Menu

ಪತ್ನಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಪತಿಯ ಸಾವು

ವೃದ್ಧ ದಂಪತಿಯಲ್ಲಿ ಪತ್ನಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಪತಿಯೂ ಅಸು ನೀಗಿರುವ ಘಟನೆ ದಾವಣಗೆರೆಯ ಹದಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದಜ್ಜಿ ಹಾಗೂ ಪತಿ ಮಲ್ಲಜ್ಜ (75) ಮೃತಪಟ್ಟ ದಂಪತಿ.

ಸಿದ್ದಜ್ಜಿ ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಬೆಳಗ್ಗೆ ಗ್ರಾಮದಲ್ಲಿ ಸಿದ್ದಜ್ಜಿ ಅಂತ್ಯಕ್ರಿಯೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. , ಅಂತಿಮ ಯಾತ್ರೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಪತಿ ಮಲ್ಲಜ್ಜ (75) ಆರೋಗ್ಯ ಏರುಪೇರಾಗಿದೆ. 10.30ರ ವೇಳೆಗೆ ಮಲ್ಲಜ್ಜ ಕೂಡ ಅಸು ನೀಗಿದ್ದಾರೆ.

ದಂಪತಿ ಮಲ್ಲಜ್ಜ ಹಾಗೂ ಸಿದ್ದಜ್ಜಿ ಅವರ ಅಂತ್ಯಕ್ರಿಯೆ ಏಕಕಾಲದಲ್ಲಿ ನಡೆಸಲು ಗ್ರಾಮಸ್ಥರು, ಸಂಬಂಧಿಕರು ಸಿದ್ಧತೆ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *