ಬಳ್ಳಾರಿ
ಮದುವೆಗೆಂದು ಹುಡುಗಿ ನೋಡಲು ಹೋಗುತ್ತಿದ್ದ ಕುಟುಂಬ ಹೊಸಪೇಟೆಯಲ್ಲಿ ರಸ್ತೆ ಅಪಘಾತಕ್ಕೆ ಬಲಿ
ಹೊಸಪೇಟೆ ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಅಸು ನೀಗಿದ್ದು, ಹಲವರು ಗಾಯಗೊಂಡಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಮಗನ ಮದುವೆಗಾಗಿ ಕನ್ಯೆ ನೋಡಲು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕಿತ್ನೂರು ಗ್ರಾಮದ ಸುಜಾತಾ (34), ನಾಗಪ್ಪ (58), ಕೊಟ್ರೇಶ್ (28) ಹಾಗೂ ತಿಮ್ಮಲಾಪುರದ ದುರ್ಗಪ್ಪ (55) ಮೃತಪಟ್ಟವರು. ಮಗ ಕೊಟ್ರೇಶನಿಗಾಗಿ ಹುಡುಗಿಯನ್ನು ನೋಡಲು ತಂದೆ ನಾಗಪ್ಪ
ಬಳ್ಳಾರಿಯ ನವ ವಿವಾಹಿತ ಜೋಡಿ ಅಪಘಾತಕ್ಕೆ ಬಲಿ
ಮದುವೆಯಾಗಿ ಒಂದು ತಿಂಗಳಷ್ಟೇ ಆಗಿದ್ದ ಬಳ್ಳಾರಿಯ ನವಜೋಡಿಯೊಂದು ದೊಡ್ಡಬಳ್ಳಾಪುರದ ಬಳಿ ಲಾರಿ ಮತ್ತು ಕಾರಿನ ನಡುವೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಬಳ್ಳಾರಿ ತಾಲೂಕಿನ ಜೋಳದ ರಾಶಿ ಗ್ರಾಮದ ರಕ್ಷಿತಾ (24) ಮತ್ತು ಬೆಂಗಳೂರಿನ ಪವನ್ (29) ಕಳೆದ ತಿಂಗಳು ಮದುವೆಯಾಗಿದ್ದರು.
ಬಳ್ಳಾರಿಯಲ್ಲಿ ಉಗ್ರರ ನಂಟು ಹೊಂದಿದ್ದ ವ್ಯಕ್ತಿ ಅರೆಸ್ಟ್
ಉಗ್ರ ಸಿದ್ಧಾಂತಗಳನ್ನು ಆನ್ಲೈನ್ ಮೂಲಕ ಪ್ರಚಾರ ಮಾಡುತ್ತಿದ್ದಾನೆಂಬ ಗಂಭೀರ ಆರೋಪದ ಮೇಲೆ ಆಂಧ್ರ ಪ್ರದೇಶದ ವಿಜಯವಾಡ ಪೊಲೀಸರ ವಿಶೇಷ ತಂಡವು ಬಳ್ಳಾರಿ ನಗರದಲ್ಲಿ ಲಾರಿ ಚಾಲಕನನ್ನು ಬಂಧಿಸಿದೆ. ಬಂಧಿತನನ್ನು ನಗರದ ಕೌಲ್ ಬಜಾರ್ ಪ್ರದೇಶದ ಅಬ್ದುಲ್ ಕಲಾಂ ಬೀದಿಯ ನಿವಾಸಿ ಅಬ್ದುಲ್
ಬಳ್ಳಾರಿಯ ಕೆಐಎಡಿಬಿ ಕಚೇರಿಯಲ್ಲಿ ನಕಲಿ ಸಹಿ ಬಳಸಿ 16 ಕೋಟಿ ರೂ. ಅಕ್ರಮ
ಬಳ್ಳಾರಿಯ ಕೆಐಎಡಿಬಿ ಕಚೇರಿಯಲ್ಲಿ 16 ಕೋಟಿ ರೂ.ಗೂ ಅವ್ಯವಹಾರ ನಡೆದಿದ್ದು, ನಾಲ್ಕು ವರ್ಷಗಳಲ್ಲಿ ಅಧಿಕಾರಿಗಳ ನಕಲಿ ಸಹಿ ಬಳಸಿ ಹಣ ಅಕ್ರಮ ವರ್ಗಾವಣೆ ಆಗಿದೆ ಎಂದು ಆರೋಪಿಸಿ ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆಂತರಿಕ ಆಡಿಟ್ ಮೂಲಕ ಈ ಹಗರಣ
ಬಳ್ಳಾರಿ ಖಾಸಗಿ ಶಾಲೆ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಯಿಂದ ಹಲವರ ಮೇಲೆ ಹಲ್ಲೆ, ಒಬ್ಬನ ಸಾವು
ಬಳ್ಳಾರಿಯ ಖಾಸಗಿ ಶಾಲೆಯ ಹಾಸ್ಟೆಲ್ನಲ್ಲಿ ವಾರ್ಡನ್ ಸೇರಿ ಹಲವು ಬಾಲಕರ ಮೇಲೆ ಒಂಬತ್ತನೇ ತರಗತಿ ವಿದ್ಯಾರ್ಥಿಯು ರಾಡ್ನಿಂದ ಹಲ್ಲೆ ನಡೆಸಿದ್ದು, ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿ ಬಾಲಕ ಪರಾರಿಯಾಗಿದ್ದು, ಗಾಯಾಳುಗಳನ್ನು ಬಳ್ಳಾರಿಯ
ಹೆಚ್ಚು ಲಾಭದ ಆಮಿಷವೊಡ್ಡಿ ಕೋಟ್ಯಾಂತರ ರೂ. ವಂಚಿಸಿ ವ್ಯಕ್ತಿ ಪರಾರಿ
ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ದೊರೆಯುತ್ತದೆ ಎಂದು ಆಮಿಷವೊಡ್ಡಿ ಬಡವರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ವ್ಯಕ್ತಿ ಪರಾರಿಯಾದ್ದು, ಬಳ್ಳಾರಿ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ 200ಕ್ಕೂ ಹೆಚ್ಚು ಜನರು ದೂರು ದಾಖಲಿಸಿದ್ದಾರೆ. ಬಳ್ಳಾರಿಯ ದೇವಿನಗರ ನಿವಾಸಿ ವೆಂಕಟೇಶ ಚೀಟಿ ವ್ಯವಹಾರ ಹೆಸರಿನಲ್ಲಿ 800ಕ್ಕೂ
ಬಳ್ಳಾರಿಯಲ್ಲಿ ಮಂಗಳಮುಖಿ ಮತ್ತು ಪ್ರಿಯತಮ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಹಣಕಾಸು ವಿಚಾರಕ್ಕೆ ಮಂಗಳಮುಖಿ ಮತ್ತು ಪ್ರಿಯತಮನ ಮಧ್ಯೆ ಶುರುವಾದ ಜಗಳ ಅವರಿಬ್ಬರ ಆತ್ಮಹತ್ಯೆಯಲ್ಲಿ ಕೊನೆಯಾಗಿರುವ ಪ್ರಕರಣ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಮೇದಾರ ಕೇತಯ್ಯ ನಗರದಲ್ಲಿನ ಬಾಡಿಗೆ ಮನೆಯೊಂದರಲ್ಲಿ ಮಂಗಳಮುಖಿ ಸುಹಾಸಿನಿ (29) ಹಾಗೂ ಪ್ರಿಯಕರ ಶೇಖರ್ (27) ಶವಗಳು ನೇಣು ಬಿಗಿದ
ಬಳ್ಳಾರಿಯಿಂದ ಗುಜರಾತ್ ಗೆ ಅಕ್ರಮವಾಗಿ ಸಾಗಿಸುತ್ತಿದ್ದ 523 ಚೀಲ ಪಡಿತರ ಅಕ್ಕಿ ವಶ
ಬಳ್ಳಾರಿಯಿಂದ ಗುಜರಾತ್ಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 523 ಚೀಲ ಪಡಿತರ ಅಕ್ಕಿಯನ್ನು ಸಹಾಯಕ ಆಯುಕ್ತ ರಾಜೇಶ್ ಹೆಚ್. ಡಿ ತಂಡ ಎಸ್.ಎಲ್.ಎನ್ ಮಾಲ್ ಬಳಿ ಇರುವ ಪುಲ್ಲಯ್ಯ ಕಾಂಪೌಂಡನ ಒಳ ಆವರಣದಲ್ಲಿ ತಡೆ ಹಿಡಿದಿದೆ. ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಅಡ್ಡೆ
ಕೊಪ್ಪಳದಲ್ಲಿ 27 ವರ್ಷಗಳಿಂದ ಅತಿ ಕಡಿಮೆ ದರದಲ್ಲಿ ಶ್ರಮಿಕರ ಹೊಟ್ಟೆ ತುಂಬಿಸುವ ರವಿ ಹೋಟೆಲ್
-ಬಸವರಾಜ ಕರುಗಲ್ ಇಪ್ಪತ್ತು ರೂಪಾಯಿ ಕೊಟ್ಟರೂ ಒಂದು ಕಪ್ ಚಹಾ ದೊರಕದ ಕಾಲವಿದು. ಸಾಮಾನ್ಯ ಹೊಟೇಲ್ಗೆ ಹೊಕ್ಕರೆ ಒಬ್ಬರಿಗೆ ಕನಿಷ್ಠವೆಂದರೂ ನೂರು ರೂಪಾಯಿ ಬಿಲ್ ಆಗುವ ಈ ದಿನಗಳಲ್ಲಿ ಹತ್ತು ರೂಪಾಯಿಗೆ ಹೊಟ್ಟೆ ತುಂಬುವಷ್ಟು ಉಪಹಾರ ಕೊಪ್ಪಳದಲ್ಲಿರುವ ಈ ರವಿ
ಬಳ್ಳಾರಿ ಬ್ಯಾನರ್ ಗಲಭೆ: ಬಂಧನ ಭಯಕ್ಕೆ ಬಳ್ಳಾರಿ ತೊರೆದ ಯುವಕರು
ಬಳ್ಳಾರಿಯಲ್ಲಿ ಕೆಲವು ದಿನಗಳ ಹಿಂದೆ ಶಾಸಕ ಜನಾರ್ದನ ರೆಡ್ಡಿ ಮನೆ ಎದುರು ಬ್ಯಾನರ್ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಹಿಂಸಾಚಾರಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟ ಪ್ರಕರಣದ ತನಿಖೆ ತೀವ್ರಗೊಂಡಿದೆ. ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು 26




