀರಿನ ಸಂಪ್‌ನಲ್ಲಿ ನಿಂತಿರುವ ಸ್ಥಿತಿಯಲ್ಲಿ ಅಲ್ಲಿನ ಉದ್ಯೋಗಿ ಯುವಕನ ಮೃತದೇಹ ಪತ್ತೆಯಾಗಿದೆ. ಕಳೆದ 6 ತಿಂಗಳಿನಿಂದ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಪುನೀತ್ (27) ಮೃತ ಯುವಕ. ಬುಧವಾರ ಸಮವಸ್ತ್ರ ಧರಿಸಿ ಪುನೀತ್ ಕೆಲಸಕ್ಕೆಂದು ಹೋಗಿದ್ದ. ರಾತ್ರಿ ಪುನೀತ್ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಂದು ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನದ ವೇಳೆ ಕಾರ್ಖಾನೆಯ ನೀರಿನ ಸಂಪ್‌ನಲ್ಲಿ ನಿಂತಿರುವ ಸ್ಥಿತಿಯಲ್ಲಿ ಪುನೀತ್
ಹಾಸನದಲ್ಲಿ ಎರಡು ಎಕರೆ ಆಸ್ತಿ ವಿವಾದ: ದಾಯಾದಿಗಳಿಂದ ವ್ಯಕ್ತಿ ಕೊಲೆ
ಹಾಸನದ ಆಲೂರು ತಾಲೂಕಿನ ರಾಜನಹಳ್ಳಿ ಸಮೀಪ ಎರಡು ಎಕರೆ ಆಸ್ತಿ ವಿವಾದ ತಾರಕಕ್ಕೆ ಏರಿ, ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಯನ್ನು ದಾಯಾದಿಗಳು ಸೇರಿ ಹತ್ಯೆ ಮಾಡಿದ್ದಾರೆ. ಕೆಎಸ್‌ಆರ್‌ಟಿಸಿ ಹಾಸನ ಡಿಪೋದಲ್ಲಿ ಚಾಲಕರಾಗಿದ್ದ ವೀರಪ್ಪ (58) ಹತ್ಯೆಯಾದವರು. ಕೋರ್ಟ್ ಕೇಸ್ ಮುಗಿಸಿ ಬಂದ ಬಳಿಕ
ಮದುವೆಗೆಂದು ಹೋಗಿ ನಾಪತ್ತೆಯಾಗಿದ್ದ ಮಹಿಳೆ ಪತಿಯ ಸ್ನೇಹಿತನೊಂದಿಗೆ ಪತ್ತೆ
ಮದುವೆಗೆಂದು ಬಂದಿದ್ದ ಮಹಿಳೆ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡು ಕುಣಿಗಲ್‌ನಲ್ಲಿ ಪುರುಷನೊಬ್ಬನ ಮನೆಯಲ್ಲಿ ಆಕೆಯನ್ನು ಪತ್ತೆ ಹಚ್ಚಿದ್ದಾರೆ. ಗುರುವಾರ ರಾತ್ರಿ ಕಾಣೆಯಾಗಿದ್ದ ಮಹಿಳೆ ಕುಣಿಗಲ್‌ನಲ್ಲಿ ಪತಿಯ ಸ್ನೇಹಿತನ ಮನೆಯಲ್ಲಿ ಪತ್ತೆಯಾಗಿದ್ದು, ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದೆ. ಸಿಸಿಟಿವಿ ದೃಶ್ಯಾವಳಿಆಧರಿಸಿ
ಮದುವೆಗೆಂದು ಚಿಕ್ಕಮಗಳೂರಿಗೆ ಬಂದಿದ್ದ ಮಹಿಳೆ ಕಣ್ಮರೆ, ರೇಪ್ ಅಂಡ್ ಮರ್ಡರ್ ಶಂಕೆ
ಹಾಸನದಿಂದ ಚಿಕ್ಕಮಗಳೂರಿಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ಬಂದಿದ್ದ ಮಹಿಳೆ ಕಣ್ಮರೆಯಾಗಿರುವ ಪ್ರಕರಣ ಬೇಲೂರು ತಾಲೂಕಿನ ಕಲ್ಕೆರೆ ಬಳಿ ನಡೆದಿದೆ. ಸ್ಥಳದಲ್ಲಿ ಆಕೆಯ ಒಳ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿರುವುದು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಅನುಮಾನ ಸೃಷ್ಟಿಸಿದೆ. ಈ ಪ್ರಕರಣದಲ್ಲಿ
ಅನುದಾನ ಲಭ್ಯತೆ ಅನುಸಾರ ಯಗಚಿ ಎಡದಂಡೆ ನಾಲೆಗಳಿಗೆ ಭೂಸ್ವಾಧೀನ: ಡಿಕೆ ಶಿವಕುಮಾರ್
