Wednesday, November 11, 2026
Menu

ದೆಹಲಿ ಚುನಾವಣಾ ಅಖಾಡಕ್ಕಿಳಿದ ಆರ್‌ಎಸ್‌ಎಸ್: 50 ಸಾವಿರ ಗಲ್ಲಿ ಸಭೆ ನಡೆಸಲು ಯೋಜನೆ

ನವದೆಹಲಿ: ದಿಲಿ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವ ಹಾಗೆಬಿಜೆಪಿಗೆ ಬಲ ತುಂಬಲು ಆರ್‌ಎಸ್‌ಎಸ್ ಮತಕಣಕ್ಕೆ ಪ್ರವೇಶ ನೀಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಯ ಗೆಲುವಿನ ನಂತರ ರಾಜಧಾನಿಯಲ್ಲೂ ಖೇಸರಿ ಬಾವುಟ ಹಾರಿಸಲು ನಎರವಾಗಲು ಸಂಘದ ಪ್ರಚಾರಕರು ಬೀದಿಗಿಳಿದಿದ್ದಾರೆ. ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್ ರಾಜಕೀಯದಿಂದ ದೂರವಿದ್ದರೂ, ಬಿಜೆಪಿಗೆ ನಿರೂಪಣೆಯನ್ನು ರೂಪಿಸುವಲ್ಲಿ, ಶಕ್ತಿ ತುಂಬುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಕೇಡರ್, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವೆ ಬಲವಾದ ಬಾಂಧವ್ಯವನ್ನು ಬೆಳೆಸುತ್ತಿದೆ. ದೆಹಲಿ ವಿಧಾನಸಭಾ ಚುನಾವಣೆಗೆ

ಬಿಜೆಪಿಯವರು ಇಂಧನ ಬೆಲೆ ಇಳಿಸಿದ್ರೆ ಬಸ್‌ ಟಿಕೆಟ್‌ ದರ ಇಳಿಸೋಣವೆಂದ ಶರತ್‌ ಬಚ್ಚೇಗೌಡ

ಬಿಜೆಪಿಯವರು ಕೇಂದ್ರದಿಂದ ಇಂಧನದ ಬೆಲೆ ಕಡಿಮೆ ಮಾಡಿಸಿದರೆ ನಾವು ಬಸ್‌ ಟಿಕೆಟ್ ದರ ಇಳಿಸುತ್ತೇವೆ, ರಾಜ್ಯದಲ್ಲಿ ಕಾಲಕಾಲಕ್ಕೆ ಬಸ್‌ ಟಿಕೆಟ್ ದರ ಪರಿಷ್ಕರಣೆ ಮಾಡುವುದು ವಾಡಿಕೆ. ವಿನಾಕಾರಣ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ. ರಾಜ್ಯದಲ್ಲಿ 132

ಪ್ರೊ.ಮುಜಾಫರ್‌ ಅಸ್ಸಾದಿ, ಜಿ.ಸಿ.ಬಯ್ಯಾರೆಡ್ಡಿಗೆ ಸಿಎಂ ಸಂತಾಪ

ಚಿಂತಕ, ಲೇಖಕ ಪ್ರೊ.ಮುಜಾಫರ್‌ ಅಸ್ಸಾದಿ (63) ಮತ್ತು ಸಿಪಿಐ(ಎಂ) ನಾಯಕ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಅವರು  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾಗಿದ್ದಾರೆ. ಈ ಇಬ್ಬರು ಸಮಾಜಮುಖಿ ಗಣ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಮುಜಾಫರ್‌ ಅಸ್ಸಾದಿ

ಇಡಿ ಅಧಿಕಾರಿಗಳೆಂದು ನಂಬಿಸಿ 30 ಲಕ್ಷ ರೂ. ದೋಚಿದ ಖದೀಮರು

ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಜಾರಿ ನಿರ್ದೇಶನಾಲಯದ ಹೆಸರಿನಲ್ಲಿ ಉದ್ಯಮಿ ಮನೆ ಮೇಲೆ ದಾಳಿ ಮಾಡಿ 30 ಲಕ್ಷ ರೂ. ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಸುಲೈಮಾನ್ ಹಾಜಿ ಎಂಬುವರು ಸಿಂಗಾರಿ ಬೀಡಿ ಉದ್ಯಮ ನಡೆಸುತ್ತಿದ್ದಾರೆ. ತಡರಾತ್ರಿ

