Wednesday, September 30, 2026
Menu

ನಾಪತ್ತೆಯಾಗಿದ್ದ ಹಾಸನದ ನವವಿವಾಹಿತೆಯ ಶವ ಕೆರೆಯಲ್ಲಿ ಪತ್ತೆ

ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿಯಿಂದ ನಾಪತ್ತೆಯಾಗಿದ್ದ ನವವಿವಾಹಿತೆ ಪ್ರಿಯಾಂಕ ಎಂಬವರ ಶವ ಹನ್ನೊಂದು ದಿನಗಳ ಬಳಿಕ ತುರುವೇಕೆರೆ ತಾಲೂಕಿನ ಕೋಲಾಳ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ.

ಸೆ.19ರ ರಾತ್ರಿ ಪತಿ ಜೊತೆಗಿದ್ದ ಪ್ರಿಯಾಂಕಾ ಚಿಕ್ಕನಾಯಕನಹಳ್ಳಿ ಬಳಿ ಏಕಾಏಕಿ ಹೇಮಾವತಿ ನಾಲೆಗೆ ಜಿಗಿದಿದ್ದರು ಎನ್ನಲಾಗಿತ್ತು. ಅಂದಿನಿಂದ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಕಾಲುವೆ ನೀರು ನಿಲ್ಲಿಸಿ ಸುರಂಗ, ಕೆರೆ ಸೇರಿದಂತೆ ಎಲ್ಲೆಡೆ ಸಂಬಂಧಿಕರು ಹುಡುಕಾಡಿದ್ದರು. ತುರುವೇಕೆರೆ, ತಿಪಟೂರು ಭಾಗದಲ್ಲಿ ಡ್ರೋನ್ ಮೂಲಕ ಪೊಲೀಸರು ಹುಡುಕಾಡಿದ್ದರು.

ಬಾಗೂರು ಗ್ರಾಮದ ಕೃಷ್ಣಸ್ವಾಮಿ-ಶೋಭ ದಂಪತಿಯ ಮಗಳು ಪ್ರಿಯಾಂಕ ಮದುವೆ ಎಂಟು ತಿಂಗಳ ಹಿಂದೆ ಕುರುವಂಕ ಗ್ರಾಮದ ರಾಜಶೇಖರ ಜೊತೆ ನಡೆದಿತ್ತು. ಕೆಎಎಸ್‌ ಪರೀಕ್ಷೆಗಾಗಿ ಪ್ರಿಯಾಂಕಾ ಸಿದ್ಧತೆ ನಡೆಸುತ್ತಿದ್ದರು. ಪತ್ನಿ ಎರಡೂವರೆ ತಿಂಗಳ ಗರ್ಭಿಣಿ ಆಗಿದ್ದರೂ ವರದಕ್ಷಿಣೆಗಾಗಿ ಪತಿ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ರಾಜಿ ಸಂಧಾನವೂ ನಡೆದಿತ್ತು. ರಾಜಶೇಖರನೇ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂದು ಪ್ರಿಯಾಂಕಾ ಪೋಷಕರು ದೂರಿದ್ದರು.

ಪ್ರಿಯಾಂಕಾ ಹಾಗೂ ಆಕೆಯ ಪೋಷಕರ ವಿರುದ್ಧ ರಾಜಶೇಖರ ಮತ್ತು ಕುಟುಂಬಸ್ಥರು ದೂರಿದ್ದರು. ಆಕೆಗೆ ಮೊದಲೇ ಮದುವೆಯಾಗಿತ್ತು ಎಂಬ ವಿಚಾರ ಮುಚ್ಚಿಟ್ಟು ಮತ್ತೆ ಮದುವೆ ಮಾಡಿಕೊಡಲಾಗಿದೆ. ರಾಜಶೇಖರ ಜೊತೆ ಮದು ದಿನವೇ ಆಕೆಯ ಹಳೆಯ ಗಂಡ ಪೋಲಿಸರ ಜೊತೆ ಕಲ್ಯಾಣ ಮಂಟಪಕ್ಕೆ ಬಂದಿದ್ದ. ಮಗಳು ಮದುವೆಗೆ ಒಪ್ಪದಿದ್ದಾಗ ತಂದೆ-ತಾಯಿ ವಿಷದ ಬಾಟಲಿ ಹಿಡಿದು ಬೆದರಿಸಿ ರಾಜಶೇಖರ ಜೊತೆ ಮದುವೆಗೆ ಒಪ್ಪಿಸಿದ್ದರು ಎಂದು ಆರೋಪಿಸಿದ್ದರು.

Related Posts

Leave a Reply

Your email address will not be published. Required fields are marked *