Menu

ಕಾಮನವೆಲ್ತ್‌ ಗೇಮ್ಸ್‌: ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಎರಡು ಚಿನ್ನ

ಗ್ಲಾಸ್ಕೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ನ ಬಾಕ್ಸಿಂಗ್‌ ವಿಭಾಗದಲ್ಲಿ ಭಾರತದ ಕ್ರೀಡಾಪಟುಗಳು ಶನಿವಾರ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಪ್ರೀತಿ ಪವಾರ್ ಮತ್ತು ಜೈಸ್ಮಿನ್ ಲಂಬೋರಿಯಾ ಚಿನ್ನ ಗೆದ್ದ ಕ್ರೀಡಾಪಟುಗಳು.

2026 ರ ಕಾಮನ್‌ವೆಲ್ತ್‌ನಲ್ಲಿ ಭಾರತ ಎದ್ದ ಚಿನ್ನದ ಸಂಖ್ಯೆ ಏಳಕ್ಕೆ ತಲುಪಿದೆ. ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಪ್ರವೀಣ್ ಚಿತ್ರವೇಲ್ ಬೆಳ್ಳಿ, ಸೆಲ್ವ ಪ್ರಭು ತಿರುಮಾರನ್ ಕಂಚಿನ ಪದಕ ಗೆದ್ದರು.

ಈಗಾಗಲೇ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಪುರುಷರ ಟಿ47 ವಿಭಾಗದ 100 ಮೀಟರ್ ಓಟ ಸ್ಪರ್ಧೆಯಲ್ಲಿ ಮೊದಲೆರಡು ಸ್ಥಾನಗಳನ್ನು ಗಳಿಸಿದ್ದರು. ದಿಲೀಪ್‌ ಮಹದೂ ಗಾವಿತ್ ಅಗ್ರಸ್ಥಾನ ಪಡೆಯುವ ಮೂಲಕ ಚಿನ್ನ ಗೆದ್ದರೆ, ಮೊಹಮ್ಮದ್ ಬಸಿಲ್ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಪಾತ್ರರಾಗಿದ್ದಾರೆ. ದಿಲೀಪ್ 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದುಕೊಂಡರು, ಮೊಹಮ್ಮದ್ ಬಸಿಲ್ 10.83 ಸೆಕೆಂಡುಗಳಲ್ಲಿ ಗುರಿ ತಲುಪುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್‌ನ ಕೆವಿನ್ ಸ್ಯಾಂಟೋಸ್ 10.85 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗಳಿಸಿದ್ದಾರೆ.

ಲಾಂಗ್ ಜಂಪ್‌ ಸ್ಪರ್ಧೆಯಲ್ಲಿ 28 ವರ್ಷದ ಮುರಳಿ ಶ್ರೀಶಂಕರ್ 8.09 ಮೀಟರ್ ದೂರ ಜಿಗಿಯುವ ಮೂಲಕ ಸತತ 2ನೇ ಬಾರಿಗೆ ಬೆಳ್ಳಿ ಪದಕವನ್ನು ಗಳಿಸಿದರು. ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಸತತ ಎರಡು ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಶ್ರೀಶಂಕ‌ರ್ ಅವರದು. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಯೂ ಬೆಳ್ಳಿ ಗೆದ್ದಿದ್ದರು. ಭಾರತದ ವೇಟ್‌ಲಿಫ್ಟರ್ ಗ್ಯಾನೇಶ್ವರಿ ಯಾದವ್ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಛತ್ತೀಸ್‌ಘಡದ ರಾಜನಂದಗಾಂವ್‌ನ ಈಕೆ 199 ಕೆಜಿ ಭಾರ ಎತ್ತುವ ಮೂಲಕ ಮೇಲ್ಮೈಯಲ್ಲಿ ಎರಡನೇ ಸ್ಥಾನ ಪಡೆದರು.

ಗ್ಲಾಸ್ಗೋ ನಗರದಲ್ಲಿ ಜುಲೈ ೨೩ ರಿಂದ ಆರಂಭಗೊಂಡಿರುವ ಪಂದ್ಯಗಳು ಆಗಸ್ಟ್ ೨ ರವರೆಗೆ ನಡೆಯುತ್ತಿವೆ. ೧೦ ಪಂದ್ಯಗಳ ಸ್ಪರ್ಧೆಯಾಗಿದ್ದು, ಆರು ಪ್ಯಾರಾ ಕ್ರೀಡೆಗಳು ಸೇರಿವೆ.

Related Posts

Leave a Reply

Your email address will not be published. Required fields are marked *