ಸರ್ಜರಿ ಮಾಡಿಸಿಕೊಳ್ಳಲಿದ್ದಾರ ನಟ ದರ್ಶನ್‌

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನ ಆರೋಪಿಯಾಗಿ ಜೈಲು ಸೇರಿದ್ದ ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲೆಂದು ಜಾಮೀನು ಪಡೆದು ಹೊರ ಬಂದು ಫಿಸಿಯೊ ಥೆರಪಿ ಪಡೆದುಕೊಂಡಿದ್ದಾರೆ. ಆದರೆ ಬೆನ್ನು ನೋವು ವಾಸಿಯಾಗುವ ಲಕ್ಷಣ ಕಾಣುತ್ತಿಲ್ಲವಾದ್ದರಿಂದ ಆಪರೇಷನ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಸಂಕ್ರಾತಿ ವೇಳೆಗೆ

ಬೀದಿ ಬದಿ ವ್ಯಾಪಾರ ರಸ್ತೆಗಳ ಗುರುತಿಸಲು ತುಷಾರ್ ಗಿರಿನಾಥ್ ಸೂಚನೆ

ಬೆಂಗಳೂರು ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಮಾರ್ಗಸೂಚಿಯ ಅನುಸಾರ ಗುರುತಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪಶ್ಚಿಮ ವಲಯ ವ್ಯಾಪ್ತಿಯಲ್ಲಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ”ಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು

ಲಾಂಗ್‌ನಿಂದ ಕೊಚ್ಚಿ ಜೆಡಿಎಸ್‌ ಮುಖಂಡನ ಕೊಲೆ

ಚಿಕ್ಕಬಳ್ಳಾಪುರದಲ್ಲಿರುವ ತಮ್ಮನಾಯಕನಹಳ್ಳಿ ಗೇಟ್​ ಬಳಿ ಜೆಡಿಎಸ್ ಮುಖಂಡನನ್ನು ಲಾಂಗ್​ನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ತಮ್ಮನಾಯಕನಹಳ್ಳಿ ಗ್ರಾಮದ ವೆಂಕಟೇಶ್ ಕೊಲೆಯಾದ ವ್ಯಕ್ತಿ. ವೆಂಕಟೇಶ್ ಶುಕ್ರವಾರಟಿವಿಎಸ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ತಮ್ಮನಾಯಕನಹಳ್ಳಿ ಗೇಟ್​​ನಿಂದ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಬೈಕ್​ ಅಡ್ಡಗಟ್ಟಿ ಲಾಂಗ್‌ನಿಂದ

ದರ್ಗಾ ಜಾಗದಲ್ಲಿ ಕಾಮಗಾರಿಯಿಂದ ಕಾವೇರಿದೆ ಚಿಕ್ಕಮಗಳೂರು

ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿರುವ ದರ್ಗಾದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಮತ್ತು ಖಾಲಿ ಜಾಗದಲ್ಲಿ ನೂತನ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕಾಮಗಾರಿಯನ್ನು ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ದರ್ಗಾಕ್ಕೆ ದಾನ ನೀಡಿರುವ ಜಾಗದಲ್ಲಿ ನೂತನ ಕಾಮಗಾರಿ ನಡೆಸಬಾರದು ಎಂದು

ಕಾರು ಚಲಾಯಿಸಿ ಅಪಘಾತಕ್ಕೆ ಬಲಿಯಾದ ಹೈಸ್ಕೂಲ್‌ ವಿದ್ಯಾರ್ಥಿಗಳು

ಗದಗ ತಾಲೂಕಿನ ಹುಲಕೋಟಿ ರೂರಲ್ ಇಂಜಿನಿಯರಿಂಗ್ ಕಾಲೇಜ್ ಬಳಿ ಹೈಸ್ಕೂಲ್‌ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ಕಾರು ಅಪಘಾತವಾಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ವೇಗವಾಗಿ ಬಂದ ಕಾರು, ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಮಹಮ್ಮದ್ ಮುಜಾವರ್ (16),

ಚಾಲಕನ ತಪ್ಪಿಗೆ ಕ್ಷಮೆ ಕೇಳಿದ ‘ನಮ್ಮ ಯಾತ್ರಿ ಆ್ಯಪ್’

‘ನಮ್ಮ ಯಾತ್ರಿ ಆ್ಯಪ್’ ಆಟೋ ಚಾಲಕ ಪ್ರಯಾಣಿಕ ಮಹಿಳೆಯನ್ನು ನಿಗದಿತ ಜಾಗದ ಬದಲು ಬೇರೆ ಕಡೆ ಕರೆದೊಯುವಾಗ ಆಕೆ ಆಟೊದಿಂದ ಜಿಗಿದು ಅಪಾಯದಿಂದ ಪಾರಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ‘ನಮ್ಮ ಯಾತ್ರಿ ಆ್ಯಪ್’ ಕ್ಷಮೆ ಯಾಚಿಸಿದೆ. ಗುರುವಾರ ರಾತ್ರಿ ಹೆಬ್ಬಾಳದ ವೀರಣ್ಣಪಾಳ್ಯ ಬಳಿ