ಅನುದಾನ ಲಭ್ಯತೆ ಅನುಸಾರ ಯಗಚಿ ಎಡದಂಡೆ ನಾಲೆಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸಭೆ ಗಮನ ಸೆಳೆವ ಸೂಚನೆ ವೇಳೆ ಬಿಜೆಪಿ ಶಾಸಕರಾದ ಸಿಮೆಂಟ್ ಮಂಜು ಅವರು ಯಗಚಿ ಜಲಾಶಯದ ಎಡದಂಡೆ ನಾಲೆಗಳ
ಹಾಸನದಲ್ಲಿ ಮಗನ ಚಿಕಿತ್ಸೆಗೆ ಸಾಲ ಪಡೆದಿದ್ದ ವೃದ್ಧ ದಂಪತಿ: ಮರು ಪಾವತಿಸಿಲ್ಲವೆಂದು ಮನೆ, ಕೊಟ್ಟಿಗೆಗೆ ಬೀಗ ಜಡಿದ ಫೈನಾನ್ಸ್
ತೆಗೆದುಕೊಂಡಿರುವ ಸಾಲ ಮರು ಪಾವತಿಸಿಲ್ಲವೆಂದು ಖಾಸಗಿ ಫೈನಾನ್ಸ್ ಸಿಬ್ಬಂದಿ ಮನೆಗೆ ಬೀಗ ಜಡಿದು ವೃದ್ಧ ದಂಪತಿಯನ್ನು ಹೊರ ಹಾಕಿರುವ ಘಟನೆಯೊಂದು ಹಾಸನದ ಅರಕಲಗೂಡು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ. ಸಾಲ ಕಟ್ಟಿಲ್ಲ ಎಂದು ಸಣ್ಣಯ್ಯ(80), ಜಯಮ್ಮ(75)ಅವರನ್ನು ಫೈನಾನ್ಸ್ ಸಿಬಂದಿ ಹೊರಹಾಕಿದ್ದು, ಅವರಿಬ್ಬರೂ
ಅರಸೀಕೆರೆ ಅಂಗಡಿಯಲ್ಲೇ ಕುಸಿದು ವ್ಯಾಪಾರಿ ಸಾವು
ಹಾಸನದ ಅರಸೀಕೆರೆ ಪಟ್ಟಣದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗಲೇ ಹಠಾತ್ ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ. ಪ್ರವೀಣ್ (45) ಮೃತ ವ್ಯಕ್ತಿ. ಅರಸೀಕೆರೆ ತಾಲೂಕಿನ ದುಮ್ಮೇನಹಳ್ಳಿ ಗ್ರಾಮದ ಪ್ರವೀಣ್ ಅರಸೀಕೆರೆ ಪಟ್ಟಣದಲ್ಲಿ ಅಟೊಮೊಬೈಲ್
ಶಬರಿಮಲೆಗೆ ಹೋಗಿ ಬಂದು ಪತ್ನಿಯ ಕೊಂದು ನದಿಗೆಸೆದ
ಹಾಸನದ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ಶಬರಿಮಲೆಗೆ ಹೋಗಿ ಬಂದ ದಿನವೇ ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆಗೈದು ಮೃತದೇಹವನ್ನು ನದಿಗೆ ಬಿಸಾಡಿದ್ದಾನೆ. ನಾಲ್ಕು ವರ್ಷದಿಂದ ವರ್ಷಗಳಿಂದ ಆತನಿಂದ ದೂರವಿದ್ದ ಪತ್ನಿ, ಇದ್ದಕ್ಕಿದ್ದಂತೆ ಗಂಡನ ಬಳಿ ಬಂದು ಎರಡನೇ ಮದುವೆ ಬಗ್ಗೆ ಪ್ರಶ್ನಿಸಿದಾಗ ಸಿಟ್ಟಿಗೆದ್ದು
ಹಾಸನದಲ್ಲಿ ಕೌಟುಂಬಿಕ ಕಲಹ: ತಂದೆಯನ್ನೇ ಕೊಂದ ಮಗ
ಕೌಟುಂಬಿಕ ಕಲಹದ ಕಾರಣ ಮಗನೊಬ್ಬ ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ. ಸತೀಶ್ (60) ಕೊಲೆಯಾದ ತಂದೆ. ರಂಜಿತ್ (28) ತಂದೆಯನ್ನು ಕೊಲೆಗೈದ ಆರೋಪಿ. ಸತೀಶ್ ಸರಿಯಾಗಿ ಕುಟುಂಬ ನಿರ್ವಹಣೆ ಮಾಡದಿರುವುದರ ಜೊತೆಗೆ ಅಕ್ರಮ
ಗೋವಾ ನ್ಯೂ ಇಯರ್ ಪಾರ್ಟಿ: ಹಾಸನದ ಯುವಕ ಹೃದಯಾಘಾತಕ್ಕೆ ಬಲಿ
ನ್ಯೂ ಇಯರ್ ಪಾರ್ಟಿಗೆಂದು ಗೋವಾಗೆ ಹೋಗಿದ್ದ ಆಲೂರು ತಾಲೂಕಿನ ಹೊಸಳ್ಳಿ ಗ್ರಾಮದ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ರಕ್ಷಿತ್ (26) ಗೋವಾದಲ್ಲಿ ಮೃತಪಟ್ಟ ಯುವಕ. ಸಂಬಂಧಿಕರು ಹಾಗೂ ಸಹೋದರರಾದ ಚಿದಂಬರಂ, ಪ್ರವೀಣ್ ಜೊತೆ ಡಿ.31 ರಂದು ರಕ್ಷಿತ್ ಗೋವಾಗೆ ಹೋಗಿದ್ದ. 31 ರಂದು




