Tuesday, November 10, 2026
Menu

ಇಸ್ರೋದಿಂದ 100ನೇ ಉಪಗ್ರಹ ಎನ್‌ವಿಎಸ್‌-02 ಯಶಸ್ವಿ ಉಡಾವಣೆ

ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ 100ನೇ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಂದು ಬೆಳಗ್ಗೆ 6:23ಕ್ಕೆ ಜಿಎಸ್‌ಎಲ್‌ವಿ-ಎಫ್‌ 15 ರಾಕೆಟ್ ಮೂಲಕ ಎನ್‌ವಿಎಸ್‌-02 ಉಪಗ್ರಹವನ್ನು ಉಡಾವಣೆ ಮಾಡಿದೆ. ಸ್ವದೇಶಿ ನಿರ್ಮಿತ ಕ್ರಯೋಜನಿಕ್‌ ಎಂಜಿನ್‌ ಹೊಂದಿರುವ ಜಿಯೋಸಿಂಕ್ರೋನಸ್‌ ಉಪಗ್ರಹ ಉಡ್ಡಯನ ವಾಹನ(ಜಿಎಸ್‌ಎಲ್‌ವಿ)ದ 17ನೇ ಉಡ್ಡಯನ ಇದಾಗಿದೆ. ಈ ಉಪಗ್ರಹವು ನ್ಯಾವಿಗೇಷನ್‌ ಸೆಟಲೈಟ್‌ ಎನ್‌ವಿಎಸ್‌-02ವನ್ನು ನಭಕ್ಕೆ ಹೊತ್ತೊಯ್ದಿದೆ. ಈ ಎನ್‌ವಿಎಸ್‌ ಸ್ಯಾಟಲೈಟ್‌ ಭಾರತದ ನ್ಯಾವಿಗೇಷನ್‌(ಸ್ವದೇಶಿ ಜಿಪಿಎಸ್‌) ಉಪಗ್ರಹಗಳ ಜಾಲದ ಎರಡನೇ ತಲೆಮಾರಿನ ಉಪಗ್ರಹ. ಇದು ಭಾರತೀಯ

ಮೊಬೈಲ್‌ ಗೀಳು ಬಾಲಕನ ಆತ್ಮಹತ್ಯೆಗೆ ನೂಕಿತಾ?

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲರಹಟ್ಟಿಯ ರತ್ನನಗರದಲ್ಲಿ ಮೊಬೈಲ್ ಗೀಳಿಗೆ ಒಳಗಾಗಿ 13 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧ್ರುವ ಆತ್ಮಹತ್ಯೆ ಮಾಡಿಕೊಂಡ ಬಾಲಕ. 9 ವರ್ಷದ ತಂಗಿಯ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ:  ಡಿಕೆಶಿ

ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ತಮಿಳುನಾಡಿನ ತಿರುಚಿರಾಪಲ್ಲಿಯಲ್ಲಿ ಸ್ಕೌಟ್ ಮತ್ತು ಗೈಡ್ಸ್ ನ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಬೇಡಿಕೆ ಈಡೇರಿಸದಿದ್ದರೆ ಮುಷ್ಕರದ ಎಚ್ಚರಿಕೆ ನೀಡಿದ ನಂದಿನಿ ನೌಕರರು

ಬಾಕಿ ವೇತನ ಬಿಡುಗಡೆ ಸೇರಿ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನೌಕರರು ಆಗ್ರಹಿಸುತ್ತಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿಯಿಂದ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ನೌಕರರ ಸಂಘವು ಈಗಾಗಲೇ ಆಡಳಿತ ಮಂಡಳಿಗೆ ಮನವಿ ಪತ್ರ ಸಲ್ಲಿಸಿದ್ದು, ಬೇಡಿಕೆಗಳನ್ನು ಈಡೇರಿಸಲು ಒಂದು

ಮುಂಬೈನಲ್ಲಿ ಇನ್ವೆಸ್ಟ್‌ ಕರ್ನಾಟಕ ರೋಡ್‌ಷೋ: ಉದ್ಯಮ ದಿಗ್ಗಜರ ಜೊತೆ ಸಚಿವ ಎಂ. ಬಿ. ಪಾಟೀಲ್‌ ಚರ್ಚೆ

ಬೆಂಗಳೂರಿನಲ್ಲಿ  ಮುಂದಿನ ತಿಂಗಳು (ಫೆಬ್ರವರಿ) ನಡೆಯಲಿರುವ ಇನ್ವೆಸ್ಟ್‌ ಕರ್ನಾಟಕ 2025 (ಜಾಗತಿಕ ಹೂಡಿಕೆದಾರರ ಸಮಾವೇಶ) -ದ ಪೂರ್ವಭಾವಿ ಸಿದ್ಧತೆಗಳ ಭಾಗವಾಗಿ ಮುಂಬೈನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಏರ್ಪಡಿಸಿದ್ದ ರೋಡ್‌ಷೋ ತನ್ನ ಉದ್ದೇಶ ಸಾಧನೆಯಲ್ಲಿ ಯಶಸ್ವಿಯಾಗಿದೆ. ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್‌

ಕೊಟ್ಟಾಗ ಅಪತ್ಬಾಂಧವ ಕೊಡೆಂದಾಗ ದೆವ್ವ!

ಮೈಕ್ರೋ ಫೈನಾನ್ಸ್‌ನಂತಹ ಹಣಕಾಸು ವ್ಯವಹಾರದ ಸಂಸ್ಥೆಗಳು ಬ್ಯಾಂಕ್‌ಗಳ ಮಾದರಿಯಲ್ಲಿ ಕ್ರೆಡಿಟ್ ಸ್ಕೋರ್ ಇರಬೇಕು, ಆದಾಯದ ಮೂಲ ತೋರಿಸಬೇಕು, ಸಾಲ ಬೇಕೆಂದ್ರೆ ವರ್ಷಗಟ್ಟಲೆ ಅಡ್ಡಾಡಬೇಕು, ಅವರಿವರಿಂದ ಸೆಕ್ಯೂರಿಟಿ, ಷ್ಯೂರಿಟಿ ಕೊಡಿಸಬೇಕು ಎಂದು ಜನರನ್ನು ಅಲೆದಾಡಿಸದೇ ಸುಲಭವಾಗಿ ಸಾಲ ಮಂಜೂರು ಮಾಡುವ ವಿಧಾನ ಅನುಸರಿಸಿದ್ದು

ಕೊಪ್ಪಳದಲ್ಲಿ ಅನಿಲ ಸೋರಿಕೆಗೆ ಕಾರ್ಮಿಕ ಬಲಿ , ಹಲವರು ಅಸ್ವಸ್ಥ

ಕೊಪ್ಪಳ ತಾಲೂಕಿನ ಅಲ್ಲಾನಗರದಲ್ಲಿ ಸ್ಟೀಲ್‌ ಫ್ಯಾಕ್ಟರಿಯೊಂದರಲ್ಲಿ ಅನಿಲ ಸೋರಿಕೆ ಉಂಟಾಗಿ ಕಾರ್ಖಾನೆಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದು,  ಎಂಟಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಅಲ್ಲಾನಗರದ ಹೊಸಪೇಟೆ ಇಸ್ಪಾತ್ ಸ್ಟೀಲ್ ಫ್ಯಾಕ್ಟರಿಯಲ್ಲಿ ಕಾರ್ಬನ್ ಮೊನಾಕ್ಸೈಡ್ ಟ್ಯಾಂಕ್ ಸೋರಿಕೆ ಉಂಟಾಗಿ ಕಾರ್ಮಿಕ ಮಾರುತಿ (24) ಉಸಿರುಗಟ್ಟಿ ಅಸು

ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾದ ಜಸ್ ಪ್ರೀತ್ ಬುಮ್ರಾ ಇತಿಹಾಸ!

ಭಾರತದ ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಈ ಪ್ರಶಸ್ತಿ ಗಳಿಸಿದ ಭಾರತದ ಮೊದಲ ಮಧ್ಯಮ ವೇಗಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 2024ನೇ ಸಾಲಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಜಸ್ ಪ್ರೀತ್

ಜಾತಿ ದೌರ್ಜನ್ಯ ಪ್ರಕರಣಗಳ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು,ಜನವರಿ 28 : ಜಾತಿ ದೌರ್ಜನ್ಯ ಪ್ರಕರಣಗಳ ಶಿಕ್ಷೆಯ ಪ್ರಮಾಣ ಶೇ. 10 ಕ್ಕೂ ಮೀರುವಂತೆ ಸೂಚನೆ ನೀಡಿರುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅನುಸಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ರಾಜ್ಯಮಟ್ಟದ ಜಾಗೃತ

ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆ ಬಿಲ್ ಸಿದ್ಧ: 3 ವರ್ಷ ಜೈಲು, 1 ಲಕ್ಷ ದಂಡ!

ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ದೌರ್ಜನ್ಯ ಹಾಗೂ ಸಾಲಗಾರರ ಆತ್ಮಹತ್ಯೆ ಪ್ರಕರಣಗಳ ತಡೆಗೆ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಕರಡು ವಿಧೇಯಕ ಸಿದ್ಧಪಡಿಸಿದ್ದು, ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರಿವಾಜ್ಞೆ ಹೊರಡಿಸುವ ಸಾಧ್ಯತೆ ಇದೆ. ಗುರುವಾರ