Wednesday, September 23, 2026
Menu

ಬೆಂಗಳೂರಿನಲ್ಲಿ ಮನೆ ಬಾಗಿಲು ಮುರಿದು ಅರ್ಧ ಕೆಜಿ ಚಿನ್ನಾಭರಣ ದರೋಡೆ

ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ ಸಿಟಿಯ ವಿವೇಕಾನಂದ ನಗರದಲ್ಲಿ ಮನೆಯ ಬಾಗಿಲು ಮುರಿದು ನುಗ್ಗಿದ ಕಳ್ಳರು ಅರ್ಧ ಕೆಜಿ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದ ಕುಟುಂಬ ಮನೆಗೆ ಬೀಗ ಹಾಕಿ ಹೋಗಿತ್ತು, ಕುಟುಂಬ ಆಸ್ಪತ್ರೆಯಲ್ಲಿ ಇರಬೇಕಾದರೆ ಕಳ್ಳರು ಮನೆ ಬಾಗಿಲು ಮುರಿದು ನುಗ್ಗಿ ಚಿನ್ನಾಭರಣ ಒಯ್ದಿದ್ದಾರೆ.
ದೂರು ದಾಖಲಾಗಿದ್ದು, ಸಿಸಿ ಕ್ಯಾಮರಾಗಳ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಎಬೆನೆಜರ್ ವಿ. ಎಂಬವರು ದೂರು ನೀಡಿದ್ದು, ಸೆಪ್ಟೆಂಬರ್ 17ರಂದು ಚಿಕಿತ್ಸೆಗಾಗಿ ಕಿರಿಯ ಮಗನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅವರು ಹಾಗೂ ಪತ್ನಿ ಮಗನ ಆರೈಕೆಗಾಗಿ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದರು. ಸೆಪ್ಟೆಂಬರ್ 19ರ ಬೆಳಗ್ಗೆ ಎಬೆನೆಜರ್ ಅವರ ಹಿರಿಯ ಪುತ್ರ ಮನೆಗೆ ಬಂದಿದ್ದರು. ಮನೆಯನ್ನು ಲಾಕ್ ಮಾಡಿ ಕೀಲಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದರು.

ಮರುದಿನ ಬೆಳಗ್ಗೆ ಎಬೆನೆಜರ್ ಪತ್ನಿ ಮನೆಗೆ ವಾಪಸ್ ಬಂದಾಗ ಮನೆಯ ಮುಂಭಾಗದ ಬಾಗಿಲು ತೆರೆದಿರುವುದು ಕಂಡುಬಂದಿತ್ತು, ಮುಖ್ಯ ಬಾಗಿಲಿನ ಬೀಗ ಒಡೆದು ಅಲ್ಮೆರಾದಲ್ಲಿ ಇಡಲಾಗಿದ್ದ ಆಭರಣಗಳಿದ್ದ ಡಬ್ಬಿಗಳು ನೆಲದ ಮೇಲೆ ಬಿದ್ದಿದ್ದವು, ನೆಕ್ಲೆಸ್‌ಗಳು, ಸರಗಳು, ಬ್ರೇಸ್‌ಲೆಟ್‌ಗಳು, ಬಳೆಗಳು, ಕಿವಿಯೋಲೆಗಳು ಹಾಗೂ ಉಂಗುರಗಳು ಸೇರಿದಂತೆ ಚಿನ್ನಾಭರಣಗಳನ್ನು ಅಲ್ಮೆರಾದಲ್ಲಿ ಇರಿಸಿದ್ದರು.

Related Posts

Leave a Reply

Your email address will not be published. Required fields are marked *