Menu

ಬೆಸ್ಕಾಂ, ಚೆಸ್ಕಾಂ ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆ

ಬೆಸ್ಕಾಂ ಕಂಪನಿಯ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ ೫೬ ಪೈಸೆ, ಮೈಸೂರಿನ ಚೆಸ್ಕೋ ಕಂಪನಿ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್‌ ದರದಲ್ಲಿ ೧೫ ಪೈಸೆ ಏರಿಕೆ ಮಾಡಲಾಗಿದೆ. ಮಂಗಳೂರು ವ್ಯಾಪ್ತಿಯ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ ೯ ಪೈಸೆ, ಹುಬ್ಬಳ್ಳಿ ಮತ್ತು ಕಲಬುರ್ಗಿಯ ಗ್ರಾಹಕರಿಗೆ ತಲಾ ಪ್ರತಿ ಯೂನಿಟ್‌ಗೆ 10 ಪೈಸೆ ಹಿಂತಿರುಗಿಸಲಾಗುತ್ತಿದೆ.

೨೦೨೫ರಲ್ಲಿ ಕೆಇಆರ್‌ಸಿ ಅನುಮೋದನೆ ನೀಡಿದ್ದ ವಿದ್ಯುತ್ ಬಳಕೆಯಲ್ಲಿ ಕೆಲವು ಕಂಪನಿಗಳು ಹೆಚ್ಚಿಗೆ ಬಳಸಿವೆ. ಕೆಲವು ಕಂಪನಿಗಳು ಕಡಿಮೆ ಬಳಸಿ ಗ್ರಾಹಕರಿಂದ ಹೆಚ್ಚಿಗೆ ಹಣ ಪಡೆದಿವೆ. ಕೆಇಆರ್‌ಸಿ ವಿತರಣ ಕಂಪನಿಯ ಹಣಕಾಸು ಲೆಕ್ಕ ಪರಿಶೀಲಿಸಿ ಬೆಂಗಳೂರು ಮತ್ತು ಮೈಸೂರು ಕಂಪನಿಗಳಿಗೆ ಆರ್ಥಿಕ ಕೊರತೆ ಇದ್ದು ಗ್ರಾಹಕರಿಂದ ಪಡೆಯಲು ಸೂಚಿಸಿದೆ. ಇದು ಮೇ ೧ರಿಂದ ಜಾರಿಗೆ ಬರುತ್ತದೆ.

ಮಂಗಳೂರು. ಹುಬ್ಬಳ್ಳಿ ಮತ್ತು ಗುಲ್ಬರ್ಗ ಕಂಪನಿಗಳು ಕಡಿಮೆ ವೆಚ್ಚ ಮಾಡಿದ್ದು ಗ್ರಾಹಕರಿಂದ ಹೆಚ್ಚುವರಿ ಹಣ ಪಡೆದಿರುವುದರಿಂದ ಅವುಗಳನ್ನು ಮೇ ೧ ರಿಂದ ನೀಡುವ ಬಿಲ್ ನಲ್ಲಿ ಸಮಕಂತುಗಳಲ್ಲಿ ಹಿಂತಿರುಗಿಸಲು ಸೂಚಿಸಿದೆ.
2024-25ರ ಹಣಕಾಸು ವರ್ಷದಲ್ಲಿ ಬೆಸ್ಕಾಂ ಒಟ್ಟು 34,087.94 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಿತ್ತು. ವಿದ್ಯುತ್ ಮಾರಾಟದಿಂದ ಬಂದ ಆದಾಯ ಕೇವಲ 32,019.56 ಕೋಟಿ ರೂಪಾಯಿ, ಇದರಿಂದಾಗಿ ಬೆಸ್ಕಾಂಗೆ ಬರೋಬ್ಬರಿ 2,068.38 ಕೋಟಿ ರೂಪಾಯಿಗಳ ಬೃಹತ್ ಆದಾಯದ ಕೊರತೆ ಉಂಟಾಗಿದೆ. ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಕೊರತೆಯನ್ನು ತುಂಬಿಕೊಳ್ಳಲು ಎಸ್ಕಾಂಗಳು ದರ ಏರಿಕೆಯ ಪ್ರಸ್ತಾವನೆ ಸಲ್ಲಿಸಿದ್ದವು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಕೆಇಆರ್‌ಸಿ ಕೊರತೆಯನ್ನು ನೀಗಿಸಲು ಪ್ರತಿ ಯೂನಿಟ್‌ಗೆ 56 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ಅನುಮತಿ ನೀಡಿದೆ.

ಗೃಹಬಳಕೆದಾರರು ಮಾತ್ರವಲ್ಲದೆ ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶದ ವಿದ್ಯುತ್ ಗ್ರಾಹಕರಿಗೂ ಈ ಏರಿಕೆ ಅನ್ವಯವಾಗಲಿದೆ. ಉದಾಹರಣೆಗೆ, ಒಂದು ಮನೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಸಿದರೆ, ಆ ಮನೆಯ ಬಿಲ್‌ನಲ್ಲಿ ಕನಿಷ್ಠ 112 ರೂಪಾಯಿಗಳಷ್ಟು ಹೆಚ್ಚುವರಿ ಮೊತ್ತ ಸೇರ್ಪಡೆಯಾಗಲಿದೆ.

Related Posts

Leave a Reply

Your email address will not be published. Required fields are marked *