Menu

ಮರುವಿಂಗಡಣೆ ಬಿಲ್ ಪರವಾಗಿ ಕಾಂಗ್ರೆಸ್‌ ಜೊತೆ ಡಿಎಂಕೆ ನಿಲ್ಲುತ್ತಾ?

ಕಾಂಗ್ರೆಸ್ ಜೊತೆ ಡಿಎಂಕೆ ಮೈತ್ರಿ ಮುರಿದಿದೆ. ಲೋಕಸಭೆಯಲ್ಲಿ ಡಿಎಂಕೆ ೩೬ ಮಂದಿ ಸಂಸದರನ್ನು ಹೊಂದಿದೆ. ಮರುವಿಂಗಡಣೆ ವಿಧೇಯಕ ಅಂಗೀಕಾರವಾಗಲು ಕೇಂದ್ರ ಸರ್ಕಾರಕ್ಕೆ ಡಿಎಂಕೆ ನೆರವು ನೀಡುವುದೇ ಎಂಬುದೀಗ ಗಂಭೀರ ಪ್ರಶ್ನೆ. ತಮಿಳುನಾಡುವಿನ ಅಸೆಂಬ್ಲಿ ಚುನಾವಣೆಗೂ ಮುನ್ನ ಕ್ಷೇತ್ರ ಮರುವಿಂಗಣೆ ವಿಧೇಯಕವನ್ನು ಅಂದಿನ ಸಿಎಂ ಸ್ಟಾಲಿನ್ ಬಹಿರಂಗವಾಗಿ ಸುಟ್ಟಿದ್ದರು. ಆದರೆ ತಮಿಳುನಾಡು ಅಸೆಂಬ್ಲಿ ಚುನಾವಣೆ ಬಳಿಕ ರಾಜಕೀಯ ಸಮೀಕರಣ ಬದಲಾಗಿದೆ. 

ಕ್ಷೇತ್ರ ಮರುವಿಂಗಡಣೆ ವಿಧೇಯಕದ ಸಂಸತ್ ಅಂಗೀಕಾರಕ್ಕೆ ತೆರೆಮರೆಯ ಹಿಂದೆ ಮೋದಿ ಸರ್ಕಾರದ ಕಸರತ್ತು ಈಗಲೂ ಮುಂದುವರಿದಿದೆ. ಜಂಟಿ ಸಂಸತ್ ಅಧಿವೇಶನ ಆರಂಭವಾಗಿ ಎರಡು ವಾರಗಳಾದರೂ, ಎನ್‌ಡಿಎ ಸರ್ಕಾರದ ರೂವಾರಿಗಳಿಗೆ ಈ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲು ಇನ್ನೂ ಸಂಪೂರ್ಣ ವಿಶ್ವಾಸವಿಲ್ಲ. ಕಳೆದ ಅಧಿವೇಶನದಲ್ಲಿ ಆಡಳಿತಾರೂಢ ಮಂಡಿಸಿದ್ದ ಮಹಿಳಾ ವಿಧೇಯಕದ ಪರಾಭವದ ಬಳಿಕ ಮೋದಿ ಸರ್ಕಾರವೀಗ ಕ್ಷೇತ್ರ ಮರುವಿಂಗಡಣೆ ವಿಧೇಯಕ ಮಂಡನೆ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟಿದೆ.

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯು ಕ್ಷೇತ್ರ ಮರುವಿಂಗಡಣೆಗೆ ಸಮ್ಮತಿಸಿ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದು ಇದಕ್ಕೆ ಮೋದಿ ಸರ್ಕಾರ ಆಸಕ್ತಿ ತೋರಿದೆ. ಕ್ಷೇತ್ರ ಮರುವಿಂಗಡಣೆಯಿಂದ ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳನ್ನು ಕಾಡಿದೆ. ದ್ರಾವಿಡ ಮುನ್ನೇತ್ರ ಕಜಗಂ (ಡಿಎಂಕೆ) ನಾಯಕ ಎಂ ಕೆ ಸ್ಟಾಲಿನ್, ಮೊದಲಿನಿಂದಲೂ ಇದಕ್ಕೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿರುವುದು ಗಮನಾರ್ಹ ಮರುವಿಂಗಡಣೆ ಮೂಲಕ ಮುಂದಿನ ಲೋಕಸಭೆಯ ಚುನಾವಣೆಯ ಸಮಯದಲ್ಲಿ ತಮಿಳುನಾಡಿನಲ್ಲಿ ತನ್ನ ಅಧಿಕ್ಯ ಸಾಧಿಸಲು ಬಿಜೆಪಿ ಈ ಮೂಲಕ ನೀಲನಕ್ಷೆಯೊಂದನ್ನು ರೂಪಿಸಿದೆ.

