Menu

ಯುಎಸ್‌ ಜೊತೆ ಒಪ್ಪಂದ ಕೊನೆ: ಹರ್ಮುಜ್‌ ನಿಯಂತ್ರಣ ತನ್ನದೇ ಎಂದ ಇರಾನ್‌

ಅಮೆರಿಕದೊಂದಿಗೆ ಕಳೆದ ತಿಂಗಳು ಮಾಡಿಕೊಂಡಿದ್ದ ತಾತ್ಕಾಲಿಕ ತಿಳಿವಳಿಕೆ ಒಪ್ಪಂದವನ್ನು ಕೊನೆಗೊಳಿಸುವುದಾಗಿ ಇರಾನ್ ಅಧಿಕೃತ ಘೋಷಣೆ ಮಾಡಿದೆ. ಅಮೆರಿಕ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದ್ದು ಮಾತ್ರವಲ್ಲ, ಇರಾನ್ ಬಂದರುಗಳ ಮೇಲೆ ನೌಕಾ ನಿರ್ಬಂಧ ಹೇರಿ ಒಪ್ಪಂದವನ್ನೇ ಸಂಪೂರ್ಣವಾಗಿ ಮುರಿದಿದೆ ಎಂದು ಇರಾನ್‌ ಆರೋಪಿಸಿದೆ.

ಅಮೆರಿಕ ತನ್ನ ಬದ್ಧತೆಯನ್ನು ತೋರಿಸದ ಕಾರಣ ತಾವು ಕೂಡ ಇನ್ನು ಮುಂದೆ ಆ ಒಪ್ಪಂದದ ಯಾವುದೇ ಅಂಶಗಳಿಗೆ ಬದ್ಧರಾಗಿರುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಇರಾನ್ ಬಂದರುಗಳ ಮೇಲೆ ಅಮೆರಿಕ ಮತ್ತೊಮ್ಮೆ ನೌಕಾ ನಿರ್ಬಂಧ ಜಾರಿಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಹರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಹೇಳಿದೆ. ಒಟ್ಟಿನಲ್ಲಿ ಹರ್ಮುಜ್‌ ಜಲಸಂಧಿ ಜಾಗತಿಕ ಉದ್ವಿಗ್ನತೆಯ ಕೇಂದ್ರಬಿಂದುವಾಗಿದೆ.

ಯಾವುದೇ ಬೆಲೆ ತೆತ್ತಾದರೂ ಹರ್ಮುಜ್‌ ಜಲಸಂಧಿ ಮೇಲೆ ಇರಾನ್‌ ಸಂಪೂರ್ಣ ನಿಯಂತ್ರಣ ಸಾಧಿಸುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಒಮನ್ ಜತೆ ನಿಯಂತ್ರಣ ಹಂಚಿಕೊಂಡಿದ್ದರೂ, ಯುದ್ಧದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಭದ್ರತೆಯ ಕಾರಣದಿಂದ ಜಲಸಂಧಿಯ ಸಂಪೂರ್ಣ ನಿಯಂತ್ರಣ ಇರಾನ್ ಕೈಯಲ್ಲಿರುತ್ತದೆ ಎಂದು ಇರಾನ್ ಉಪ ವಿದೇಶಾಂಗ ಸಚಿವ ಕಾಜೆಂ ಘರೀಬಾಬಾದಿ ಹೇಳಿದ್ದಾರೆ. ಮಾತನಾಡಿ, ಯಾವುದೇ ಬೆಲೆ ತೆತ್ತರೂ ಹರ್ಮುಜ್ ಜಲಸಂಧಿಯ ಮೇಲೆ ಇರಾನ್ ಸಂಪೂರ್ಣ ಸಾರ್ವಭೌಮ ನಿಯಂತ್ರಣ ಸಾಧಿಸುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಒಮನ್ ಜತೆ ನಿಯಂತ್ರಣ ಹಂಚಿಕೊಂಡಿದ್ದರೂ, ಯುದ್ಧದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಭದ್ರತೆಯ ಕಾರಣದಿಂದ ಜಲಸಂಧಿಯ ಸಂಪೂರ್ಣ ನಿಯಂತ್ರಣ ಇರಾನ್ ಕೈಯಲ್ಲಿರಬೇಕು. ಅಮೆರಿಕದೊಂದಿಗೆ ಯಾವುದೇ ಹೊಸ ಮಾತುಕತೆ ಆರಂಭಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಇರಾನ್ ದಾಳಿ ಮುಂದುವರಿಸಿದರೆ ದೇಶದ ವಿದ್ಯುತ್ ಸ್ಥಾವರಗಳು, ಉಪ್ಪುನೀರು ಶುದ್ಧೀಕರಣ ಘಟಕಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲೂ ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪವನ್ನು ಅಮೆರಿಕದ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

Related Posts

Leave a Reply

Your email address will not be published. Required fields are marked *