Menu

ಮತ್ತೆ ದಾಳಿ ಶುರು ಮಾಡಿದ್ರೆ ಪ್ರತಿದಾಳಿಯನ್ನು ಅಮೆರಿಕ ತಾಳಿಕೊಳ್ಳಲಾಗದು: ಇರಾನ್‌ ಎಚ್ಚರಿಕೆ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆ ಯಾವುದೇ ಕ್ಷಣದಲ್ಲಿ ಇಡೀ ಜಾಗತಿಕ ಆರ್ಥಿಕತೆಯನ್ನು ಛಿದ್ರಗೊಳಿಸಬಹುದು ಎನ್ನುವಂತಿದೆ. ಇರಾನ್‌ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೇನಾ ದಾಳಿಯ ಬೆದರಿಕೆಯ ನಂತರ, ಇರಾನ್ ಸೇನೆ ನೀಡಿದ ಎಚ್ಚರಿಕೆ ಜಾಗತಿಕ ತೈಲ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ.

ಹರ್ಮುಜ್ ಜಲಸಂಧಿಯಲ್ಲಿ ಹಡಗುಗಳನ್ನು ನಿರ್ಬಂಧಿಸುವುದು ಅಥವಾ ಟೋಲ್ ವಿಧಿಸುವಂತಹ ಸಣ್ಣ ಕ್ರಮಗಳನ್ನು ಇನ್ನು ಮುಂದೆ ಆಶ್ರಯಿಸುವುದಿಲ್ಲ. ಯುಎಸ್ ಮತ್ತೆ ದಾಳಿ ಮಾಡಿದರೆ ಹೊಸ ವಿಧಾನ ಬಳಸುತ್ತೇವೆ. ಬಳಿಕ ವಿಶ್ವದ ಉಳಿದ ತೈಲ ಸರಬರಾಜು ವ್ಯವಸ್ಥೆ ಅಪಾಯದಲ್ಲಿರುತ್ತವೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಇರಾನ್ ಮಿಲಿಟರಿ ವಕ್ತಾರ ಮೊಹಮ್ಮದ್ ಅಕ್ರಮನಿಯಾ, ಅಮೆರಿಕ ಇಸ್ರೇಲಿ ಬಲೆಗೆ ಬಿದ್ದು ನಮ್ಮ ಮೇಲೆ ಮತ್ತೆ ದಾಳಿ ಮಾಡುವ ಮೂರ್ಖತನ ಮಾಡಿದರೆ ಹೊಸ ಶಸ್ತ್ರಾಸ್ತ್ರಗಳು ಮತ್ತು ಸಂಪೂರ್ಣ ಹೊಸ ವಿಧಾನಗಳೊಂದಿಗೆ ಸಿದ್ಧರಾಗಿದ್ದೇವೆ. ನಮ್ಮ ಆ ನಡೆಯು ಜಗತ್ತಿಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ, ಏಕೆಂದರೆ ಅದು ವಿಶ್ವದ ಅತ್ಯಂತ ಸೂಕ್ಷ್ಮ ತೈಲ ಸರಬರಾಜು ಮಾರ್ಗವನ್ನು ನೇರವಾಗಿ ಗುರಿಯಾಗಿಸುತ್ತದೆ ಎಂದು ಇರಾನ್ ಹೇಳಿದೆ.

ನಾವು ನಮ್ಮ ಎಲ್ಲಾ ಶಕ್ತಿಯಿಂದ ದಾಳಿ ಮಾಡಿ ದಾಳಿಕೋರನ ಕೈಯನ್ನು ಕತ್ತರಿಸುತ್ತೇವೆ. ನಮ್ಮ ಪ್ರತಿಕ್ರಿಯೆ ಎಷ್ಟು ವೇಗವಾಗಿ, ಶಕ್ತಿಯುತವಾಗಿ ಮತ್ತು ಸಮಗ್ರವಾಗಿರುತ್ತದೆ ಎಂದರೆ ಅಮೆರಿಕ ಅದನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ಜನರಲ್ ಅಬ್ದುಲ್ಲಾಹಿ ಘೋಷಿಸಿದ್ದಾರೆ.

ಯುದ್ಧ ಭುಗಿಲೆದ್ದರೆ, ಇರಾನ್ ಹರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಹತ್ತಿಕ್ಕುತ್ತದೆ. ರಹಸ್ಯ ಸಮುದ್ರದೊಳಗಿನ ಆತ್ಮಹತ್ಯಾ ಡ್ರೋನ್‌ಗಳು ಮತ್ತು ಆಧುನಿಕ ಹಡಗು ವಿರೋಧಿ ಕ್ಷಿಪಣಿಗಳನ್ನು ಬಳಸಿ ಇರಾನ್ ಈ ಸಂಪೂರ್ಣ ಮಾರ್ಗವನ್ನು ನಿಷೇಧಿತ ವಲಯವನ್ನಾಗಿ ಮಾಡುತ್ತದೆ. ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇಯಂತಹ ದೇಶಗಳಿಂದ ತೈಲ ಸರಬರಾಜುಗಳು ವ್ಯವಸ್ಥೆಗೂ ಹಾನಿಯಾಗಲಿದೆ. ಜಾಗತಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಬಾಧಿಸಲಿದೆ.

Related Posts

Leave a Reply

Your email address will not be published. Required fields are marked *