ಯಾವುದೇ ಕಾರಣಕ್ಕೂ ತಾನು ಮರುವಿಂಗಡಣೆಗೆ ಒಪ್ಪಿಗೆ ನೀಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸ್ಟಾಲಿನ್, ತಮಿಳುನಾಡುವಿನ ಅಸೆಂಬ್ಲಿ ಚುನಾವಣೆಗೂ ಮುನ್ನ ಅಬ್ಬರಿಸಿ ವಿಧೇಯಕವನ್ನು ಬಹಿರಂಗವಾಗಿ ಸುಟ್ಟಿದ್ದರು. ಆದರೆ ತಮಿಳುನಾಡು ಅಸೆಂಬ್ಲಿ ಚುನಾವಣೆ ಬಳಿಕ ರಾಜಕೀಯ ಸಮೀಕರಣಗಳು ಬದಲಾಗಿವೆ. ಕಾಂಗ್ರೆಸ್ ಜೊತೆ ಡಿಎಂಕೆ ತನ್ನ ಮೈತ್ರಿ ಮುರಿದುಕೊಂಡಿದೆ. ಲೋಕಸಭೆಯಲ್ಲಿ ಡಿಎಂಕೆ ೩೬ ಮಂದಿ ಸಂಸದರನ್ನು ಹೊಂದಿದೆ. ವಿಧೇಯಕ ಅಂಗೀಕಾರವಾಗಲು ಕೇಂದ್ರ ಸರ್ಕಾರಕ್ಕೆ ಡಿಎಂಕೆ ನೆರವು ನೀಡುವುದೇ ಎಂಬುದು ಪ್ರಶ್ನೆ . ಆದರೆ ಈ ನೆರವು ಪಡೆಯವುದು ಮೋದಿ ಸಹಚರರಿಗೆ ಅಷ್ಟು ಸುಲಭವಲ್ಲ. ತೃಣಮೂಲ ಕಾಂಗ್ರೆಸ್‌ಮತ್ತು ಆಮ್ ಆದ್ಮಿ ಪಾರ್ಟಿ ಸಂಸದರನ್ನು ಬಿಜೆಪಿ ತನ್ನ ತೆಕ್ಕೆಗೆ ಎಳೆದುಕೊಳ್ಳುವಲ್ಲಿ ಯಶಸ್ಸು ಕಂಡಿದ್ದರೂ, ಈ ದಿಸೆಯಲ್ಲಿ ಡಿಎಂಕೆ ಸಂಸದರನ್ನು ಕೆಣಕುವ ಧೈರ್ಯ ಎನ್‌ಡಿಎ ರೂವಾರಿಗಳಿಗಿಲ್ಲ.

ಯಾವುದೇ ವಿಧೇಯಕವಿರಲಿ. ಇದು ಸಂಸತ್ತಿನಲ್ಲಿ ಈಗ ಮೂರನೆ ಎರಡರಷ್ಟು ಮೆಜಾರಿಟಿಯಿಂದ ಅಂಗೀಕಾರವಾಗಲು ಟಿಡಿಪಿ, ಜೆಡಿಯು ಅಲ್ಲದೆ ವೈಎಸ್ ಆರ್‌ಪಿ ಮತ್ತು ತೃಣಮೂಲ ಸಂಸದರ ಬೆಂಬಲ ಅನಿವಾರ್ಯ ಮೊದಲಿನಿಂದಲೂ ಮರುವಿಂಗಡಣೆಗೆ ತನ್ನ ವಿರೋಧವನ್ನು ತೋರಿರುವ ಡಿಎಂಕೆ ಈಗ ಕಾಂಗ್ರೆಸ್ ಜೊತೆ ಸಖ್ಯವಿಲ್ಲದ ಮಾತ್ರಕ್ಕೆ ವಿಧೇಯಕದ ಪರವಾಗಿ ಮತ ಚಲಾಯಿಸುವುದು ಸಾಧ್ಯವೇ ? ಸರ್ಕಾರದ ಕೆಲ ಸಂಧಾನಕರ್ತರು ಪರೋಕ್ಷವಾಗಿ ಡಿಎಂಕೆ ಸಂಸದರನ್ನು ತಮ್ಮ ಕಡೆ ಒಲಿಸಿಕೊಳ್ಳಲು ನಾನಾ ಬಗೆಯ ಕಸರತ್ತು ಮತ್ತು ತಂತ್ರಗಾರಿಕೆ ಅನುಸರಿಸಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ವಿಧೇಯಕದ ಬಗ್ಗೆ ಡಿಎಂಕೆ ಸ್ಪಷ್ಟ ನಿಲುವು ತಿಳಿಯಾಗಿಲ್ಲ. ಡಿಎಂಕೆ ಸೈದ್ಧಾಂತಿಕ ನಿಲುವುಗಳಿಗೆ ಈ ಪಾರ್ಟಿಯ ಸಂಸದರು ಗಟ್ಟಿಯಾಗಿ ಅಂಟಿಕೊಳ್ಳುವರೋ, ಇಲ್ಲವೇ ಕೊನೆ ಗಳಿಗೆಯಲ್ಲಿ ವಿಧೇಯಕದ ಪರವಾಗಿ ಲೋಕಸಭೆಯಲ್ಲಿ ಮತ ಚಲಾಯಿಸುವರೋ?

Related Posts

Leave a Reply

Your email address will not be published. Required fields are marked *